ಆ್ಯಪ್ನಗರ

ಜಿಎಸ್‌ಟಿ ಈಗ ಮತ್ತಷ್ಟು ಸರಳ: ಪ್ರಧಾನಿ ಮೋದಿ

ಜಿಎಸ್‌ಟಿ ಮಂಡಳಿಯ ನೂತನ ಶಿಫಾರಸುಗಳ ಬಳಿಕ ಜಿಎಸ್‌ಟಿ ಈಗ ಮತ್ತಷ್ಟು ಸರಳೀಕರಣಗೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Vijaya Karnataka 7 Oct 2017, 10:17 am

ಹೊಸದಿಲ್ಲಿ: ಜಿಎಸ್‌ಟಿ ಮಂಡಳಿಯ ನೂತನ ಶಿಫಾರಸುಗಳ ಬಳಿಕ ಜಿಎಸ್‌ಟಿ ಈಗ ಮತ್ತಷ್ಟು ಸರಳೀಕರಣಗೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಜನರ ಹಿತಾಸಕ್ತಿ ಕಾಯುವ ಮತ್ತು ಆರ್ಥಿಕ ಪ್ರಗತಿಯನ್ನು ಕಾಯ್ದುಕೊಳ್ಳುವ ಸರಕಾರದ ಪ್ರಯತ್ನಗಳಿಗೆ ಇದರಿಂದ ಇಂಬು ದೊರೆತಿದೆ ಎಂದು ಅವರು ಹೇಳಿದ್ದಾರೆ.

ಉತ್ತಮ ಪ್ರತಿಕ್ರಿಯೆಗೆ ಅನುವು ಮಾಡಿಕೊಟ್ಟ ಜಿಎಸ್‌ಟಿ ಕುರಿತಾದ ಹೊಸ ಪರಿಷ್ಕರಣೆಗಳಿಗಾಗಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಮತ್ತು ಮಂಡಳಿ ಸದಸ್ಯರನ್ನು ಪ್ರಧಾನಿ ಅಭಿನಂದಿಸಿದ್ದಾರೆ.

ನಿತ್ಯ ಬಳಕೆಯ ಎರಡು ಡಜನ್ನಿಗೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್‌ಟಿ ದರದಲ್ಲಿ ಗಣನೀಯ ಇಳಿಕೆ ಮಾಡಲಾಗಿದೆ. ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರಿಗೂ ಅನುಕೂಲಕಾರಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜನರ ಹಿತರಕ್ಷಣೆಯೇ ತಮ್ಮ ಸರಕಾರದ ಅಂತಿಮ ಗುರಿ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

PM Narendra Modi says changes have made GST 'even simpler
Vijaya Karnataka Web pm narendra modi says changes have made gst even simpler
ಜಿಎಸ್‌ಟಿ ಈಗ ಮತ್ತಷ್ಟು ಸರಳ: ಪ್ರಧಾನಿ ಮೋದಿ


NEW DELHI: Prime Minister Narendra Modi tonight said the GST has become "even simpler" after GST Council's recommendations and that it is in line with the government's constant endeavour to safeguard citizens' interests and ensure India's economy grows.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ