ಆ್ಯಪ್ನಗರ

ನಷ್ಟಕ್ಕೆ ಪ್ರಧಾನಿ ಮೋದಿ, ಸುಪ್ರೀಂ ಕೋರ್ಟ್‌, ಬ್ರೆಜಿಲ್ ಸರಕಾರ ಹೊಣೆ; ವಿಡಿಯೋಕಾನ್

ವಿಡಿಯೋಕಾನ್ ಇಂಡಸ್ಟ್ರೀಸ್‌ ಲಿ.ನ 39,000 ಕೋಟಿ ರೂ. ನಷ್ಟ ಮತ್ತು ಸಾಲಬಾಕಿಗೆ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮತ್ತು ಬ್ರೆಜಿಲ್ ಸರಕಾರ ಹೊಣೆ ಎಂದು ಕಂಪನಿ ದೂಷಿಸಿದೆ.

Vijaya Karnataka Web 12 Jun 2018, 6:29 pm
ಹೊಸದಿಲ್ಲಿ: ವಿಡಿಯೋಕಾನ್ ಇಂಡಸ್ಟ್ರೀಸ್‌ ಲಿ.ನ 39,000 ಕೋಟಿ ರೂ. ನಷ್ಟ ಮತ್ತು ಸಾಲಬಾಕಿಗೆ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮತ್ತು ಬ್ರೆಜಿಲ್ ಸರಕಾರ ಹೊಣೆ ಎಂದು ಕಂಪನಿ ದೂಷಿಸಿದೆ.
Vijaya Karnataka Web videocon


ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (ಎನ್‌ಸಿಎಲ್‌ಟಿ) ಕಳೆದ ವಾರ ವಿಡಿಯೋಕಾನ್ ಸಾಲ ಮರುಪಾವತಿಗೆ ಸಂಬಂಧಿಸಿ ನಷ್ಟ ತುಂಬಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿತ್ತು.

ಸಾಲಬಾಕಿ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವ ವಿಡಿಯೋಕಾನ್, ಪ್ರಧಾನಿ ಮೋದಿ ಕೈಗೊಂಡ ನೋಟು ನಿಷೇದ ಕ್ರಮದ ನಂತರ ಸಂಸ್ಥೆ ನಷ್ಟ ಅನುಭವಿಸಿತು. ಜತೆಗೆ ಸಿಆರ್‌ಟಿ ಟಿವಿ ಉದ್ಯಮವನ್ನು ಮುಚ್ಚಬೇಕಾಯಿತು. ಅಲ್ಲದೆ ಸುಪ್ರೀಂ ಕೋರ್ಟ್ ಪರವಾನಗಿ ರದ್ದುಪಡಿಸಿದ್ದರಿಂದ ಬ್ರೆಜಿಲ್‌ನಲ್ಲಿ ತೈಲ ಮತ್ತು ಅನಿಲ ಉದ್ಯಮಕ್ಕೆ ತಡೆಯುಂಟಾಯಿತು. ಇದರಿಂದ ವಿಡಿಯೋಕಾನ್ ನಷ್ಟ ಅನುಭವಿಸಿತು ಎಂದು ಹೇಳಿದೆ.

ಸಾಲಬಾಕಿ ವಸೂಲಿಗೆ ಸಂಬಂಧಿಸಿ ಎನ್‌ಸಿಎಲ್‌ಟಿ ಈಗಾಗಲೇ ಪ್ರಕ್ರಿಯೆ ಆರಂಭಿಸಿದೆ. ಉದ್ಯಮ ನಷ್ಟದ ಬಳಿಕ ವಿಡಿಯೋಕಾನ್ ಷೇರು ಬೆಲೆ ಶೇ. 96 ಕುಸಿತ ಕಂಡು ಗಣನೀಯವಾಗಿ ನೆಲಕಚ್ಚಿದೆ. ಮಂಗಳವಾರ ಬಿಎಸ್‌ಇಯಲ್ಲಿ ವಿಡಿಯೋಕಾನ್ ಷೇರು 7.65 ರೂ.ಗೆ ಮಾರಾಟವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ