ಆ್ಯಪ್ನಗರ

ಮೋದಿ ವಿರುದ್ಧ ಮುಂದುವರಿದ ರಾಹುಲ್‌ ವಾಗ್ದಾಳಿ

ಸಂಸತ್ತಿನಲ್ಲಿ ತಮ್ಮ 'ರಫೇಲ್‌ ತೆರೆದ ಪುಸ್ತಕ ಪರೀಕ್ಷೆ' ಎದುರಿಸುವುದನ್ನು ಬಿಟ್ಟು ಪ್ರಧಾನಿ ಮೋದಿಯವರು ಪಂಜಾಬಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಹೋಗಿದ್ದಾರೆ ಎಂದು ಗುರುವಾರ ಟ್ವೀಟ್‌ ಮೂಲಕ ಅಣಕವಾಡಿದ್ದಾರೆ.

Vijaya Karnataka 4 Jan 2019, 5:00 am
ಹೊಸದಿಲ್ಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಕೇಂದ್ರ ಸರಕಾರ ವಿರುದ್ಧದ ವಾಗ್ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಈ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಲಾಯನವಾದ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
Vijaya Karnataka Web rahul


ಸಂಸತ್ತಿನಲ್ಲಿ ತಮ್ಮ 'ರಫೇಲ್‌ ತೆರೆದ ಪುಸ್ತಕ ಪರೀಕ್ಷೆ' ಎದುರಿಸುವುದನ್ನು ಬಿಟ್ಟು ಪ್ರಧಾನಿ ಮೋದಿಯವರು ಪಂಜಾಬಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಹೋಗಿದ್ದಾರೆ ಎಂದು ಗುರುವಾರ ಟ್ವೀಟ್‌ ಮೂಲಕ ಅಣಕವಾಡಿದ್ದಾರೆ.

ರಫೇಲ್‌ ವಿಷಯದಲ್ಲಿ ಮೋದಿ ಬುಧವಾರ ಸಂಸತ್ತಿನಲ್ಲಿ ತೆರೆದ ಪುಸ್ತಕ ಪರೀಕ್ಷೆ ಎದುರಿಸಲಿದ್ದಾರೆ. ಆ ಪರೀಕ್ಷೆ ಬರೆಯಲು ಖುದ್ದು ಅವರೇ ಬರುತ್ತಾರೋ ಅಥವಾ ಪ್ರತಿನಿಧಿಯನ್ನು ಕಳಿಸುತ್ತಾರೋ ಎನ್ನುವ ವ್ಯಂಗ್ಯಮಿಶ್ರಿತ ಪ್ರಶ್ನೆ ಹಾಕಿದ್ದ ರಾಹುಲ್‌, ಶುಕ್ರವಾರ ಅದೇ ಸರಣಿ ಮುಂದುವರಿಸಿದರು. ಶುಕ್ರವಾರ ವಿಜ್ಞಾನ ಸಮಾವೇಶ ಉದ್ಘಾಟನೆಗೆ ಪಂಜಾಬಿಗೆ ತೆರಳಿದ್ದ ಪ್ರಧಾನಿಯನ್ನು ಗುರಿಯಾಗಿಟ್ಟುಕೊಂಡು ಮತ್ತಷ್ಟು ಕೆಣಕಿದರು.

ರೈತ ಕಾಳಜಿ: ರೈತರ ಸಮಸ್ಯೆಗೆ ಸಂಬಂಧಿಸಿದ ವಿಷಯದಲ್ಲಿ ಕೇಂದ್ರ ಕೃಷಿ ಸಚಿವರು ನೀಡಿದ ಹೇಳಿಕೆ ಆಧಾರವಾಗಿಟ್ಟುಕೊಂಡು ರಾಹುಲ್‌, ಪ್ರಧಾನಿ ವಿರುದ್ಧ ಮತ್ತೊಂದು ಸುತ್ತಿನ ವಾಗ್ದಾಳಿ ನಡೆಸಿದರು. ''ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದೇ ಹೋದರೆ 2050ರ ವೇಳೆಗೆ ದೇಶದ ಗೋಧಿ ಉತ್ಪಾದನೆ ಪ್ರಮಾಣದಲ್ಲಿ ಶೇ.23ರಷ್ಟು ಕುಸಿತ ಉಂಟಾಗಲಿದೆ ಎಂದು ಕೃಷಿ ಸಚಿವರು ಎಚ್ಚರಿಸಿದ್ದಾರೆ. ಈ ಎಚ್ಚರಿಕೆಯ ನುಡಿಗಳ ಬಗ್ಗೆ ಪ್ರಧಾನಿ ಏನು ಕ್ರಮ ಕೈಗೊಂಡಿದ್ದಾರೆ?,'' ಎಂದು ಪ್ರಶ್ನಿಸಿರುವ ಅವರು, ದೇಶದ ರೈತರಿಗೆ ವಂಚನೆಯಾಗಲು ನಾವು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ