ಆ್ಯಪ್ನಗರ

ಕಪ್ಪಗಿದ್ದ ಮೋದಿ ಬೆಳ್ಳಗಾಗಿದ್ದು ಆಮದು ಮಾಡಿಕೊಂಡ ಅಣಬೆ ತಿಂದು: ಅಲ್ಪೇಶ್‌ ಠಾಕೂರ್‌

ಮೋದಿ ಅಣಬೆಯ ತಿಂಗಳ ವೆಚ್ಚ 1 ಕೋಟಿ 20 ಲಕ್ಷ

Vijaya Karnataka Web 12 Dec 2017, 9:23 pm
ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮೊದಲು ಕಪ್ಪಗಿದ್ದರು. ಆದರೆ ಅವರು ಈಗ ಇಷ್ಟು ಬೆಳ್ಳಗಾಗಿದ್ದು ಹೇಗೆ ಗೊತ್ತಾ?
Vijaya Karnataka Web pm modi was dark became fair after eating imported mushrooms alpesh thakor
ಕಪ್ಪಗಿದ್ದ ಮೋದಿ ಬೆಳ್ಳಗಾಗಿದ್ದು ಆಮದು ಮಾಡಿಕೊಂಡ ಅಣಬೆ ತಿಂದು: ಅಲ್ಪೇಶ್‌ ಠಾಕೂರ್‌


ಇದಕ್ಕೆ ಕಾಂಗ್ರೆಸ್‌ ನಾಯಕ ಅಲ್ಪೇಶ್‌ ಠಾಕೂರ್‌ ನೀಡುವ ಉತ್ತರ ಇಲ್ಲಿದೆ.

ಮೋದಿ ಅವರು ತೈವಾನ್‌ನಿಂದ ಆಮದು ಮಾಡಿಕೊಂಡ ಅಣಬೆ (ನಾಯಿಕೊಡೆ)ಗಳನ್ನು ಪ್ರತಿದಿನ ತಿನ್ನುತ್ತಾರೆ. ಈ ಅಣಬೆ ಬೆಲೆ ಎಷ್ಟು ಗೊತ್ತಾ? ಒಂದಕ್ಕೆ ಎಂಬತ್ತು ಸಾವಿರ. ದಿನಕ್ಕೆ ಐದು ಅಣಬೆ ತಿನ್ನುತ್ತಾರೆ ಎಂದು ಅಲ್ಪೇಶ್‌ ಠಾಕೂರ್‌ ತಿಳಿಸಿದ್ದಾರೆ.

ಈ ಕುರಿತು ಅಲ್ಪೇಶ್‌ ಮಾತನಾಡಿರುವ ವಿಡಿಯೋವೊಂದು ಈಗ ಬಹಿರಂಗಗೊಂಡಿದೆ.

ತಿಂಗಳಿಗೆ ಮೋದಿ ಅವರ ಅಣಬೆ ಸೇವನೆ ಬೆಲೆಯೇ 1 ಕೋಟಿ 20 ಲಕ್ಷ ರೂಪಾಯಿಗಳಾಗಿದೆ. ಎಷ್ಟು ಕೋಟಿ ಹಣವನ್ನು ಅವರು ವ್ಯಯಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಗುಜರಾತ್‌ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಅಲ್ಪೇಶ್‌ ಠಾಕೂರ್‌ ರಾಧನ್‌ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

#WATCH Modi Ji eats mushrooms from Taiwan, one mushroom costs Rs 80 thousand & he eats 5 mushrooms a day. He was dark like me but he became fair because of imported mushrooms: Alpesh Thakor, activist & Congress leader #GujaratElection2017 pic.twitter.com/jh5QPN27SD — ANI (@ANI) December 12, 2017

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ