ಆ್ಯಪ್ನಗರ

ಕೊರೊನಾ ಲಸಿಕೆ ಪ್ರಗತಿ ಪರಿಶೀಲನೆಗಾಗಿ ಶನಿವಾರ 3 ನಗರಗಳಿಗೆ ಭೇಟಿ ನೀಡಲಿರುವ ಪ್ರಧಾನಿ!

ದೇಶದಲ್ಲಿ ಸಂಶೋಧನಾ ಹಂತದಲ್ಲಿರುವ ಕೊರೊನಾ ಲಸಿಕೆಗಳ ಪ್ರಗತಿ ಪರಿಶೀಲನೆಗಾಗಿ ನಾಳೆ(ನ.28-ಶನಿವಾರ), ಪ್ರಧಾನಿ ಮೋದಿ ಮೂರು ಪ್ರಮುಖ ನಗರಗಳಿಗೆ ಭೇಟಿ ನೀಡಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪ್ರಧಾನಿ ಕಚೇರಿ, ಶನಿವಾರ ಪ್ರಧಾನಿ ಮೋದಿ ಅಹಮದಾಬಾದ್, ಹೈದರಾಬಾದ್ ಹಾಗೂ ಪುಣೆ ನಗರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದೆ

Vijaya Karnataka Web 27 Nov 2020, 3:48 pm
ಹೊಸದಿಲ್ಲಿ: ದೇಶದಲ್ಲಿ ಸಂಶೋಧನಾ ಹಂತದಲ್ಲಿರುವ ಕೊರೊನಾ ಲಸಿಕೆಗಳ ಪ್ರಗತಿ ಪರಿಶೀಲನೆಗಾಗಿ ನಾಳೆ(ನ.28-ಶನಿವಾರ), ಪ್ರಧಾನಿ ಮೋದಿ ಮೂರು ಪ್ರಮುಖ ನಗರಗಳಿಗೆ ಭೇಟಿ ನೀಡಲಿದ್ದಾರೆ.
Vijaya Karnataka Web pm modi pti
ಸಂಗ್ರಹ ಚಿತ್ರ


ಈ ಕುರಿತು ಮಾಹಿತಿ ನೀಡಿರುವ ಪ್ರಧಾನಿ ಕಚೇರಿ, ಶನಿವಾರ ಪ್ರಧಾನಿ ಮೋದಿ ಅಹಮದಾಬಾದ್, ಹೈದರಾಬಾದ್ ಹಾಗೂ ಪುಣೆ ನಗರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಅಹಮದಾಬಾದ್‌ನಲ್ಲಿರುವ ಜೈಡಸ್ ಬಯೋಟೆಕ್, ಹೈದರಾಬಾದ್‌ನಲ್ಲಿರುವ ಭಾರತ್ ಬಯೋಟೆಕ್ ಹಾಗೂ ಪುಣೆಯಲ್ಲಿರುವ ಸೆರೆಮ್ ಇನ್ಸ್ಟಿಟ್ಯೂಟ್‌ಗಳಿಗೆ, ಪ್ರಧಾನಿ ಮೋದಿ ಶನಿವಾರ ಭೇಟಿ ನೀಡಲಿದ್ದಾರೆ.

ನವೆಂಬರ್‌ 28ಕ್ಕೆ ಸೆರಂ ಇನ್ಸ್ಟಿಟ್ಯೂಟ್‌ಗೆ ಪ್ರಧಾನಿ ಮೋದಿ ಭೇಟಿ, ಲಸಿಕೆ ಉತ್ಪಾದನೆ ಪರಿಶೀಲನೆ

ಸಂಶೋಧನಾ ಹಂತದಲ್ಲಿರುವ ಕೊರೊನಾ ಲಸಿಕೆಗಳ ಕುರಿತು ಮಾಹಿತಿ ಪಡೆಯಲಿರುವ ಪ್ರಧಾನಿ ಮೋದಿ, ಲಸಿಕೆ ಸಿದ್ಧತೆ, ವಿತರಣೆ ಹಾಗೂ ಹಂಚಿಕೆ ಕುರಿತು ವೈದ್ಯ ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ.


ನಿನ್ನೆ(ನ.26) ಪ್ರಧಾನಿ ಮೋದಿ ಶನಿವಾರ ಕೇವಲ ಪುಣೆಯ ಸೆರೆಮ್ ಇನ್ಸ್ಟಿಟ್ಯೂಟ್‌ಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಪ್ರಧಾನಿ ಮೂರು ಬೇರೆ ಬೇರೆ ನಗರಳಿಗೆ ಭೇಟಿ ನೀಡಲಿದ್ದಾರೆ ಎಂದು ಖುದ್ದು ಪ್ರಧಾನಿ ಕಚೇರಿ ಸ್ಪಷ್ಟಪಡಿಸಿದೆ.

ಲಸಿಕೆ ಹಂಚಿಕೆಯ ನೀಲನಕ್ಷೆ ಸಿದ್ಧಪಡಿಸಲು ಪ್ರಧಾನಿ ಸಲಹೆ: ಏನಿದು ಕೋಲ್ಡ್ ಸ್ಟೋರೇಜ್?

ಇನ್ನು ಕೊರೊನಾ ಲಸಿಕೆ ಉತ್ಪಾದನೆ ಸ್ಥಳಗಳಿಗೆ ಪ್ರಧಾನಿ ಮೋದಿ ಅವರ ಶನಿವಾರದ ಭೇಟಿ ಭಾರೀ ಕುತೂಹಲ ಕೆರಳಿಸಿದ್ದು, ಸಾರ್ವಜನಿಕರಿಗೆ ಶೀಘ್ರದಲ್ಲೇ ಕೊರೊನಾ ಲಸಿಕೆ ಲಭ್ಯವಾಗುವ ಭರವಸೆ ಮೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ