ಆ್ಯಪ್ನಗರ

Loan Waiver Issue: ರೈತರೊಂದಿಗೂ ಸುಳ್ಳೇ ಕಾಂಗ್ರೆಸ್‌ ಅಸ್ತ್ರ: ಮೋದಿ ವಾಗ್ದಾಳಿ

ರಾಯ್‌ ಬರೇಲಿಯಲ್ಲಿ ಭಾನುವಾರ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೆ, ರೈತರ ವಿಚಾರದಲ್ಲೂ ಕಾಂಗ್ರೆಸ್‌ ಸುಳ್ಳನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಜೆಡಿಎಸ್‌ ಜತೆ ಸೇರಿ ಸರಕಾರ ರಚಿಸಿ, ಸಾಲ ಮನ್ನಾದ ಘೋಷಣೆಯನ್ನೂ ಮಾಡಿತು. ಆದರೆ ಘೋಷಣೆ ಇನ್ನೂ ಅಸ್ತಿತ್ವಕ್ಕೇ ಬಂದಿಲ್ಲ. ಹಲವಾರು ರೈತರಿಗೆ ಜಮೀನು ಜಪ್ತಿಯಾಗುವ ನೋಟಿಸ್‌ಗಳು ಬ್ಯಾಂಕ್‌ನಿಂದ ಬರುತ್ತಿದೆ ಅಷ್ಟೇ ಎಂದು ದೂರಿದರು.

Vijaya Karnataka Web 16 Dec 2018, 2:24 pm
ರಾಯ್‌ ಬರೇಲಿ: ಕಾಂಗ್ರೆಸ್‌ ರೈತರ ಭಾವನೆಗಳ ಜತೆಗೂ ಸುಳ್ಳಿನ ಮನೆ ಕಟ್ಟುತ್ತಿದೆ. ಕರ್ನಾಟಕದಲ್ಲಿ ಸಾಲ ಮನ್ನಾದ ಭರವಸೆ ನೀಡಿದ್ದ ಸರಕಾರ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Vijaya Karnataka Web pm narendra modi attacks on karnataka government loan waiver yet impliment
Loan Waiver Issue: ರೈತರೊಂದಿಗೂ ಸುಳ್ಳೇ ಕಾಂಗ್ರೆಸ್‌ ಅಸ್ತ್ರ: ಮೋದಿ ವಾಗ್ದಾಳಿ


ರಾಯ್‌ ಬರೇಲಿಯಲ್ಲಿ ಭಾನುವಾರ ರೈಲು ಬೋಗಿ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿದ ಬಳಿಕ ಬಹಿರಂಗ ಸಮಾವೇಶದಲ್ಲಿ ಪಾಲ್ಮಾಗೊಂಡ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೆ, ರೈತರ ವಿಚಾರದಲ್ಲೂ ಕಾಂಗ್ರೆಸ್‌ ಸುಳ್ಳನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸಾಲ ಮನ್ನಾದ ವಾಗ್ದಾನ ಮಾಡಿತ್ತು. ಜೆಡಿಎಸ್‌ ಜತೆ ಸೇರಿ ಸರಕಾರ ರಚಿಸಿ, ಸಾಲ ಮನ್ನಾದ ಘೋಷಣೆಯನ್ನೂ ಮಾಡಿತು. ಆದರೆ ಘೋಷಣೆ ಇನ್ನೂ ಅಸ್ತಿತ್ವಕ್ಕೇ ಬಂದಿಲ್ಲ. ಹಲವಾರು ರೈತರಿಗೆ ಜಮೀನು ಜಪ್ತಿಯಾಗುವ ನೋಟಿಸ್‌ಗಳು ಬ್ಯಾಂಕ್‌ನಿಂದ ಬರುತ್ತಿದೆ ಅಷ್ಟೇ ಎಂದು ದೂರಿದರು.


ರೈಲ್ವೆ ಇಂಡಸ್ಟ್ರಿಯಲ್‌ ಪಾರ್ಕ್‌ ನಿರ್ಮಾಣ
ಉತ್ತರ ಪ್ರದೇಶದ ರಾಯ್‌ ಬರೇಲಿಯಲ್ಲಿ ಸುಸರ್ಜಿತ ರೈಲ್ವೆ ಇಂಡಸ್ಟ್ರಿಯಲ್‌ ಪಾರ್ಕ್‌ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ವಿಶ್ವದ ತಿದೊಡ್ಡ ರೈಲ್ವೆ ಬೋಗಿ ನಿರ್ಮಾಣ ಸಂಸ್ಥೆಯಾಗಿ ಅಭಿವೃದ್ಧಿ ಪಡಿಸಲು ಅಗತ್ಯ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಉತ್ತರ ಪ್ರದೇಶ ಸರಕಾರ ಹಾಗೂ ಕೇಂದ್ರ ರೈಲ್ವೆ ಇಲಾಖೆ ಸಹಯೋಗದೊಂದಿಗೆ ಈ ಯೋಜನೆ ಜಾರಿಗೊಳ್ಳಲಿದ್ದು, ಮುಂದಿನ ಕೆಲವೇ ವರ್ಷದಲ್ಲಿ ರೈಲ್ವೆ ಕೋಚ್‌ ನಿರ್ಮಾಣದಲ್ಲಿ ಗ್ಲೋಬಲ್‌ ಹಬ್‌ ಆಗಲಿದೆ ಎಂದು ಹೇಳಿದರು.

ಪ್ರಸ್ತುತ ವಾರ್ಷಿಕ 1 ಸಾವಿರ ಕೋಚ್‌ಗಳನ್ನು ನಿರ್ಮಾಣಕ್ಕೆ ಗುರಿ ಇರಿಸಲಾಗಿದೆ. ಕಾರ್ಖಾನೆಗೆ ಈಗಾಗಲೇ ಆಧುನಿಕ ಹಾಗೂ ಹೊಸ ಯಂತ್ರೋಪಕರಣಗಳನ್ನು ಅಳವಡಿಸಲಾಗುತ್ತಿದ್ದು, ಮುಂದಿನ 1 ವರ್ಷದ ಬಳಿಕ ವಾರ್ಷಿಕ 3 ಸಾವಿರ ಕೋಚ್‌ಗಳನ್ನು ನಿರ್ಮಿಸಲಾಗುವುದು. ಅಭಿವೃದ್ಧಿಯ ಅಂಗವಾಗಿ ಕೆಲ ವರ್ಷಗಳಲ್ಲಿ ವಾರ್ಷಿಕ 5 ಸಾವಿರ ಕೋಚ್‌ಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಉತ್ತರ ಪ್ರದೇಶಕ್ಕೆ ಹಿಂದಿನ ಸರಕಾರ ಮಾಡಿರುವ ಅನ್ಯಾಯ ಏನು ಎಂಬುದು ತಿಳಿಯುವ ಕಾಲ ಬಂದಿದೆ. ಮುಂದಿನ ದಿನಗಳಲ್ಲಿ ಇದೇ ಕೋಚ್‌ ಕಾರ್ಖಾನೆಯಲ್ಲಿ ಸೆಮಿ ಹೈಸ್ಪೀಡ್‌, ಮೆಟ್ರೋ, ಅಲ್ಯುಮಿನಿಯಂ ಕೋಚ್‌ಗಳು ಇಲ್ಲೇ ನಿರ್ಮಾಣ ಆಗಲಿದೆ. ಯುವಕರಿಗೆ ಹೆಚ್ಚಿನ ಉದ್ಯೋಗ ನೀಡಲು ಅನುಕೂಲವಾಗಲಿದೆ. ರಾಯ್‌ ಬರೇಲಿಯ ಲಘು ಹಾಗೂ ಮಧ್ಯಮ ಉದ್ಯಮಿಗಳಿಗೂ ಉಪಯೋಗವಾಗಲಿದೆ ಎಂದು ಹೇಳಿದರು.

ಕಾರ್ಖಾನೆಯಲ್ಲಿನ ಆಧುನಿಕ ಯಂತ್ರೋಪಕರಣಗಳನ್ನು ವೀಕ್ಷಿಸಿದ ಪ್ರಧಾನಿ ಮೋದಿ, ಸಂಸ್ಥೆಯಿಂದ ತಯಾರಿಸಿದ 900 ನೇ ರೈಲ್ವೆ ಬೋಗಿಗೆ ಹಸಿರು ನಿಶಾನೆ ತೋರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ