ಆ್ಯಪ್ನಗರ

ವಿದ್ಯಾರ್ಥಿಗೆ ಟ್ವಿಟರ್‌ನಲ್ಲಿ ಶುಭಾಶಯ ಕೋರಿದ ಮೋದಿ!

ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಕೌನ್ಸಿಲ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಸಾಕ್ಷಿ ಪ್ರದ್ಯುಮ್ನ ಬೆಳಗ್ಗೆ ಎದ್ದ ತಕ್ಷಣ ಅಚ್ಚರಿ ಕಾದಿತ್ತು.

Navbharat Times 18 Jul 2018, 5:43 pm
ಹೊಸದಿಲ್ಲಿ: ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಕೌನ್ಸಿಲ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಸಾಕ್ಷಿ ಪ್ರದ್ಯುಮ್ನ ಬೆಳಗ್ಗೆ ಎದ್ದ ತಕ್ಷಣ ಅಚ್ಚರಿ ಕಾದಿತ್ತು.
Vijaya Karnataka Web sakshi


ಪ್ರಧಾನಿ ಮೋದಿ ಬರೆದ ಪುಸ್ತಕ ಎಕ್ಸಾಮ್‌ ವಾರಿಯರ್ಸ್‌ ಪುಸ್ತಕವನ್ನು ಮೆಚ್ಚಿ, ಪ್ರಧಾನಿಗೆ ಇ-ಮೇಲ್‌ ಮೂಲಕ ಕೃತಜ್ಞತೆ ಸಲ್ಲಿಸಿದ್ದ. ಪ್ರದ್ಯುಮ್ನ ಇ-ಮೇಲ್‌ಗೆ ಪ್ರಧಾನಿ ಟ್ವಿಟರ್‌ ಮೂಲಕ ಉತ್ತರಿಸಿ, ಶುಭ ಹಾರೈಸಿದ್ದಾರೆ. ಮೋದಿ ತನ್ನ ಇ-ಮೇಲ್‌ಗೆ ಈ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಊಹಿಸದ ಯುವಕ, ಮೋದಿ ಪ್ರತಿಕ್ರಿಯೆ ಕಂಡು ಖುಷಿಯಾಗಿದ್ದಾನೆ.

ಪುಸ್ತಕದಲ್ಲಿ ಎಲ್ಲ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯ ಮುನ್ನ ಇರಬೇಕಾದ ರೀತಿಯ ಬಗ್ಗೆ ವಿವರಿಸುವ ಪರಿಯನ್ನು ಕೊಂಡಾಡಿದ್ದಾರೆ. ಅಷ್ಟು ಮಾತ್ರ ಅಲ್ಲ, ಪುಸ್ತಕದಲ್ಲಿ ಬರೆದುದ್ದನ್ನು ಪಾಲಿಸಿ, ತಾನು ರ‍್ಯಾಂಕ್‌ ಪಡೆದಿರುವುದಾಗಿಯೂ ಇ-ಮೇಲ್‌ನ ಪತ್ರದಲ್ಲಿ ಹೇಳಿದ್ದಾರೆ. ಜತೆಗೆ ಇಂತಹ ಉತ್ತಮ ಪುಸ್ತಕ ಬರೆದಿರುವುದಕ್ಕೆ ಅಭಿನಂದನೆ, ಕೃತಜ್ಞತೆಯನ್ನೂ ಹೇಳಿದ್ದಾರೆ.

ಸಾಕ್ಷಿಯ ಈ ಮೇಲ್‌ ಹಾಗೂ ಪತ್ರವನ್ನು ಪ್ರಧಾನಿ ಟ್ವಿಟರ್‌ನಲ್ಲಿ ಶೇರ್‌ ಮಾಡುವ ಮೂಲಕ, ಶೈಕ್ಷಣಿಕ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ