ಆ್ಯಪ್ನಗರ

ಟ್ರಂಪ್‌ರನ್ನು ಹಿಂದಿಕ್ಕಿದ ಮೋದಿ, ಜಾಲತಾಣದಲ್ಲಿ ಹೆಚ್ಚು ಫಾಲೋವರ್ಸ್‌

ಸಾಮಾಜಿಕ ಜಾಲತಾಣದಲ್ಲಿ ವಿಶ್ವಾದ್ಯಂತ ಅತಿಹೆಚ್ಚು ಫಾಲೋವರ್ಸ್‌ ಹೊಂದುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಿಂದಿಕ್ಕಿದ್ದಾರೆ. ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂಗಳಲ್ಲಿ ಒಟ್ಟು 11 ಕೋಟಿಗೂ ಅಧಿಕ ಫಾಲೋವರ್ಸ್‌ಗಳನ್ನು ಪ್ರಪಂಚದಾದ್ಯಂತ ಮೋದಿ ಹೊಂದಿದ್ದಾರೆ ಎಂದು ಡಿಜಿಟಲ್‌ ಮಾರ್ಕೆಟಿಂಗ್‌ ಕಂಪನಿ ಎಸ್‌ಇಎಮ್‌ ರಶ್‌ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

Vijaya Karnataka 8 May 2019, 5:00 am
ಹೊಸದಿಲ್ಲಿ : ಸಾಮಾಜಿಕ ಜಾಲತಾಣದಲ್ಲಿ ವಿಶ್ವಾದ್ಯಂತ ಅತಿಹೆಚ್ಚು ಫಾಲೋವರ್ಸ್‌ ಹೊಂದುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಿಂದಿಕ್ಕಿದ್ದಾರೆ. ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂಗಳಲ್ಲಿ ಒಟ್ಟು 11 ಕೋಟಿಗೂ ಅಧಿಕ ಫಾಲೋವರ್ಸ್‌ಗಳನ್ನು ಪ್ರಪಂಚದಾದ್ಯಂತ ಮೋದಿ ಹೊಂದಿದ್ದಾರೆ ಎಂದು ಡಿಜಿಟಲ್‌ ಮಾರ್ಕೆಟಿಂಗ್‌ ಕಂಪನಿ ಎಸ್‌ಇಎಮ್‌ ರಶ್‌ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಫೇಸ್‌ಬುಕ್‌ನಲ್ಲಿ 4.3 ಕೋಟಿ, ಟ್ವಿಟ್ಟರ್‌ನಲ್ಲಿ 4.7 ಕೋಟಿ ಹಾಗೂ ಇನ್‌ಸ್ಟಾಗ್ರಾಂನಲ್ಲಿ 2 ಕೋಟಿ ಫಾಲೋವರ್ಸ್‌ ಪ್ರಧಾನಿ ಮೋದಿ ಅವರಿಗೆ ಇದ್ದಾರೆ. ಟ್ರಂಪ್‌ಗೆ ಒಟ್ಟು 9.6 ಕೋಟಿ ಫಾಲೋವರ್ಸ್‌ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಾದಂತ ಅತಿಹೆಚ್ಚು ಸಂಖ್ಯೆಯ ಅತಿಫಾಲೋವರ್ಸ್‌ಗಳನ್ನು ಹೊಂದಿರುವ ಕೀರ್ತಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಗೆ ಸಿಕ್ಕಿದೆ. ಅವರು 18.2 ಕೋಟಿ ಫಾಲೋವರ್ಸ್‌ ಹೊಂದಿದ್ದಾರೆ.
Vijaya Karnataka Web pm modi overtakes trump becomes second most followed politician in world
ಟ್ರಂಪ್‌ರನ್ನು ಹಿಂದಿಕ್ಕಿದ ಮೋದಿ, ಜಾಲತಾಣದಲ್ಲಿ ಹೆಚ್ಚು ಫಾಲೋವರ್ಸ್‌


ರಾಹುಲ್‌ಗೆ 1.2 ಕೋಟಿ ಫಾಲೋವರ್ಸ್‌ : ಪ್ರಧಾನಿ ಮೋದಿ ವಿರುದ್ಧ ಟ್ವಿಟ್ಟರ್‌ನಲ್ಲಿ ಕಿಡಿಕಾರುವ ಮೂಲಕ ಸದಾ ಸುದ್ದಿಯಲ್ಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂನಲ್ಲಿ ಒಟ್ಟಾಗಿ 1.2 ಕೋಟಿ ಫಾಲೋವರ್ಸ್‌ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ