ಆ್ಯಪ್ನಗರ

ಲಸಿಕೆ ವಿತರಣೆಗೆ ಸಿದ್ಧರಾಗಿ, ಪರೀಕ್ಷೆ ಪ್ರಮಾಣ ಹೆಚ್ಚಿಸಿ: ವರ್ಚುವಲ್ ಸಭೆಯಲ್ಲಿ ಮೋದಿ ಸಲಹೆ!

ಮಾರಕ ಕೊರೊನಾ ವೈರಸ್ ಹಾವಳಿ ಅತಿಯಾಗಿರುವ 8 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ, ಪ್ರಧಾನಿ ಮೋದಿ ಇಂದು(ನ.24-ಮಂಗಳವಾರ) ವರ್ಚುವಲ್ ಸಭೆ ನಡೆಸಿದರು. ಕೊರೊನಾ ಲಸಿಕೆ ವಿತರಣೆ ಹಾಗೂ ಪರೀಕ್ಷಾ ಪ್ರಮಾಣ ಹೆಚ್ಚಳದ ಕುರಿತು ಈ ಸಭೆಯಲ್ಲಿ ಸುದೀರ್ಘವಾಆಗಿ ಚರ್ಚಿಸಲಾಯಿತು.

Vijaya Karnataka Web 24 Nov 2020, 5:56 pm
ಹೊಸದಿಲ್ಲಿ: ಮಾರಕ ಕೊರೊನಾ ವೈರಸ್ ಹಾವಳಿ ಅತಿಯಾಗಿರುವ 8 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ, ಪ್ರಧಾನಿ ಮೋದಿ ಇಂದು(ನ.24-ಮಂಗಳವಾರ) ವರ್ಚುವಲ್ ಸಭೆ ನಡೆಸಿದರು.
Vijaya Karnataka Web PM Modi
ವರ್ಚುವಲ್ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ


ಶೀಘ್ರದಲ್ಲೇ ದೇಶೀಯ ಕೊರೊನಾ ಲಸಿಕೆ ಲಭ್ಯವಾಗಲಿದ್ದು, ಇದರ ವಿತರಣೆಗೆ ಕೂಡಲೇ ವ್ಯವಸ್ಥೆ ಮಾಡಿಕೊಳ್ಳುವಂತೆ ಪ್ರಧಾನಿ ಮೋದಿ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.

ಅಲ್ಲದೇ ಕೊರೊನಾ ಹಾವಳಿ ಅತಿಯಾಗಿರುವ ಪ್ರದೇಶಗಳಲ್ಲಿ ಕೂಡಲೇ ಪರೀಕ್ಷಾ ಪ್ರಮಾಣ ಹೆಚ್ಚಿಸಿ, ಮಾರಕ ವೈರಾಣು ಹರಡುವುದನ್ನು ತಡೆಯಬೇಕು ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ ಎನ್ನಲಾಗಿದೆ.


ವರ್ಚುವಲ್ ಸಭೆಯಲ್ಲಿ ನಡೆದ ಚರ್ಚೆಯ ವಿವರ:
* ಶೀಘ್ರದಲ್ಲೇ ಲಭ್ಯವಾಗಲಿರುವ ಕೊರೊನಾ ಲಸಿಕೆಯ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಪ್ರಧಾನಿ ಸಲಹೆ.
* ಕೊರೊನಾ ಲಸಿಕೆಯನ್ನು ಎಲ್ಲಾ ರಾಜ್ಯಗಳಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡಲು ನೀಲನಕ್ಷೆ ತಯಾರಿಸಲು ಸೂಚನೆ.
* ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆ, ಎರಡನೇ ಹಂತದಲ್ಲಿ ಪೊಲೀಸರಿಗೆ, ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಹಾಗೂ ನಾಲ್ಕನೇ ಹಂತಸದಲ್ಲಿ ಎಲ್ಲಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವುದು ಆಯಾ ರಾಜ್ಯಗಳ ಜವಾಬ್ದಾರಿ.
* ಕೊರೊನಾ ಹೆಚ್ಚಾಗಿರುವ ಪ್ರದೇಶಗಳಲ್ಲಿ ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸುವಂತೆ ಪ್ರಧಾನಿ ಸೂಚನೆ.
* ಕೊರೊನಾ ವೈರಸ್ ಹರಡದಿರುವಂತೆ ತಡೆಯಲು ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸುವುದೊಂದೇ ಮಾರ್ಗ ಎಂದ ಪ್ರಧಾನಿ.
* ಕೊರೊನಾ ಲಸಿಕೆ ಸಂಗ್ರಹಣೆಗಾಗಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಒತ್ತು ನೀಡಿ ಎಂದು ರಾಜ್ಯಗಳಿಗೆ ಮೋದಿ ಸಲಹೆ.

ಕೊರೊನಾ: ಮಂಗಳವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮೋದಿ ವರ್ಚುವಲ್ ಸಭೆ!

ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯಗಳು:
* ಕರ್ನಾಟಕ
*ಮಹಾರಾಷ್ಟ್ರ
*ಕೇರಳ
ಪಶ್ಚಿಮ ಬಂಗಾಳ
* ದೆಹಲಿ
*ಉತ್ತರಪ್ರದೇಶ
*ಹರಿಯಾಣ
*ರಾಜಸ್ಥಾನ

ಒಟ್ಟಿನಲ್ಲಿ ಇಂದು(ಮಂಗಳವಾರ) ನಡೆದ ವರ್ಚುವಲ್ ಸಭೆಯಲ್ಲಿ ಕೊರೊನಾ ಲಸಿಕೆ ಕುರಿತು ಹೆಚ್ಚು ಒತ್ತು ನೀಡಿರುವ ಪ್ರಧಾನಿ ಮೋದಿ, ಲಸಿಕೆ ವಿತರಣೆಗೆ ದೇಶವನ್ನು ಸಜ್ಜುಗೊಳಿಸಲು ಮುಂದಡಿ ಇಟ್ಟಿರುವುದು ಸ್ಪಷ್ಟವಾಗಿದೆ.


ಇದೇ ವೇಳೆ ಕೊರೊನಾ ಲಸಿಕೆ ಕುರಿತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, ಕೆಲವರು ಲಸಿಕೆ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಸೇರಿ ಏಳು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಇಂದು ಪ್ರಧಾನಿ ಮೋದಿ ಸಭೆ

ಕೊರೊನಾ ಲಸಿಕೆ ಯಾವಾಗ ಬರುತ್ತದೆ ಎಂಬುದುನ್ನು ಸರ್ಕಾರ ಹೇಳಲು ಸಾಧ್ಯವಿಲ್ಲ. ವೈದ್ಯ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಿದ್ದು, ಅವರ ಮನೋಬಲ ಕುಗ್ಗಿಸುವಂತ ಕೆಲಸವನ್ನು ಯಾರೂ ಮಾಡಬಾರದು ಎಂದು ಮೋದಿ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ