ಆ್ಯಪ್ನಗರ

370ನೇ ವಿಧಿ ರದ್ದತಿಗೆ ಪಟೇಲರೇ ಪ್ರೇರಣೆ: ನರೇಂದ್ರ ಮೋದಿ

ಕಾಶ್ಮೀರ ವಿಚಾರದಲ್ಲಿಸರಕಾರ ತೆಗೆದುಕೊಂಡ ನಿರ್ಧಾರಕ್ಕೆ ಸರ್ದಾರರ ವಿಚಾರಧಾರೆಗಳೇ ಸ್ಫೂರ್ತಿಯಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

PTI 18 Sep 2019, 6:18 am
ಕೇವಾಡಿಯಾ: ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಕಂಟಕವಾಗಿದ್ದ ಸಂವಿಧಾನದ 370ನೇ ವಿಧಿ ರದ್ದತಿಯಂತಹ ದಿಟ್ಟ ನಿರ್ಧಾರಗಳಿಗೆ ಸರ್ದಾರ್‌ ವಲ್ಲಭಭಾಯಿ ಪಟೇಲರ ದೂರದೃಷ್ಟಿಯೇ ತಮಗೆ ಸ್ಫೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Vijaya Karnataka Web Modi 11


ಜನ್ಮದಿನದ ನಿಮಿತ್ತ ಗುಜರಾತಿನ ಕೇವಾಡಿಯಾದಲ್ಲಿರುವ ಏಕತಾ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿದ ಅವರು, ರಾಜಮನೆತಗಳಲ್ಲಿಹರಿದು ಹಂಚಿ ಹೋಗಲಿದ್ದ ಪ್ರಾಂತ್ಯಗಳನ್ನು ಒಟ್ಟುಗೂಡಿಸಿ ಸದೃಢ ಭಾರತ ನಿರ್ಮಿಸಿದ ಹಿರಿಮೆ ಸರ್ದಾರ್‌ ಅವರಿಗೆ ಸಲ್ಲುತ್ತದೆ. ಈ ಧೀಮಂತ ನಾಯಕನ ದೂರದೃಷ್ಟಿಗಳೇ ನಮಗೆ ಪ್ರೇರಣೆಯಾಗಿವೆ. ಕಾಶ್ಮೀರ ವಿಚಾರದಲ್ಲಿಸರಕಾರ ತೆಗೆದುಕೊಂಡ ನಿರ್ಧಾರಕ್ಕೆ ಸರ್ದಾರರ ವಿಚಾರಧಾರೆಗಳೇ ಸ್ಫೂರ್ತಿಯಾಗಿವೆ ಎಂದು ಹೇಳಿದರು.

''1948ರಲ್ಲಿಅಂದಿನ ಗೃಹ ಸಚಿವರಾಗಿದ್ದ ಸರ್ದಾರ್‌ ಪಟೇಲರು ತೆಗೆದುಕೊಂಡ ಪ್ರಭಾವಿ ನಿರ್ಣಯದ ಫಲವಾಗಿಯೇ ಹೈದರಾಬಾದ್‌ ನಿಜಾಮ್‌ ಸಂಸ್ಥಾನವು ಭಾರತದ ಒಕ್ಕೂಟ ವ್ಯವಸ್ಥೆಯ ಭಾಗವಾಯಿತು. ಸೇನಾ ಕಾರ್ಯಾಚರಣೆಯ ಫಲವಾಗಿ 1948ರ ಸೆಪ್ಟೆಂಬರ್‌ 17ರಂದು ಹೈದರಾಬಾದ್‌ ನಿಜಾಮ್‌ ಸಂಸ್ಥಾನ ಭಾರತದ ಭಾಗವಾಯಿತು,'' ಎಂದು ಹೇಳುವ ಮೂಲಕ ಮೋದಿ ಅವರು ತಮ್ಮ ಜನ್ಮದಿನವಾದ ಸೆ.17ಕ್ಕೂ ಸರ್ದಾರ್‌ ಪಟೇಲರಿಗೂ ಇರುವ ನಂಟನ್ನು ಪ್ರಸ್ತಾಪಿಸಿದರು. ಅಲ್ಲದೇ, ''133 ವರ್ಷದ ಇತಿಹಾಸ ಹೊಂದಿರುವ ಅಮೆರಿಕದ ಸ್ಟ್ಯಾಚ್ಯೂ ಆಫ್‌ ಲಿಬರ್ಟಿಗೆ ನಿತ್ಯವೂ 10,000 ಜನ ಭೇಟಿ ನೀಡುತ್ತಾರೆ. ಆದರೆ 11 ತಿಂಗಳ ಹಿಂದೆ ಸ್ಥಾಪಿಸಲಾದ ಏಕತಾ ಪ್ರತಿಮೆ ವೀಕ್ಷಿಸಲು ಪ್ರತಿದಿನ 8,500 ಜನ ಬರುತ್ತಾರೆ. ಇದು ಭಾರತೀಯರಿಗೆ ಸರ್ದಾರ್‌ ಪಟೇಲರ ಬಗ್ಗೆ ಇರುವ ಗೌರವದ ದ್ಯೋತಕ,'' ಎಂದು ಮೋದಿ ಬಣ್ಣಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ