ಆ್ಯಪ್ನಗರ

ಮೋದಿಗೆ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರೋನ್‌ ಅವರಿಗೆ ವಿಶ್ವ ಸಂಸ್ಥೆಯ ಅತ್ಯುನ್ನತ ಪರಿಸರ ಗೌರವವನ್ನು ಜಂಟಿಯಾಗಿ ನೀಡಲಾಗಿದೆ...

Vijaya Karnataka 28 Sep 2018, 5:30 am
ವಿಶ್ವ ಸಂಸ್ಥೆ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರೋನ್‌ ಅವರಿಗೆ ವಿಶ್ವ ಸಂಸ್ಥೆಯ ಅತ್ಯುನ್ನತ ಪರಿಸರ ಗೌರವವನ್ನು ಜಂಟಿಯಾಗಿ ನೀಡಲಾಗಿದೆ.
Vijaya Karnataka Web ನರೇಂದ್ರ ಮೋದಿ
ನರೇಂದ್ರ ಮೋದಿ


ಅಂತಾರಾಷ್ಟ್ರೀಯ ಸೌರ ಮೈತ್ರಿ ಮತ್ತು ಪರಿಸರ ರಕ್ಷಣೆಗೆ ಸಂಬಂಧಿಸಿ ಹೊಸ ಹೊಸ ಕ್ಷೇತ್ರಗಳಲ್ಲಿ ಸಹಕಾರ ನೀಡುವಲ್ಲಿ ವಹಿಸಿದ ಮುಂಚೂಣಿ ಪಾತ್ರಕ್ಕಾಗಿ ಈ ಗೌರವ ನೀಡಲಾಗಿದೆ.

ಭೂಮಿ ಪ್ರಶಸ್ತಿ (ಅರ್ಥ್‌ ಅವಾರ್ಡ್‌)ಯ ಚಾಂಪಿಯನ್‌ಗಳೆಂದೇ ಗುರುತಿಸಲಾದ ಜಗತ್ತಿನ ಆರು ಮಂದಿ ಪಾರಿಸರಿಕ ಕ್ರಾಂತಿಪುರುಷರ ಪಟ್ಟಿಯಲ್ಲಿ ಮೋದಿ ಮತ್ತು ಮ್ಯಾಕ್ರೋನ್‌ ಸೇರಿದ್ದಾರೆ.

ಏನಿದು ಸೌರಮೈತ್ರಿ?: ಆಂತಾರಾಷ್ಟ್ರೀಯ ಸೌರ ಮೈತ್ರಿ (ಐಎಸ್‌ಎ) ಎನ್ನುವುದು ಮೋದಿ ಮತ್ತು ಮ್ಯಾಕ್ರೋನ್‌ ಅವರು ಜಂಟಿಯಾಗಿ ಚಾಲನೆ ನೀಡಿದ ಭಾರತದ ಪರಿಕಲ್ಪನೆ. ಜಗತ್ತಿನಾದ್ಯಂತ ಸೌರಶಕ್ತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ರಾಷ್ಟ್ರಗಳ ಜತೆ ಮೈತ್ರಿ ಮಾಡಿಕೊಳ್ಳುವುದು ಇದರ ಉದ್ದೇಶ. ಈಗ ನಡೆಯುತ್ತಿರುವ ವಿಶ್ವ ಸಂಸ್ಥೆಯ 73ನೇ ಮಹಾಧಿವೇಶನದಲ್ಲೇ ಪ್ರಶಸ್ತಿ ವಿತರಣೆ ನಡೆಯಲಿದೆ.

ಕೊಚ್ಚಿ ಏರ್‌ಪೋರ್ಟ್‌ಗೂ ಪ್ರಶಸ್ತಿ: ಜಗತ್ತಿನ ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣ ಎಂಬ ಗೌರವಕ್ಕೆ ಪಾತ್ರವಾದ ಕೊಚ್ಚಿನ್‌ ವಿಮಾನ ನಿಲ್ದಾಣಕ್ಕೂ ಪ್ರಶಸ್ತಿ ನೀಡಲಾಗಿದೆ.

ಮೋದಿಗೆ ಯಾಕೆ?

2022ರೊಳಗೆ ಪ್ಲಾಸ್ಟಿಕ್‌ ಮುಕ್ತ ಭಾರತ ನಿರ್ಮಿಸುವ ಅಭೂತಪೂರ್ವ ಸಂಕಲ್ಪಕ್ಕಾಗಿ.

ಮ್ಯಾಕ್ರೋನ್‌ಗೆ ಯಾಕೆ?

ಪರಿಸರಕ್ಕೆ ಸಂಬಂಧಿಸಿ ಜಾಗರಿಕ ಒಪ್ಪಂದವನ್ನು ರೂಪಿಸುವಲ್ಲಿ ವಹಿಸಿದ ಪಾತ್ರಕ್ಕಾಗಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ