ಆ್ಯಪ್ನಗರ

ಬಂದಿದೆ ಪ್ಲಾಸ್ಟಿಕ್‌ ಕ್ಯಾಬೇಜ್‌

ನೋಡಲು ತಾಜಾ ಅನಿಸುವ ಕೃತಕ ತರಕಾರಿ ಮತ್ತು ಹಣ್ಣುಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಹಾಕಿವೆ.

ವಿಕ ಸುದ್ದಿಲೋಕ 9 May 2017, 7:57 am

ಹೊಸದಿಲ್ಲಿ : ನೋಡಲು ತಾಜಾ ಅನಿಸುವ ಕೃತಕ ತರಕಾರಿ ಮತ್ತು ಹಣ್ಣುಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಹಾಕಿವೆ. ದಿಲ್ಲಿಯ ಮಹಿಳೆ ತಾವು ತಂದಿರುವ ಕ್ಯಾಬೆಜ್‌ನ್ನು (ಎಲೆಕೋಸು) ಕತ್ತರಿಸಲು ಸ್ವಲ್ಪ ಕಷ್ಟವಾದಾಗ ಅನುಮಾನಗೊಂಡು ಅದನ್ನು ಸುಡಲು ಪ್ರಯತ್ನಿಸಿದ್ದಾರೆ ಆದರೆ ಸಾಧ್ಯವಾಗಿಲ್ಲ.

Vijaya Karnataka Web plastic cabage to market
ಬಂದಿದೆ ಪ್ಲಾಸ್ಟಿಕ್‌ ಕ್ಯಾಬೇಜ್‌


ತರಕಾರಿ ಸುಟ್ಟಲ್ಲಿ ಅದು ನೈಸರ್ಗಿಕ ಇಲ್ಲವಾದರೆ ಕೃತಕ ವಸ್ತುವಿನಿಂದ ಮಾಡಲಾಗಿರುತ್ತದೆ ಎಂಬುದನ್ನು ಯುಟ್ಯೂಬ್‌ನಿಂದ ತಿಳಿದುಕೊಂಡಿದ್ದ ಮಹಿಳೆ, ಎಲೆಕೋಸನ್ನು ಸುಡಲು ಪ್ರಯತ್ನಿಸಿದಾಗ ಅದು ಪ್ಲಾಸ್ಟಿಕ್‌ ತರಕಾರಿ ಎಂಬುದು ತಿಳಿದಿದ್ದು, ಫೇಸ್‌ಬುಕ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ಸೂಪರ್‌ ಮಾರ್ಕೆಟ್‌ಗಳಿಂದ ಖರೀದಿಸುವ ತರಕಾರಿ ಮತ್ತು ಹಣ್ಣುಗಳ ಕುರಿತು ಹುಷಾರಾಗಿರಿ. ಅವುಗಳು ನೋಡಲು ಸುಂದರವಾಗಿ ಕಂಡರೂ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಮಹಿಳೆ ಸಂದೇಶ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ