ಆ್ಯಪ್ನಗರ

ಮೋದಿ ಫೇಸ್‌ಬುಕ್‌ನಲ್ಲೂ ಅತ್ಯಂತ ಜನಪ್ರಿಯ ನಾಯಕ

ಪ್ರಧಾನಿ ಮೋದಿ ಈಗ ಫೇಸ್‌ಬುಕ್‌ನಲ್ಲೂ ಗರಿಷ್ಠ ಫಾಲೋವರ್ಸ್ ಹೊಂದುವ ಮೂಲಕ ನಂ.1 ಪಟ್ಟ ಗಿಟ್ಟಿಸಿದ್ದಾರೆ.

Vijaya Karnataka Web 24 Feb 2017, 9:10 am
ಹೊಸದಿಲ್ಲಿ: ಈಗಾಗಲೇ ಸಾಮಾಜಿಕ ಜಾಲತಾಣಗಳು ಹಾಗೂ ಫೋರ್ಬ್ಸ್ ಪಟ್ಟಿಯಲ್ಲಿ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಹೊರಹೊಮ್ಮಿರುವ ಪ್ರಧಾನಿ ಮೋದಿ ಈಗ ಫೇಸ್‌ಬುಕ್‌ನಲ್ಲೂ ಗರಿಷ್ಠ ಫಾಲೋವರ್ಸ್ ಹೊಂದುವ ಮೂಲಕ ನಂ.1 ಪಟ್ಟ ಗಿಟ್ಟಿಸಿದ್ದಾರೆ. ವಿಶೇಷವೆಂದರೆ ಮೂರನೇ ಸ್ಥಾನ ಕೂಡ ಮೋದಿ ಅವರ ಸಚಿವಾಲಯಕ್ಕೆ ಸಂದಿದೆ.
Vijaya Karnataka Web pm narendra modi as the most followed world leader on facebook
ಮೋದಿ ಫೇಸ್‌ಬುಕ್‌ನಲ್ಲೂ ಅತ್ಯಂತ ಜನಪ್ರಿಯ ನಾಯಕ


ಫೇಸ್‌ಬುಕ್‌ ವೈಯಕ್ತಿಕ ಪೇಜ್‌ನಲ್ಲಿ ಮೋದಿ ಬರೋಬ್ಬರಿ 4 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. 2 ಕೋಟಿ ಹಿಂಬಾಲಕರೊಂದಿಗೆ ಅಮರಿಕದ ಅಧ್ಯಕ್ಷ ಡೊನಾಲ್ಡ ಟ್ರಂಪ್ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ಜನಪ್ರಿಯ ನಾಯಕರ ಬಗ್ಗೆ ‘ಬುರ್ಸನ್- ಮಾಸ್ರ್ಟೆಲ್ಲರ್’ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಸುಮಾರು 169 ಸರಕಾರಗಳ 559 ಫೇಸ್‌ಬುಕ್‌ ಪೇಜ್‌ಗಳನ್ನು ಆಯ್ಕೆ ಮಾಡಿಕೊಂಡು ಸಮೀಕ್ಷೆ ನಡೆಸಲಾಗಿದೆ. 87 ರಾಜ್ಯ ಪ್ರಮುಖರು, 70 ಪ್ರಧಾನ ಮಂತ್ರಿಗಳು ಹಾಗೂ 55 ಸಚಿವರುಗಳ ಫೇಸ್ಬುಕ್ ಅಂಕಿ-ಅಂಶ ಕಲೆ ಹಾಕಿ ಈ ಫಲಿತಾಂಶ ನೀಡಲಾಗಿದೆ. ಭಾರತದ ಪ್ರಧಾನಿ ಸಚಿವಾಲಯ ಮೂರನೆ ಸ್ಥಾನದಲ್ಲಿದ್ದು, ಈ ಪೇಜ್‌ಗೆ 1.3 ಕೋಟಿ ಹಿಂಬಾಲಕರಿದ್ದಾರೆ.

ಮೋದಿ ಅವರು ಹೆಚ್ಚು ಲೈಕ್ಸ್, ಕಾಮೆಂಟ್ಸ್‌ ಹಾಗೂ ಷೇರ್ಸ್‌ಗಳನ್ನು ಫೇಸ್‌ಬುಕ್ ಪುಟದಲ್ಲಿ ಪಡೆದಿದ್ದಾರೆ. ಇದೆಲ್ಲವೂ 2016ರ ಮಾಹಿತಿಯ ಆಧಾರದ ಮೇಲೆ ತಯಾರಿಸಲಾಗಿರುವ ವರದಿಯಾಗಿದೆ. ನಂ 7 ರೇಸ್ ಕೋರ್ಸ್ ರಸ್ತೆ (ಈಗಿನ ಲೋಕ ಕಲ್ಯಾಣ ಮಾರ್ಗ) ನಿವಾಸದಲ್ಲಿ ಅವರ ತಾಯಿಯನ್ನು ಭೇಟಿಯಾದ ಚಿತ್ರ ಅತ್ಯಂತ ಜನಪ್ರಿಯ ಪೋಸ್ಟ್‌ಗಳಲ್ಲಿ ಒಂದೆನಿಸಿದೆ.

ಬರೋಬ್ಬರಿ 5.2 ಕೋಟಿ ಫಾಲೊವರ್ಸ್ ಹೊಂದಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಫೇಸ್‌ಬುಕ್‌ನಲ್ಲಿ ನಂ.1 ನಾಯಕನ ಸ್ಥಾನದಲ್ಲಿದ್ದರಾದರೂ, ಅವರೀಗ ಸಕ್ರಿಯವಾಗಿಲ್ಲ. ಅಮೆರಿಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ, ಗರಿಷ್ಠ ಹಿಂಬಾಲಕರೊಂದಿಗೆ ಆ ಸ್ಥಾನವನ್ನು ಮೋದಿ ಅಲಂಕರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ