ಆ್ಯಪ್ನಗರ

ಪ್ರಧಾನಿ ಮೋದಿ ತ್ರಿರಾಷ್ಟ್ರ ಪ್ರವಾಸಕ್ಕೆ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ, 5 ದಿನಗಳಾವಧಿಯ ಪ್ರವಾಸದ ಮೇರೆಗೆ ಮಂಗಳವಾರ ಇಂಡೋನೇಷಿಯಾ ರಾಜಧಾನಿ ಜಕಾರ್ತ ತಲುಪಿದರು. ಬಳಿಕ ಮಲೇಷಿಯಾ ಮತ್ತು ಸಿಂಗಾಪುರಕ್ಕೆ ಪ್ರಧಾನಿ ಪ್ರವಾಸ ಕೈಗೊಳ್ಳಲಿದ್ದಾರೆ.

Vijaya Karnataka 30 May 2018, 10:42 am
ಹೊಸದಿಲ್ಲಿ/ಜಕಾರ್ತ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ, 5 ದಿನಗಳಾವಧಿಯ ಪ್ರವಾಸದ ಮೇರೆಗೆ ಮಂಗಳವಾರ ಇಂಡೋನೇಷಿಯಾ ರಾಜಧಾನಿ ಜಕಾರ್ತ ತಲುಪಿದರು. ಬಳಿಕ ಮಲೇಷಿಯಾ ಮತ್ತು ಸಿಂಗಾಪುರಕ್ಕೆ ಪ್ರಧಾನಿ ಪ್ರವಾಸ ಕೈಗೊಳ್ಳಲಿದ್ದಾರೆ.
Vijaya Karnataka Web Modi Tour


ಇಂಡೋನೇಷಿಯಾಗೆ ಇದೇ ಮೊದಲ ಬಾರಿ ಆಗಮಿಸಿದ ಮೋದಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

''ಪ್ರಧಾನಿಯಾಗಿ ಇಂಡೋನೇಷಿಯಾಕ್ಕೆ ಇದು ನನ್ನ ಮೊದಲ ಭೇಟಿ. ಇಲ್ಲಿನ ಅಧ್ಯಕ್ಷ ವಿಡೊಡೊ ಅವರೊಂದಿಗೆ ಮೇ 30ರಂದು ಸಮಾಲೋಚನೆ ನಡೆಸಲಿದ್ದೇನೆ. ಇಂಡೋನೇಷ್ಯಾದ ಸಿಇಒಗಳ ವೇದಿಕೆ ಜತೆಯೂ ಸಂವಾದ ನಡೆಸುತ್ತನೆ. ನಂತರ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತೇನೆ,'' ಎಂದು ಮೋದಿ ಹೇಳಿದರು.

ಆಸಿಯಾನ್‌ (ಅಸೋಸಿಯೇಷನ್‌ ಆಫ್‌ ಸೌತ್‌ಈಸ್ಟ್‌ ಏಷ್ಯನ್‌ ನೇಷನ್ಸ್‌) ರಾಷ್ಟ್ರಗಳ ಜತೆಗಿನ ಬಾಂಧವ್ಯ ವೃದ್ಧಿ ಹಾಗೂ ಒಡಂಬಡಿಕೆಗಳಿಗೆ ಒತ್ತು ನೀಡುವುದು ಈ ಪ್ರವಾಸದ ಉದ್ದೇಶ ಎಂದು ಪ್ರಧಾನಿಯವರ ಫೇಸ್‌ಬುಕ್‌ ಖಾತೆಯಲ್ಲಿ ತಿಳಿಸಲಾಗಿದೆ.

ಸಿಂಗಾಪುರ ಚರಣದಲ್ಲಿ ಪ್ರಧಾನಿ ಕಾರ್ಯಕ್ರಮ

* ಹಣಕಾಸು ತಂತ್ರಜ್ಞಾನ, ಕೌಶಲ ಅಭಿವೃದ್ಧಿ, ನಗರ ಯೋಜನೆ, ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವು ವಿಷಯಗಳಲ್ಲಿ ದ್ವಿಪಕ್ಷೀಯ ಪಾಲುದಾರಿಕೆ ಅಭಿವೃದ್ಧಿಗೆ ಒತ್ತು ನೀಡುವ ವಿಚಾರದಲ್ಲಿ ಸಮಾಲೋಚನೆ.

* ಸಂಭಾವ್ಯ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳ ಕುರಿತು ಚರ್ಚೆ.

* ಶುಕ್ರವಾರ, ಸಿಂಗಾಪುರ ಅಧ್ಯಕ್ಷರ ನಿವಾಸಕ್ಕೆ ಭೇಟಿ. ನಂತರ ಪ್ರಧಾನಿ ಲೀ ಸಿಯೆನ್‌ ಲೂಂಗ್‌ ಜತೆ ನಿಯೋಗ ಮಟ್ಟದ ಮಾತುಕತೆ. ತದನಂತರ ನನ್ಯಾಂಗ್‌ ಟೆಕ್ನಾಲಜಿಕಲ್‌ ಯೂನಿವರ್ಸಿಟಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳ ಜತೆ ಸಂವಾದ.

* ಶುಕ್ರವಾರ ಸಂಜೆ ಶಾಂಘ್ರಿಲಾ ಡೈಲಾಗ್‌ನಲ್ಲಿ ಮಹತ್ವದ ಭಾಷಣ.

* ಶನಿವಾರ, 'ಕ್ಲಿಫರ್ಡ್‌ ಪಿಯರ್‌' ಫಲಕ ಅನಾವರಣ (ಇದು, 1948ರ ಮಾರ್ಚ್‌ 27ರಂದು ಗಾಂಧೀಜಿಯವರ ಚಿತಾಭಸ್ಮವನ್ನು ಸಮುದ್ರದಲ್ಲಿ ತೇಲಿಬಿಟ್ಟ ಜಾಗ).

* 5 ದಿನಗಳ ಪ್ರವಾಸದ ಅಂತಿಮ ಚರಣದಲ್ಲಿ ಚಾಂಗಿ ನೌಕಾನೆಲೆಗೆ ಭೇಟಿ. ಅಲ್ಲಿ ಭಾರತೀಯ ನೌಕೆ 'ಐಎನ್‌ಎಸ್‌ ಸತ್ಪುರ' ಇರುವ ಸ್ಥಳಕ್ಕೆ ತೆರಳಿ ಭಾರತೀಯ ನೌಕಾದಳ ಹಾಗೂ ರಾಯಲ್‌ ಸಿಂಗಾಪುರ ನೌಕಾದಳದ ನೌಕಾಧಿಕಾರಿಗಳು ಹಾಗೂ ನಾವಿಕರೊಂದಿಗೆ ಅಭಿಪ್ರಾಯ ವಿನಿಮಯ.

* ಶನಿವಾರ ರಾತ್ರಿ ಭಾರತಕ್ಕೆ ವಾಪಸ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ