ಆ್ಯಪ್ನಗರ

ಭಯೋತ್ಪಾದನೆಗೆ ಮತ್ತೊಂದು ಹೆಸರೇ ಪಾಕಿಸ್ತಾನ, ಪ್ರತೀಕಾರ ನಿಶ್ಚಿತ: ಮೋದಿ

ದಿವಾಳಿಯಾಗಿರುವ ರಾಷ್ಟ್ರವೊಂದು ಈಗ ಭಯೋತ್ಪಾದನೆಯ ರಾಷ್ಟ್ರವಾಗಿದೆ. ಪುಲ್ವಾಮ ದಾಳಿಗೆ ಸೂಕ್ತ ಪ್ರತೀಕಾರ ತೆಗೆದುಕೊಳ್ಳುತ್ತೇವೆ. ಆದರೆ ಸ್ವಲ್ಪ ತಾಳ್ಮೆಯಿಂದಿರಿ. ನಮ್ಮ ಸೇನಾಪಡೆಗಳ ಮೇಲೆ ಭರವಸೆ ಇರಲಿ ಎಂದು ಜನರಿಗೆ ಮೋದಿ ಕೇಳಿಕೊಂಡಿದ್ದಾರೆ.

Vijaya Karnataka Web 16 Feb 2019, 5:04 pm
ಯವತ್ಮಾಲ್: ಪುಲ್ವಾಮ ಉಗ್ರದಾಳಿಯ ಕುರಿತು ಜನಸಾಮಾನ್ಯರ ಆಕ್ರೋಶ ಮತ್ತೆ ಭುಗಿಲೇಳುತ್ತಿರುವ ಬೆನ್ನಲ್ಲೇ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆಗೆ ಮತ್ತೊಂದು ಹೆಸರೇ ಪಾಕಿಸ್ತಾನ ಎಂದಿದ್ದಾರೆ.
Vijaya Karnataka Web Modi


ದಿವಾಳಿಯಾಗಿರುವ ರಾಷ್ಟ್ರವೊಂದು ಈಗ ಭಯೋತ್ಪಾದನೆಯ ರಾಷ್ಟ್ರವಾಗಿದೆ. ಪುಲ್ವಾಮ ದಾಳಿಗೆ ಸೂಕ್ತ ಪ್ರತೀಕಾರ ತೆಗೆದುಕೊಳ್ಳುತ್ತೇವೆ. ಆದರೆ ಸ್ವಲ್ಪ ತಾಳ್ಮೆಯಿಂದಿರಿ. ನಮ್ಮ ಸೇನಾಪಡೆಗಳ ಮೇಲೆ ಭರವಸೆ ಇರಲಿ ಎಂದು ಮೋದಿ ಜನರಿಗೆ ಕೇಳಿಕೊಂಡಿದ್ದಾರೆ.

ಪಂಧಾಕವಾಡದ ಯವತ್ಮಾಲ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪುಲ್ವಾಮ ಘಟನೆಯ ಬಗ್ಗೆ ನಮಗೆ ನಿಜಕ್ಕೂ ಖೇದವಿದೆ. ಅದಕ್ಕಾಗಿ ಸೇನಾಪಡೆಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ.


ಅವರಿಗೆ ಯಾವುದೇ ಅನುಮತಿಯ ಅಗತ್ಯವಿಲ್ಲ. ಹೀಗಾಗಿ ಉಗ್ರರು ಮತ್ತು ಕೃತ್ಯಕ್ಕೆ ಕಾರಣರಾದವರ ವಿರುದ್ಧ ಯಾವ ರೀತಿಯಲ್ಲಿ, ಯಾವಾಗ ಮತ್ತು ಹೇಗೆ ಕಾರ್ಯಾಚರಣೆ ನಡೆಸಬೇಕು ಎನ್ನುವುದನ್ನು ಸೇನೆ ನಿರ್ಧರಿಸುತ್ತದೆ. ಅವರ ಯಾವುದೇ ನಿರ್ಧಾರಕ್ಕೆ ಸರಕಾರದ ಪೂರ್ಣ ಬೆಂಬಲವಿದೆ. ಆದರೆ ಜನರು ಸ್ವಲ್ಪ ತಾಳ್ಮೆಯಿಂದಿರಬೇಕು ಎಂದು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ