ಆ್ಯಪ್ನಗರ

ಬಿಹಾರದಲ್ಲಿ ಐತಿಹಾಸಿಕ ಕೋಸಿ ರೈಲು ಮಹಾಸೇತುವೆಯನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಐತಿಹಾಸಿಕ ಕೋಸಿ ರೈಲು ಮಹಾ ಸೇತುವೆಯು ಜೈನ ಮತ್ತು ಬೌದ್ಧ ಪುಣ್ಯ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವುದರೊಂದಿಗೆ ಬಿಹಾರದಲ್ಲಿ ಪ್ರವಾಸೋದ್ಯಮ ಉತ್ತೇಜನಗೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಲಾಗ್ತಿದೆ.

Vijaya Karnataka Web 18 Sep 2020, 4:24 pm
ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣೆ ಸಮೀಪದಲ್ಲಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
Vijaya Karnataka Web Kosi megha rail


ಐತಿಹಾಸಿಕ ಕೋಸಿ ರೈಲು ಮಹಾ ಸೇತುವೆಯನ್ನು ಶುಕ್ರವಾರ ಲೋಕಾರ್ಪಣೆ ಮಾಡಿರುವ ಪ್ರಧಾನಿ ಮೋದಿ ಜೊತೆಗೆ ನೂತನ ರೈಲು ಮಾರ್ಗ ಯೋಜನೆ ಮತ್ತು ವಿದ್ಯುದ್ದೀಕರಣ ಯೋಜನೆಗಳಿಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಅಲ್ಲದೇ ಈ ಯೋಜನೆಗಳು ಬಿಹಾರದ ರೈಲ್ವೆ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದರೊಂದಿಗೆ ಪಶ್ಚಿಮ ಬಂಗಾಳ ಮತ್ತು ಪಶ್ಚಿಮ ಭಾರತಕ್ಕೆ ಸಂಪರ್ಕ ಸಾಧಿಸುವಂತೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರಕಾರದ ಕೃಷಿ ಮಸೂದೆಗಳು ರೈತರ ಪರವೋ? ವಿರುದ್ಧವೋ? ಪ್ರತಿಭಟನೆ ಏಕೆ?

ಕೋಸಿ ರೈಲು ಮಹಾ ಸೇತುವೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ ಆರು ವರ್ಷಗಳಲ್ಲಿ ನವಭಾರತದ ಕನಸು ಮತ್ತು ಆತ್ಮನಿರ್ಭರ್ ಭಾರತದ ನಿರೀಕ್ಷೆಯಲ್ಲಿ ಭಾರತೀಯ ರೈಲ್ವೆ ಇಲಾಖೆಯ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮೇಡ್ ಇನ್ ಇಂಡಿಯಾ ರೈಲುಗಳು ಈ ವ್ಯವಸ್ಥೆಯ ಭಾಗವಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರದಲ್ಲಿದ್ದಾಗ 2004ರಲ್ಲಿ ಕೋಸಿ ರೈಲು ಮಹಾ ಸೇತುವೆಗೆ ಶಂಕು ಸ್ಥಾಪನೆ ಮಾಡಲಾಗಿತ್ತು. 2004ರ ನಂತರದ ಸರ್ಕಾರ ಮಾಡಿದ ರೀತಿಯಲ್ಲಿಯೇ ಈ ಕೆಲಸ ಮಾಡಿದ್ದರೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿರಲಿಲ್ಲ ಎಂದು ಮೋದಿ ಅಭಿಪ್ರಾಯಪಟ್ಟರು.

ದಶಕಗಳಿಂದ ಅಧಿಕಾರ ನಡೆಸಿದವರು ಈಗ ರೈತರ ದಾರಿ ತಪ್ಪಿಸುತ್ತಿದ್ದಾರೆ: ಕೃಷಿ ಮಸೂದೆ ಬ

ನಂತರ ಮಾತನಾಡಿದ ರೈಲ್ವೆ ಸಚಿವ ಪೀಯುಷ್ ಗೋಯಲ್, ಕೋಸಿ ರೈಲು ಮಹಾ ಸೇತುವೆಯು ಕೇವಲ ಎರಡು ಸ್ಥಳಗಳ ಸಂಪರ್ಕ ಕಲ್ಪಿಸುವುದಲ್ಲಿದೆ ಬಿಹಾರದ ಆರ್ಥಿಕ ಬೆಳವಣಿಗೆಗಳಿಗೂ ಸಹಾಯ ಮಾಡಲಿದೆ. ಇದು ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಹಾಯವಾಗಲಿದೆ ಎಂದು ಹೇಳಿದರು. ಇತ್ತ ಬಿಹಾರದ ಅಭಿವೃದ್ಧಿಗಾಗಿ ಶ್ರಮಿಸಿದ ಪ್ರಧಾನಿ ಮೋದಿ ಹಾಗೂ ಪೀಯುಷ್ ಗೋಯಲ್ ಅವರಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.

ಬಿಹಾರ ಚುನಾವಣೆ: 115 ಸ್ಥಾನಗಳಿಗೆ ಬೇಡಿಕೆಯಿಟ್ಟ ಜೆಡಿಯು, ಲೋಕಸಭೆಯಂತೆ ಸಮಾನ ಹಂಚಿಕೆ ಎಂದ ಬಿಜೆಪಿ

ಐತಿಹಾಸಿಕ ಕೋಸಿ ರೈಲು ಮಹಾ ಸೇತುವೆಯು ಜೈನ ಮತ್ತು ಬೌದ್ಧ ಪುಣ್ಯ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವುದರೊಂದಿಗೆ ಬಿಹಾರದಲ್ಲಿ ಪ್ರವಾಸೋದ್ಯಮ ಉತ್ತೇಜನಗೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಲಾಗ್ತಿದೆ. ಈ ಸೇತುವೆಗೆ 2003-04ರಲ್ಲಿ ಚಾಲನೆ ನೀಡಲಾಗಿತ್ತು. ಸೇತುವೆಯು ಒಂದು ಕಿ.ಮೀ ಉದ್ದವಿದ್ದು, ಸುಮಾರು 516 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ