ಆ್ಯಪ್ನಗರ

ಪ್ರಧಾನಿ ಮೋದಿ ಭಾಷಣ ತಯಾರಿಗೆ ನೀವೂ ಸಲಹೆ ನೀಡಿ!

ಸ್ವಾತಂತ್ರ್ಯೋತ್ಸವ ದಿನದ ಭಾಷಣಕ್ಕೆ ಸಹ ಪ್ರಧಾನಿ ಮೋದಿ ಜನರಿಂದ ಸಲಹೆಗಳ್ನು ಆಹ್ವಾನಿಸಿದ್ದರು. ಮತ್ತೀಗ ಹೂಸ್ಟನ್ ಕಾರ್ಯಕ್ರಮದಲ್ಲೂ ದೇಶವಾಸಿಗಳಿಂದ ಸಲಹೆ ಕೇಳಿದ್ದಾರೆ.

Vijaya Karnataka Web 17 Sep 2019, 8:56 am
ಹೊಸದಿಲ್ಲಿ: ಹೋಸ್ಟನ್‌ನಲ್ಲಿ ಇದೇ ತಿಂಗಳ 22 ರಂದು ನಡೆಯಲಿರುವ ಹೌದಿ ಮೋದಿ ಮೆಗಾ ಕಾರ್ಯಕ್ರಮದ ಭಾಷಣಕ್ಕೆ ಪ್ರಧಾನಿ ಮೋದಿ ಜನರ ಸಲಹೆಗಳನ್ನು ಆಹ್ವಾನಿಸಿದ್ದಾರೆ. ನನ್ನ ಭಾಷಣಕ್ಕೆ ನಿಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
Vijaya Karnataka Web Narendra Modi 1200


ದೇಶದ ಜನತೆ ನೀಡುವ ಕೆಲ ಅತ್ಯುತ್ತಮ ಸಲಹೆಗಳನ್ನು ಭಾಷಣದಲ್ಲಿ ಉಲ್ಲೇಖಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.


"22 ರಂದು ಹೂಸ್ಟನ್‌ನಲ್ಲಿ ನಡೆಯುತ್ತಿರುವ # ಹೌದಿಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉತ್ಸಾಹದಿಂದ ಕಾಯುತ್ತಿದ್ದೇನೆ. ಆ ದಿನ ನಾನು ಮಾಡಲಿರುವ ಭಾಷಣಕ್ಕೆ ನಿಮ್ಮ ಸಲಹೆಗಳನ್ನು ಅಪೇಕ್ಷಿಸುತ್ತಿದ್ದು, ನಿಮ್ಮ ಅಭಿಪ್ರಾಯ, ಸಲಹೆ, ವಿಚಾರಗಳನ್ನು ನನ್ನ ಜತೆ ಹಂಚಿಕೊಳ್ಳಿ. ಅದರಲ್ಲಿ ಅತ್ಯುತ್ತಮ ಎನ್ನಿಸಿದ್ದನ್ನು ನಾನು ನನ್ನ ಭಾಷಣದಲ್ಲಿ ಅಳವಡಿಸಿಕೊಳ್ಳಲಿದ್ದೇನೆ. ನಿಮ್ಮ ವಿಚಾರಗಳನ್ನು ನಮೋ ಆ್ಯಪ್‌ನಲ್ಲಿನ ವಿಶೇಷ ಮುಕ್ತ ವೇದಿಕೆಯಲ್ಲಿ ಹಂಚಿಕೊಳ್ಳಿ'', ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಅಮೆರಿಕದಾದ್ಯಂತ ನೆಲೆಸಿರುವ 50,000ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಸೆಪ್ಟೆಂಬರ್‌ 22ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. "ಹೌದಿ ಮೋದಿ! ಕನಸುಗಳನ್ನು ಹಂಚಿಕೊಳ್ಳಿ, ಉಜ್ವಲ ಭವಿಷ್ಯಕ್ಕೆ", ಎಂಬ ಘೋಷವಾಕ್ಯದಡಿ ಈ ಮೆಗಾ ಕಾರ್ಯಕ್ರಮ ನಡೆಯಲಿದೆ. ಹೋಸ್ಟನ್‌ನ ಸ್ಪ್ರಾಲಿಂಗ್‌ ಎನ್‌ಆರ್‌ಜಿ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಇತ್ತೀಚೆಗೆ ವಿಶ್ವದ ಬೃಹತ್ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿರುವ ಎರಡು ರಾಷ್ಟ್ರಗಳ ನಾಯಕರು ಒಂದೇ ವೇದಿಕೆಯಲ್ಲಿ ಜಂಟಿಯಾಗಿ ಭಾಷಣ ಮಾಡಿರುವ ಇತಿಹಾಸವಿಲ್ಲ. ಈ ಕಾರ್ಯಕ್ರಮವು ಟ್ರಂಪ್‌ ಆಡಳಿತ ಮತ್ತು ಮೋದಿ ಸರ್ಕಾರದ ಒಪ್ಪಂದಗಳನ್ನು ಪ್ರತಿಬಿಂಬಿಸಲಿದೆ.

ಎರಡೂ ರಾಷ್ಟ್ರಗಳ ನಡುವಿನ ಸಹಭಾಗಿತ್ವ ಯೋಜನೆಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಇದೊಂದು ಉತ್ತಮ ಅವಕಾಶ. ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ಗಟ್ಟಿಗೊಳಿಸಲು ಹಾಗೂ ಅಮೆರಿಕದ ಸಮಾಜ ಮತ್ತು ಆರ್ಥಿಕತೆಯ ಬೆಳವಣಿಗೆಗೆ ಭಾರತೀಯ ಪ್ರಜೆಗಳ ಕೊಡುಗೆಯನ್ನು ಗುರುತಿಸಲು ಇದೊಂದು ಉತ್ತಮ ಅವಕಾಶ ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಅಮೆರಿಕನ್‌ ಹಿಂದು ಸಂಸದೆ ತುಳಸಿ ಗರ್ಬಾಡ್‌, ಸಂಸದ ರಾಜಾ ಕೃಷ್ಣಮೂರ್ತಿ ಸೇರಿದಂತೆ 60 ಮಂದಿ ಪ್ರಮುಖ ಸಂಸದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ