ಆ್ಯಪ್ನಗರ

5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ ಗುರಿಯ ಸವಾಲು ಕಠಿಣ, ಅಸಾಧ್ಯವೇನಲ್ಲ: ಪ್ರಧಾನಿ ಮೋದಿ

'ಸಬ್‌ ಕಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್‌' ಮಂತ್ರವನ್ನು ಸಾಕಾರಗೊಳಿಸುವಲ್ಲಿ ನೀತಿ ಆಯೋಗದ ಪಾತ್ರ ಮಹತ್ವದ್ದಾಗಿದೆ ಎಂದು ಮೋದಿ ಹೇಳಿದರು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬವಾದ ಇತ್ತೀಚಿನ ಸಾರ್ವತ್ರಿಕ ಚುನಾವಣೆಯನ್ನು ನೆನಪಿಸುತ್ತ, ಇನ್ನು ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಿದೆ ಎಂದು ಮೋದಿ ಕರೆ ನೀಡಿದರು.

Vijaya Karnataka Web 15 Jun 2019, 6:24 pm
ಹೊಸದಿಲ್ಲಿ: ಭಾರತವನ್ನು 2024ರ ವೇಳೆಗೆ 5 ಟ್ರಿಲಿಯನ್‌ ಡಾಲರ್‌ (5 ಲಕ್ಷ ಕೋಟಿ) ಗಾತ್ರದ ಅರ್ಥವ್ಯವಸ್ಥೆಯಾಗಿ ಅಭಿವೃದ್ಧಿಪಡಿಸುವ ಗುರಿ 'ಸವಾಲಿನದ್ದಾಗಿದೆ, ಆದರೆ ಅಸಾಧ್ಯವೇನಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರಾಜ್ಯಗಳು ಮತ್ತಷ್ಟು ತೀವ್ರ ಪ್ರಯತ್ನ ನಡೆಸಿದರೆ ಈ ಗುರಿ ಅಸಾಧ್ಯವೇನೂ ಅಲ್ಲ ಎಂದು ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಪ್ರಧಾನಿ ಮೋದಿ ನುಡಿದರು.
Vijaya Karnataka Web PM Modi- NITI Ayog Meet


ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳ) ಮತ್ತು ಕೆ ಚಂದ್ರಶೇಖರ ರಾವ್ (ತೆಲಂಗಾಣ) ಹೊರತುಪಡಿಸಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದಾರೆ.

'ಸಬ್‌ ಕಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್‌' ಮಂತ್ರವನ್ನು ಸಾಕಾರಗೊಳಿಸುವಲ್ಲಿ ನೀತಿ ಆಯೋಗದ ಪಾತ್ರ ಮಹತ್ವದ್ದಾಗಿದೆ ಎಂದು ಮೋದಿ ಹೇಳಿದರು.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬವಾದ ಇತ್ತೀಚಿನ ಸಾರ್ವತ್ರಿಕ ಚುನಾವಣೆಯನ್ನು ನೆನಪಿಸುತ್ತ, ಇನ್ನು ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಿದೆ ಎಂದು ಮೋದಿ ಕರೆ ನೀಡಿದರು.

ಬಡತನ, ನಿರುದ್ಯೋಗ, ಬರ, ನೆರೆ, ಮಾಲಿನ್ಯ, ಭ್ರಷ್ಟಾಚಾರ ಮತ್ತು ಹಿಂಸಾಚಾರದ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಿದೆ ಎಂದು ಅವರು ನುಡಿದರು.

2024ರ ವೇಳೆಗೆ 5 ಟ್ರಿಲಿಯನ್‌ ಡಾಲರ್‌ (5 ಲಕ್ಷ ಕೋಟಿ) ಡಾಲರ್‌ಗಳ ಗಾತ್ರಕ್ಕೆ ಬೆಳೆಸುವ ಗುರಿ ಬಹಳ ಸವಾಲಿನದ್ದಾಗಿದೆ; ಆದರೆ ರಾಜ್ಯಗಳು ತಮ್ಮ ಸಂಪೂರ್ಣ ಶಕ್ತಿ ಬಳಸಿ ಜಿಲ್ಲಾ ಮಟ್ಟದಲ್ಲಿ ಜಿಡಿಪಿ ವೃದ್ಧಿಗೆ ಗಮನ ಕೇಂದ್ರೀಕರಿಸಿದಲ್ಲಿ ಅಸಾಧ್ಯವೇನೂ ಅಲ್ಲ ಎಂದು ಮೋದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ನೀತಿ ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಪಾಲ್ಗೊಂಡರು.


ದೇಶದ ಹಲವು ಭಾಗಗಳಲ್ಲಿ ಬರಗಾಲವಿದ್ದು 'ಹನಿ ನೀರು, ಹೆಚ್ಚಿನ ಪೈರು' (per drop, more crop) ನೀತಿ ಅನುಸರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಕರೆ ನೀಡಿದರು.

ಹೊಸದಾಗಿ ರಚಿಸಲಾದ ಜಲಶಕ್ತಿ ಸಚಿವಾಲಯ ಜಲಸಂಪನ್ಮೂಲದ ಏಕೀಕೃತ ಮತ್ತು ವವಸ್ಥಿತ ಬಳಕೆಗೆ ನೆರವಾಗಲಿದೆ. ಅಲ್ಲದೆ ರಾಜ್ಯಗಳು ಕೂಡ ಜಲಸಂಪನ್ಮೂಲಗಳ ರಕ್ಷಣೆ ಹಾಗೂ ನಿರ್ವಹಣೆಗೆ ಏಕೀಕೃತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಮೋದಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ