ಆ್ಯಪ್ನಗರ

ಅಯೋಧ್ಯೆ ವಿಚಾರದಲ್ಲಿ ದಶಕಗಳ ಬೇಜವಾಬ್ದಾರಿತನ, ಬಿಜೆಪಿಯಿಂದಲೇ ಮುಕ್ತಿ: 'ಕೈ'ಯನ್ನು ಟೀಕಿಸಿದ ಮೋದಿ

ಅಯೋಧ್ಯೆ ವಿವಾದ, 370ನೇ ವಿಧಿ ರದ್ದು ಸೇರಿದಂತೆ ಹಲವು ಮಹತ್ವದ ಪ್ರಕರಣಗಳಲ್ಲಿ ಕಾಂಗ್ರೆಸ್ ದ್ವಂದ್ವ ಹಾಗೂ ಜನ ವಿರೋಧಿ ನಿಲುವು ತಳೆಯಿತು.ಈಗ ಜಾರ್ಖಂಡ್‌ನಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ ಎಂದು ಮೋದಿ ಟೀಕಿಸಿದ್ದಾರೆ.

Vijaya Karnataka Web 4 Dec 2019, 9:45 am
ಜೆಮ್‌ಷೆಡ್‌ಪುರ: ಅಯೋಧ್ಯೆ ವಿವಾದ, 370ನೇ ವಿಧಿ ರದ್ದು ಸೇರಿದಂತೆ ಹಲವು ಮಹತ್ವದ ಪ್ರಕರಣಗಳಲ್ಲಿ ದ್ವಂದ್ವ ಹಾಗೂ ಜನ ವಿರೋಧಿ ನಿಲುವು ತಳೆದ ಕಾಂಗ್ರೆಸ್‌ ಈಗ ಜಾರ್ಖಂಡ್‌ನಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
Vijaya Karnataka Web Prime Minister Narendra Modi


''ಸ್ವಾತಂತ್ರ್ಯ ಬಂದ ದಿನದಿಂದ ಇಲ್ಲಿಯ­ವರೆಗೆ 370ನೇ ವಿಧಿ ಬಗ್ಗೆ ಒಣ ಚರ್ಚೆ ನಡೆದವು. ಅದೊಂದು ಸಂವಿಧಾನದ ತಾತ್ಕಾ­ಲಿಕ ವಿಧಿಯಾಗಿತ್ತು. ಆದರೆ ಉದಾ­ಸೀನದಿಂದ ಇಲ್ಲಿಯವರೆಗೆ ಉಳಿಸಿ, ಅಭಿವೃದ್ಧಿ ವಿರೋಧಿ ನಡೆ ಪ್ರದರ್ಶಿಸಲಾ­ಯಿತು. ಈಗ ಆ ವಿಧಿ ತೊಲಗಿದೆ. ದೇಶದ ನೆಮ್ಮದಿ ಹೆಚ್ಚಿದೆ,'' ಎಂದು ಬಿಜೆಪಿ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಹೇಳಿದರು.

''ರಾಮ ಜನ್ಮ­ಭೂಮಿ ವಿಚಾರದಲ್ಲಿಯೂ ಕಾಂಗ್ರೆಸ್‌ ದಶಕಗಳ ಬೇಜವಾಬ್ದಾರಿತನ ಪ್ರದರ್ಶಿ­ಸಿತು. ಕೊನೆಗೆ ಈ ಮಹತ್ವದ ನಿರ್ಧಾರ ಪ್ರಕಟಗೊಳ್ಳಲು ಬಿಜೆಪಿಯೇ ಬರ ಬೇಕಾ­ಯಿತು. ಹಿಂದೆ ಈ ವಿಷಯದಲ್ಲಿ ನಿರ್ಣಯ ಕೈಗೊಳ್ಳಲು ಕಾಂಗ್ರೆಸ್‌ ಅಡ್ಡಿ ಪಡಿಸಿತ್ತು. ಇದು ವೋಟ್‌ಬ್ಯಾಂಕ್‌ ರಾಜ­ಕೀಯವಲ್ಲದೇ ಮತ್ತೇನು?,'' ಎಂದು ಪ್ರಧಾನಿ ಛೇಡಿಸಿದರು.

ಜಾರ್ಖಂಡ್‌ ಸಿಎಂ ವಿರುದ್ಧ ಬಂಡಾಯ ನಾಯಕನ ಸೆಡ್ಡು, ರಘುಬರದಾಸ್‌ ಗೆ ಕಳವಳ

ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಕೊಳೆಯಲ್ಲಿ ಕಳೆದು ಹೋಗಿರುವ ಕಾಂಗ್ರೆಸ್‌ಗೆ ರಾಜ್ಯದ ಅಧಿಕಾರ ಸೂತ್ರ ನೀಡಿದರೆ ಅಧ್ವಾನ ಕಟ್ಟಿಟ್ಟ ಬುತ್ತಿ ಎಂದು ಜಾರ್ಖಂಡ್‌ ಮತದಾರರನ್ನು ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ