ಆ್ಯಪ್ನಗರ

ಟೆಲಿಕಾಂ ವಲಯದ ಮೇಲಿನ ಒತ್ತಡ ಇಳಿಕೆಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಮೋದಿ ಸಂಪುಟ

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದೇಶದ ಟೆಲಿಕಾಂ ವಲಯದ ಮೇಲಿನ ಒತ್ತಡ ಇಳಿಕೆಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶುಲ್ಕ ಬಾಕಿ ಪಾವತಿಗೆ ಟೆಲಿಕಾಂ ಕಂಪನಿಗಳಿಗೆ ಸರಕಾರ ಇನ್ನೂ ಎರಡು ವರ್ಷಗಳ ಅವಕಾಶ ಕೊಟ್ಟಿದೆ.

Vijaya Karnataka Web 21 Nov 2019, 1:18 pm
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ದೇಶದ ಟೆಲಿಕಾಂ ವಲಯದ ಮೇಲಿನ ಒತ್ತಡ ಇಳಿಕೆಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
Vijaya Karnataka Web telcos


ತರಂಗಾಂತರ ಹರಾಜು ಶುಲ್ಕ ಬಾಕಿ ಪಾವತಿಗೆ ಟೆಲಿಕಾಂ ಕಂಪನಿಗಳಿಗೆ ಸರಕಾರ ಇನ್ನೂ ಎರಡು ವರ್ಷಗಳ ಕಾಲಾವಕಾಶ ನೀಡಿದೆ. ಸದ್ಯ ಬ್ಯಾಂಕ್‌ ಗ್ಯಾರಂಟಿ ನೀಡಿ, ಎರಡು ವರ್ಷಗಳಲ್ಲಿಸ್ಪೆಕ್ಟ್ರಂ ಹರಾಜು ಕಂತು ಪಾವತಿ ಮಾಡಿದರೆ ಸಾಕು ಎಂದು ಕಾರ್ಯದರ್ಶಿಗಳ ಸಮಿತಿ ಮಾಡಿದ್ದ ಶಿಫಾರಸನ್ನು ಸಂಪುಟ ಸಮಿತಿ ಅನುಮೋದಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದಾರೆ.

ಸದ್ಯ ಎರಡನೇ ತ್ರೈಮಾಸಿಕದಲ್ಲಿ 1 ಲಕ್ಷ ಕೋಟಿ ರೂ.ಗಿಂತ ಅಧಿಕ ಮೊತ್ತದ ನಷ್ಟವನ್ನು ತೋರಿಸಿರುವ ದೇಶದ ಪ್ರತಿಷ್ಠಿತ ಕಂಪನಿಗಳಿಗೆ ಸರಕಾರದ ಈ ನಡೆಯಿಂದ ರಿಲೀಫ್‌ ಸಿಗಲಿದೆ. ಲೈಸೆನ್ಸ್‌ ಶುಲ್ಕ, ಸ್ಪೆಕ್ಟ್ರಂ ಬಳಕೆ ಶುಲ್ಕ ಹಾಗೂ ಇತರ ಶುಲ್ಕಗಳು ಸೇರಿದಂತೆ ದೇಶದ ಟೆಲಿಕಾಂ ಕಂಪನಿಗಳು ಸರಕಾರಕ್ಕೆ ಸುಮಾರು 1.47 ಲಕ್ಷ ಕೋಟಿ ರೂ. ಪಾವತಿಸಬೇಕಿದೆ. ಇತ್ತೀಚಿನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಟೆಲಿಕಾಂ ಕಂಪನಿಗಳು ಮೂರು ತಿಂಗಳೊಳಗೆ ಬಾಕಿ ಶುಲ್ಕ ಪಾವತಿಸುವಂತೆ ನಿರ್ದೇಶಿಸಿತ್ತು.

4ಜಿಗೆ ಹೆಚ್ಚಿದ ಬೇಡಿಕೆ: 3ಜಿ ತಂತ್ರಜ್ಞಾನ ಸ್ಧಗಿತಕ್ಕೆ ಏರ್‌ಟೆಲ್ ಚಾಲನೆ

ಬಿಪಿಸಿಎಲ್‌ ಖಾಸಗೀಕರಣ: ದೇಶದ ಇತಿಹಾಸದಲ್ಲಿಅತಿದೊಡ್ಡ ಖಾಸಗೀಕರಣ ಹೆಜ್ಜೆ ಎನಿಸಲಿರುವ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿ. (ಬಿಪಿಸಿಎಲ್‌) ಸೇರಿದಂತೆ ಇತರ 4 ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿ ಸುಪರ್ದಿಗೆ ನೀಡುವ ಮಹತ್ವದ ನಿರ್ಧಾರಕ್ಕೆ ಸಂಪುಟ ಸಭೆಯಲ್ಲಿಸಮ್ಮತಿ ಸಿಕ್ಕಿದೆ. ಕೆಲವು ಸಾರ್ವಜನಿಕ ಉದ್ದಿಮೆಗಳಲ್ಲಿಸರಕಾರದ ಪಾಲನ್ನು ಶೇ. 51ಕ್ಕಿಂತ ಕಡಿಮೆಗೆ ಇಳಿಸಿ ಆದಾಯ ಹೆಚ್ಚಳಕ್ಕೂ ಕೂಡ ಸರಕಾರ ಚಿಂತಿಸಿದೆ.

ಸಾಮಾಜಿಕ ಜಾಲತಾಣ ಖಾತೆಗೆ ಆಧಾರ್‌ ಜೋಡಣೆ ಇಲ್ಲ: ನೆಟ್ಟಿಗರಿಗೆ ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ