ಆ್ಯಪ್ನಗರ

ವಿಯೆಟ್ನಾಂಗೆ ಮೋದಿ ಭೇಟಿ: ಚೀನಾಗೆ ಎಚ್ಚರಿಕೆಯ ಗಂಟೆ

ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಚೀನಾಗೆ ತೆರಳುವ ಮಾರ್ಗ ಮಧ್ಯೆ, ಸೆ.3ರಂದು ವಿಯೆಟ್ನಾಂಗೆ ಭೇಟಿ ನೀಡಲಿದ್ದು, ಬೀಜಿಂಗ್‌ಗೆ ಎಚ್ಚರಿಕೆಯ ಗಂಟೆಯಾಗಲಿದೆ.

ಏಜೆನ್ಸೀಸ್ 29 Aug 2016, 6:55 pm
ಹೊಸದಿಲ್ಲಿ: ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಚೀನಾಗೆ ತೆರಳುವ ಮಾರ್ಗ ಮಧ್ಯೆ, ಸೆ.3ರಂದು ವಿಯೆಟ್ನಾಂಗೆ ಭೇಟಿ ನೀಡಲಿದ್ದು, ಬೀಜಿಂಗ್‌ಗೆ ಎಚ್ಚರಿಕೆಯ ಗಂಟೆಯಾಗಲಿದೆ. ಆ ಮೂಲಕ ದಕ್ಷಿಣ ಏಷ್ಯಾದಲ್ಲಿ ಭಾರತದ ಉಪಸ್ಥಿತಿಯನ್ನು ವಿಶ್ವಕ್ಕೇ ತೋರಿಸುವಂಥ ನಡೆಗೆ ಭಾರತ ಮುಂದಾಗಿದೆ.
Vijaya Karnataka Web pm modis vietnam visit is to signal indias presence in south east asia
ವಿಯೆಟ್ನಾಂಗೆ ಮೋದಿ ಭೇಟಿ: ಚೀನಾಗೆ ಎಚ್ಚರಿಕೆಯ ಗಂಟೆ


ಹನೋಯಿಯಲ್ಲಿ ಸೈನ್ಯಕ್ಕೆ ಆರ್ಥಿಕ ನೆರವು, ತರಬೇತಿ ಹಾಗೂ ಸ್ಥಾಪನೆಗೆ ಸಹಕಾರಿ ಸೇರಿ ಹೆಚ್ಚುವರಿ ಬೆಂಬಲವನ್ನು ನೀಡಲು ಭಾರತ ಮುಂದಾಗಿದೆ. ಹೈಡ್ರೋಕಾರ್ಬನ್ ಬ್ಲಾಕ್‌ಗಳಲ್ಲಿ ಲಾಭ ಪಡೆಯುವ ಉದ್ದೇಶದಿಂದ ಹೆಚ್ಚಿನ ಬಂಡವಾಳ ಹೂಡಲು ಭಾರತ ಆಸಕ್ತವಾಗಿದೆ.

2014ರ ಅಕ್ಟೋಬರ್‌ನಲ್ಲಿ ಪ್ರಧಾನಿ ವಿಯೆಟ್ನಾಂಗೆ ಭೇಟಿ ನೀಡಿದಾಗ ಭರವಸೆ ನೀಡಿದೆ, ಒಂದು ದಿನದ ಈ ಭೇಟಿಯಲ್ಲಿ ಮೋದಿ ವಿಯೆಟ್ನಾಂ ಸೈನ್ಯಕ್ಕೆ ನಾಲ್ಕು ಪೆಟ್ರೋಲ್ ದೋಣಿಗಳು ಕಳುಹಿಸುವ ಒಪ್ಪಂದಕ್ಕೆ ಸಹಿ ಮಾಡಲಿದ್ದಾರೆ. ಅಲ್ಲಿನ ಸೈನ್ಯ ಸಾಫ್ಟ್‌ವೇರ್ ಅಭಿವೃದ್ಧಿಗೆ ಭಾರತದಿಂದ ತಂತ್ರಜ್ಞರ ನೆರವು ನೀಡಲೂ ಭಾರತ ಮುಂದಾಗಲಿದೆ. ಆ ಮೂಲದ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಸೈನ್ಯ ಸ್ಥಾಪನೆಗೆ ಒತ್ತು ನೀಡಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ