ಆ್ಯಪ್ನಗರ

ಚುನಾವಣೆ ಹೊಸ್ತಿಲಲ್ಲಿ ಪ.ಬಂಗಾಳದಲ್ಲಿ ಹೊಸ ರಾಜಕೀಯ ಪಕ್ಷ ಉದಯ: ಯಾರು ಈ ಸಿದ್ದಿಕಿ?

ಪಶ್ಚಿಮ ಬಂಗಾಳದ ಫರ್ಫುರಾ ಷರೀಫ್ ಅಹಲೆ ಸುನ್ನತುಲ್ ಜಮಾತ್ ಸಂಸ್ಥಾಪಕ ಪಿರ್‌ಜಾದಾ ಅಬ್ಬಾಸ್ ಸಿದ್ದಿಕಿ, ಇಂಡಿಯನ್ ಸೆಕ್ಯೂಲರ್ ಫ್ರಂಟ್(IFS) ಎಂಬ ನೂತನ ರಾಜಕೀಯ ಪಕ್ಷದ ಘೋಷಣೆ ಮಾಡಿದ್ದಾರೆ.

Vijaya Karnataka Web 21 Jan 2021, 5:26 pm
ಕೋಲ್ಕತ್ತಾ: ವಿಧಾನಸಭೆ ಚುನಾವಣೆ ಇನ್ನೇನು ಸಮೀಪಿಸುತ್ತಿರುವಾಗಲೇ, ಪಶ್ಚಿಮ ಬಂಗಾಳದಲ್ಲಿ ನೂತನ ಪಕ್ಷವೊಂದು ಉದಯವಾಗಿದೆ. ಇದು ಈಗಾಗಲೇ ಅಸ್ತಿತ್ವದಲ್ಲಿರುವ ರಾಜಕೀಯ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯೂ ಇದೆ.
Vijaya Karnataka Web Indian Secular Front
ಇಂಡಿಯನ್ ಸೆಕ್ಯೂಲರ್ ಫ್ರಂಟ್ ಪಕ್ಷದ ಸ್ಥಾಪನೆ


ಫರ್ಫುರಾ ಷರೀಫ್ ಅಹಲೆ ಸುನ್ನತುಲ್ ಜಮಾತ್ ಸಂಸ್ಥಾಪಕ ಪಿರ್‌ಜಾದಾ ಅಬ್ಬಾಸ್ ಸಿದ್ದಿಕಿ, ಇಂಡಿಯನ್ ಸೆಕ್ಯೂಲರ್ ಫ್ರಂಟ್(ISF) ಎಂಬ ನೂತನ ರಾಜಕೀಯ ಪಕ್ಷದ ಘೋಷಣೆ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಕಲುಷಿತ ರಾಜಕೀಯ ವಾತಾವರಣವನ್ನು ಸ್ವಚ್ಚಗೊಳಿಸುವ ಉದ್ದೇಶದೊಂದಿಗೆ ಹೊಸ ರಾಜಕೀಯ ಪಕ್ಷ ಸ್ಥಾಪಿಸಿರುವುದಾಗಿ ಪಿರ್‌ಜಾದಾ ಅಬ್ಬಾಸ್ ಸಿದ್ದಿಕಿ ಹೇಳಿದ್ದಾರೆ.

ಒವೈಸಿ ಸುತ್ತ ಅನುಮಾನದ ಹುತ್ತ: 'ಗಾಳಿಪಟ' ಕತ್ತರಿಸುವತ್ತ ಮಮತಾ ಚಿತ್ತ!

ಭಾರತದ ರಾಜಕಾರಣದಲ್ಲಿ ಜಾತ್ಯಾತೀತ ತತ್ವಗಳು ಮಾಯವಾಗುತ್ತಿದ್ದು, ಈ ವಿಷಗಾಳಿ ಪಶ್ಚಿಮ ಬಂಗಾಳಕ್ಕೂ ಲಗ್ಗೆ ಇಟ್ಟಿದೆ. ರಾಜ್ಯದ ಕೋಮು ಸಾಮರಸ್ಯವನ್ನು ಕಾಪಾಡುವ ದೃಷ್ಟಿಯಿಂದ ಇಂಡಿಯನ್ ಸೆಕ್ಯೂಲರ್ ಫ್ರಂಟ್(ISF) ಪಕ್ಷವನ್ನು ಸ್ಥಾಪಿಸಲಾಗಿದೆ ಎಂದು ಸಿದ್ದಿಕಿ ಈ ವೇಳೆ ನುಡಿದರು.


ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಚುನಾವಣೆಯಲ್ಲಿ ಸಿದ್ದಿಕಿ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಅಂದರೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಹಾಗೂ ಐಎಸ್‌ಎಫ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿಯುವುದು ಖಚಿತವಾಗಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಲೆಯನ್ನು ಎದುರಿಸುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ, ಒವೈಸಿ ಹಾಗೂ ಸಿದ್ದಿಕಿ ಮೈತ್ರಿಕೂಟವನ್ನು ಎದುರಿಸಬೇಕಾಗಿ ಬಂದಿದೆ. ಅಲ್ಪಸಂಖ್ಯಾತ ಮತಗಳು ವಿಭಜನೆಯಾಗುವ ಸಾಧ್ಯತೆ ಇರುವುದರಿಂದ ಮಮತಾ ಅವರ ಚಿಂತೆ ಮತ್ತಷ್ಟು ಹೆಚ್ಚಿದೆ.

ಮತ ವಿಭಜನೆಗೆ ಹೈದರಾಬಾದ್ ಮೂಲದ ಪಕ್ಷದಿಂದ ಬಿಜೆಪಿಗೆ ಸಹಾಯ: ಮಮತಾ ಇಶಾರೆ ಒವೈಸಿಯತ್ತ!

ಇನ್ನು ಜಾತ್ಯಾತೀತ ಮತಗಳ ಮೇಲೆ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಹಾಗೂ ಎಡಪಕ್ಷಗಳ ಮೈತ್ರಿಕೂಟದ ಮೇಲೂ ಒವೈಸಿ-ಸಿದ್ದಿಕಿ ನಡುವಿನ ಮೈತ್ರಿ ಮುಳ್ಳಾಗಿ ಪರಿಣಮಿಸುವ ಸಾದ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ