ಆ್ಯಪ್ನಗರ

ಅಭಿವೃದ್ಧಿ, ನಂಬಿಕೆ, ದೊಡ್ಡ ಬದಲಾವಣೆ: 100 ದಿನ ಪೂರೈಸಿದ ಸರ್ಕಾರಕ್ಕೆ ಮೋದಿ ಮೂರಕ್ಷರ!

ನೂರು ದಿನ ಪೂರೈಸಿದ ತಮ್ಮ ಸರ್ಕಾರಕ್ಕೆ ಪ್ರಧಾನಿ ಮೋದಿ ಮೂರಕ್ಷರದ ವಿವರಣೆ ನೀಡಿದ್ದಾರೆ. 2ನೇ ಅವಧಿಗೆ ಅಧಿಕಾರ ಹಿಡಿದ ಎನ್‌ಡಿಎ ಸರ್ಕಾರ, ಕಳೆದ 100 ದಿನಗಳಲ್ಲಿ ಮಾಡಿದ್ದೇನು ಎಂದು ದೇಶದ ಜನತೆಗೆ ನಮೋ ವಿವರಿಸಿದ್ದಾರೆ.

TIMESOFINDIA.COM 8 Sep 2019, 3:28 pm
ಹೊಸ ದಿಲ್ಲಿ: ಅಭಿವೃದ್ಧಿ, ನಂಬಿಕೆ ಹಾಗೂ ದೊಡ್ಡ ಮಟ್ಟದ ಬದಲಾವಣೆಗಳಿಗೆ ಈ ನೂರು ದಿನಗಳು ಸಾಕ್ಷಿಯಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ತನ್ನ 2ನೇ ಅವಧಿಯ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಮೋದಿ ತಮ್ಮ ಮೂರಕ್ಷರದ ವಿವರಣೆ ನೀಡಿದ್ದಾರೆ. ಹರ್ಯಾಣದ ರೋಹ್ಟಕ್ ನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ಈ ನೂರು ದಿನಗಳಲ್ಲಿ ನಾವು ತೆಗೆದುಕೊಂಡ ದೊಡ್ಡ ಮಟ್ಟದ ಎಲ್ಲಾ ನಿರ್ಧಾರಗಳಿಗೂ ಈ ದೇಶದ 130 ಕೋಟಿ ಜನರೇ ಸ್ಫೂರ್ತಿ ಎಂದಿದ್ಧಾರೆ.
Vijaya Karnataka Web modi 1


ನಮ್ಮ ಸರ್ಕಾರ 100 ದಿನಗಳಲ್ಲಿ ಕೈಗೊಂಡಿರುವ ಬಹುತೇಕ ದಿಟ್ಟ ನಿರ್ಧಾರಗಳು ಮುಂದಿನ ದಿನಗಳಲ್ಲಿ ದೇಶಕ್ಕೆ ಲಾಭದಾಯಕವಾಗಲಿವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಅಂಗೀಕಾರ ಪಡೆದಷ್ಟು ಮಸೂದೆಗಳು, ಆದಷ್ಟು ಕೆಲಸಗಳು ಕಳೆದ 60 ವರ್ಷಗಳಲ್ಲೇ ಆಗಿರಲಿಲ್ಲ ಎಂದು ಮೋದಿ ಹೇಳಿದ್ದಾರೆ. ಸಂಸತ್ ಅಧಿವೇಶದಲ್ಲಿ ಮಸೂದೆಗಳು ಬೇಗನೇ ಅಂಗೀಕಾರ ಪಡೆಯಲು ಸಹಕರಿಸಿದ ಎಲ್ಲ ರಾಜಕೀಯ ಪಕ್ಷಗಳಿಗೂ ಮೋದಿ ಧನ್ಯವಾದ ಅರ್ಪಿಸಿದ್ದಾರೆ.

100 ದಿನ ಪೂರೈಸಿದ ಮೋದಿ ಸರ್ಕಾರ್ 2.0: ಸಚಿವರ ರಿಪೋರ್ಟ್ ಕಾರ್ಡ್ ರೆಡಿ!

ಪ್ರಧಾನಮಂತ್ರಿ ನರೇಂದ್ರ ಮೋದಿ ಸಾರಥ್ಯದ 2ನೇ ಅವಧಿಯ ಕೇಂದ್ರದ ಎನ್‌ಡಿಎ ಸರ್ಕಾರ, ನೂರು ದಿನ ಪೂರೈಸಿರುವ ಹಿನ್ನೆಲೆಯಲ್ಲಿ, ದೇಶದ ಎಲ್ಲ ಪ್ರಮುಖ ನಗರಗಳಲ್ಲೂ ಮೋದಿ ಟೀಂ ಸರಣಿ ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಿದೆ. ಈ ನೂರು ದಿನಗಳ ಅವಧಿಯಲ್ಲಿ ಸಾಧಿಸಿದ್ದೇನು? ಸಾಧಿಸಬೇಕಾದ್ದು ಏನು? ಸವಾಲುಗಳೇನು? ಎಂಬೆಲ್ಲಾ ಮಾಹಿತಿಗಳನ್ನು ದೇಶದ ಜನರ ಮುಂದಿಡಲು ‘ಮೋದಿ ಸರ್ಕಾರ್’ ತೀರ್ಮಾನಿಸಿದೆ.

ಮೋದಿ ಸರಕಾರದ 100 ದಿನ: ದಬ್ಬಾಳಿಕೆ, ಗೊಂದಲ, ಅರಾಜಕತೆಯದೇ ದರ್ಬಾರು ಎಂದ ಕಾಂಗ್ರೆಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ