ಆ್ಯಪ್ನಗರ

‘ನಿಮ್ಮ ಛಲದ ಬಲವಿಲ್ಲದೆ ಮಾನವನ ಪ್ರಗತಿ ಅಪೂರ್ಣ’: ಇಂಜಿನಿಯರ್ಸ್‌ ಡೇಗೆ ಪ್ರಧಾನಿ ಶುಭಾಶಯ

ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ. . ಕನ್ನಂಬಾಡಿಯ ಕಟ್ಟದಿದ್ದರೆ.. ಈ ಹಾಡಿನಲ್ಲೇ ಗೊತ್ತಾಗುತ್ತೆ ವಿಶ್ವೇಶ್ವರಯ್ಯನವರ ಪ್ರಾಮುಖ್ಯತೆ. ಭಾರತರತ್ನ ಸರ್ ಎಂವಿ ಅವರ ಹುಟ್ಟುಹಬ್ಬದ ದಿನವಾದ ಇಂದು, ದೇಶದ ಇಂಜಿನಿಯರ್‌ಗಳ ಸಮೂಹಕ್ಕೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಶುಭ ಕೋರಿದ್ದಾರೆ.

TIMESOFINDIA.COM 15 Sep 2019, 11:42 am

ಹೊಸ ದಿಲ್ಲಿ: ಇಂಜಿನಿಯರ್ಸ್ ಡೇ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಇಂಜಿನಿಯರ್‌ಗಳ ಸಾಧನೆ ಹೊಗಳಿದ್ದಾರೆ. ಹೊಸತನ್ನು ಸೃಷ್ಟಿಸಬೇಕೆಂಬ ಇಂಜಿನಿಯರುಗಳ ಛಲದ ಬಲವಿಲ್ಲದೆ ಮಾನವನ ಪ್ರಗತಿ ಅಪೂರ್ಣವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Vijaya Karnataka Web modi vishweshwarayya


ಪರಿಶ್ರಮ ಹಾಗೂ ದೃಢ ನಿರ್ಧಾರಕ್ಕೆ ವಿಜ್ಞಾನಿಗಳು ಸಮಾನಾರ್ಥಕ ಎಂದು ಬಣ್ಣಿಸಿರುವ ಪ್ರಧಾನಿ, ಹೊಸತನ್ನು ಸೃಷ್ಟಿಸಬೇಕೆಂಬ ಇಂಜಿನಿಯರುಗಳ ಛಲದ ಬಲವಿಲ್ಲದೆ ಮಾನವನ ಪ್ರಗತಿ ಅಪೂರ್ಣವಾಗುತ್ತದೆ ಎಂದು ಹೊಗಳಿದ್ದಾರೆ. ಕಠಿಣ ಪರಿಶ್ರಮವಹಿಸಿ ದುಡಿಯುವ ಎಲ್ಲ ಇಂಜಿನಿಯರ್‌ಗಳಿಗೂ ನನ್ನ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಸರ್. ಎಂ. ವಿಶ್ವೇಶ್ವರಯ್ಯನವರ ಹುಟ್ಟುಹಬ್ಬದ ಅಂಗವಾಗಿ ಇಂಜಿನಿಯರ್‌ಗಳ ದಿನ ಆಚರಿಸಲಾಗುತ್ತಿದ್ದು, ಸರ್.ಎಂವಿ ಅವರ ಕೊಡುಗೆಯನ್ನೂ ಪ್ರಧಾನಿ ಸ್ಮರಿಸಿದ್ದಾರೆ.


ಭಾರತದಲ್ಲಿ ಸೆಪ್ಟಂಬರ್ 15ನೇ ತಾರೀಖಿನಂದು ಇಂಜಿನಿಯರುಗಳ ದಿನ ಆಚರಿಸಲಾಗುತ್ತದೆ. ಕನ್ನಡಿಗರ ಹೆಮ್ಮೆ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನದಂದೇ ಇಂಜಿನಿಯರುಗಳ ದಿನ ಆಚರಣೆ ಮಾಡಲಾಗುತ್ತಿದೆ. ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸರ್. ಎಂ. ವಿಶ್ವೇಶ್ವರಯ್ಯನವರು ಕೊಟ್ಟ ಕಾಣಿಕೆ ಹಾಗೂ ರಾಜಕಾರಣಿಯಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯ. ಕಾವೇರಿ ನದಿಗೆ ಅಡ್ಡಲಾಗಿ ಕೆಆರ್‌ಎಸ್ ಡ್ಯಾಂ ಕಟ್ಟುವ ಐತಿಹಾಸಿಕ ಯೋಜನೆಯ ಮುಖ್ಯ ಇಂಜಿನಿಯರ್ ಆಗಿ ವಿಶ್ವೇಶ್ವರಯ್ಯನವರು ದುಡಿದಿದ್ದರು. ಅಷ್ಟೇ ಅಲ್ಲ, ಹೈದ್ರಾಬಾದ್‌ ನಗರಕ್ಕೆ ಪ್ರವಾಹದಿಂದ ರಕ್ಷಣೆ ಒದಗಿಸುವ ಯೋಜನೆ ಸೇರಿದಂತೆ ಹಲವು ಐತಿಹಾಸಿಕ ಸಿವಿಲ್ ಇಂಜಿನಿಯರಿಂಗ್ ಕೊಡುಗೆಗಳನ್ನು ಭಾರತರತ್ನ ಸರ್. ಎಂವಿ ಕೊಟ್ಟಿದ್ದಾರೆ.

ಇಂದು ಇಂಜಿನಿಯರ್ಸ್‌ ಡೇ: ನಾಡು ಕಟ್ಟಿದ ಅವಿಸ್ಮರಣೀಯ ಮಹನೀಯ ವಿಶ್ವೇಶ್ವರಯ್ಯ

ವಿಶ್ವೇಶ್ವರಯ್ಯ ಅವರ ಜನ್ಮದಿನ ಹಾಗೂ ಇಂಜಿಯರ್‌ಗಳ ದಿನಕ್ಕೆ ಸಚಿವ ಕೆ. ಎಸ್‌. ಈಶ್ವರಪ್ಪ ಕೂಡಾ ಶುಭಾಶಯ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ