ಆ್ಯಪ್ನಗರ

ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆಯ MiG-29K ವಿಮಾನ ಪತನ, ಓರ್ವ ಪೈಲಟ್‌ ಮಿಸ್ಸಿಂಗ್‌!

ನವೆಂಬರ್‌ನಲ್ಲಿ ಮಿಗ್ -29ಕೆ ವಿಮಾನ ಗೋವಾದಲ್ಲಿ ಅಪಘಾತಕ್ಕೀಡಾಗಿತ್ತು, ಹಕ್ಕಿ ಬಂದು ಡಿಕ್ಕಿ ಹೊಡೆದ ಹಿನ್ನೆಲೆ ಅವಘಡ ಸಂಭವಿಸಿತ್ತು. ಇದೀಗ ಮತ್ತೊಂದು ಮಿಗ್ -29ಕೆ ವಿಮಾನ ಅರಬ್ಬಿ ಸಮುದ್ರದಲ್ಲಿ ಪತನಗೊಂಡಿದೆ. ಮಿಸ್ಸಿಂಗ್‌ ಆಗಿರುವ ಪೈಲಟ್‌ಗಾಗಿ ಶೋಧ ಕಾರ್ಯ ಆರಂಭವಾಗಿದೆ.

Vijaya Karnataka Web 27 Nov 2020, 12:09 pm
ಹೊಸದಿಲ್ಲಿ: ಭಾರತೀಯ ನೌಕಾಪಡೆ ಸೇರಿದ ಮಿಗ್ -29ಕೆ ತರಬೇತುದಾರ ವಿಮಾನ ಗುರುವಾರ ಸಂಜೆ ಪತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅರಬ್ಬಿ ಸಮುದ್ರದಲ್ಲಿ ತರಬೇತುದಾರ ವಿಮಾನ ಪತನವಾಗಿದ್ದು, ಓರ್ವ ಪೈಲಟ್ ಬಚಾವ್ ಆಗಿದ್ದು ಮತ್ತೋರ್ವ ಪೈಲಟ್‌ ನಾಪತ್ತೆಯಾಗಿದ್ದಾನೆ ಎಂದು ಭಾರತೀಯ ನೌಕಾಪಡೆ ಮಾಹಿತಿ ನೀಡಿದೆ.
Vijaya Karnataka Web Mig29
File image


ಅರೇಬಿಯನ್ ಸಮುದ್ರದಲ್ಲಿ ಐಎನ್‌ಎಸ್ ವಿಕ್ರಮಾದಿತ್ಯ ಎಂಬ ವಿಮಾನವಾಹಕ ನೌಕೆಯಿಂದ ಕಾರ್ಯನಿರ್ವಹಿಸುತ್ತಿರುವ ಮಿಗ್ -29 ಕೆ ತರಬೇತುದಾರ ವಿಮಾನವು ವೆಂಬರ್ 26 ರಂದು ಸಂಜೆ 5 ಗಂಟೆಗೆ ಅಪಘಾತಕ್ಕೀಡಾಗಿದ್ದು, ಈ ವೇಳೆ ಇದರಲ್ಲಿ ಒಟ್ಟು ಇಬ್ಬರು ಪೈಲಟ್‌ಗಳಿದ್ದರು ಎಂದು ನೌಕಾಪಡೆ ಮಾಹಿತಿ ನೀಡಿದೆ.

ಅಪಘಾತದ ವೇಳೆ ಒಬ್ಬ ಪೈಲಟ್‌ ಕೂಡಲೇ ತನ್ನನ್ನು ತಾನು ರಕ್ಷಿಸಿಕೊಂಡರೆ ಮತ್ತೊರ್ವ ನಾಪತ್ತೆಯಾಗಿದ್ದಾನೆ. ಈತನಿಗಾಗಿ ಇದೀಗ ಶೋಧ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದ್ದಾರೆ. ಘಟನೆ ಸಂಬಂಧ ನೌಕಾಪಡೆ ಅಪಘಾತದ ಕಾರಣವನ್ನು ಕಂಡುಹಿಡಿಯುವ ಉದ್ದೇಶದಿಂದ ಸಂಬಂಧಪಟ್ಟ ಅಧಿಕಾರಿಗಳು ತನಿಖೆಗೆ ಆದೇಶಿಸಿದೆ.

ರಾಜಧಾನಿಗೆ ಅನ್ನದಾತರ ಮುತ್ತಿಗೆ; ಕೆಂಪುಕೋಟೆ ನಗರದ ಖಾಕಿ ಕೋಟೆಗೆ ಕೃಷಿಕರ ಲಗ್ಗೆ

ಕಳೆದ ವರ್ಷ ನವೆಂಬರ್‌ನಲ್ಲಿ ಮಿಗ್ -29ಕೆ ವಿಮಾನ ಗೋವಾದಲ್ಲಿ ಅಪಘಾತಕ್ಕೀಡಾಗಿತ್ತು, ಹಕ್ಕಿ ಬಂದು ಡಿಕ್ಕಿ ಹೊಡೆದ ಹಿನ್ನೆಲೆ ಅವಘಡ ಸಂಭವಿಸಿತ್ತು. ನೌಕಾಪಡೆ ಮೂಲಗಳ ಪ್ರಕಾರ ಒಟ್ಟು 40 ಮಿಗ್ -29 ವಿಮಾನಗಳು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ