ಆ್ಯಪ್ನಗರ

ಬಕ್ರೀದ್ ಹಬ್ಬ ಸಹೋದರತ್ವ, ಸಹಾನುಭೂತಿ ಮನೋಭಾವವನ್ನು ಹೆಚ್ಚಿಸಲಿ : ಪ್ರಧಾನಿ ಮೋದಿ ಶುಭಾಶಯ

ಬಕ್ರಿದ್ ಹಬ್ಬದ ಹಿನ್ನೆಲೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಎಲ್ಲರಿಗೂ ಈದ್-ಉಲ್-ಅದಾ ಹಬ್ಬದ ಶುಭಾಷಯಗಳು. ನ್ಯಾಯಯುತ, ಸಾಮರಸ್ಯ ಮತ್ತು ಸಮಾಜವನ್ನು ಒಟ್ಟುಗೂಡಿಸಲು ಈ ದಿನ ನಮಗೆ ಪ್ರೇರಣಾದಾಯಕವಾಗಲಿ. ಎಲ್ಲರಲ್ಲೂ ಸಹೋದರತ್ವ ಮತ್ತು ಸಹಾನುಭೂತಿಯ ಮನೋಭಾವವನ್ನು ಹೆಚ್ಚಿಸಲಿ ಎಂದು ಶುಭಾಶಯ ತಿಳಿಸಿದ್ದಾರೆ.

Vijaya Karnataka Web 1 Aug 2020, 9:34 am
ಹೊಸದಿಲ್ಲಿ: ಇಂದು ದೇಶದೆಲ್ಲೆಡೆ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಆಚರಿಸಲ್ಪಡುವ ಮುಸಲ್ಮಾನರ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರಿದ್ ಹಬ್ಬದ ಸಂಭ್ರಮ. ಕರ್ನಾಟಕದ ಕರಾವಳಿ ಭಾಗದಲ್ಲಿ ಶುಕ್ರವಾರ ಬಕ್ರಿದ್ ಹಬ್ಬವನ್ನು ಆಚರಿಸಿದರೆ ದೇಶದ ಬಹುತೇಕ ಕಡೆಗಳಲ್ಲಿ ಇಂದು ಆಚರಿಸಲಾಗ್ತಿದೆ.
Vijaya Karnataka Web NARENDRA MODI


Bakrid Wishes : ತ್ಯಾಗ ಬಲಿದಾನದ ಬಕ್ರೀದ್ : ಇಲ್ಲಿವೆ ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸು

ಬಕ್ರಿದ್ ಹಬ್ಬದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಷಯ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮೋದಿ, ಎಲ್ಲರಿಗೂ ಈದ್-ಉಲ್-ಅದಾ ಹಬ್ಬದ ಶುಭಾಷಯಗಳು. ನ್ಯಾಯಯುತ, ಸಾಮರಸ್ಯ ಮತ್ತು ಸಮಾಜವನ್ನು ಒಟ್ಟುಗೂಡಿಸಲು ಈ ದಿನ ನಮಗೆ ಪ್ರೇರಣಾದಾಯಕವಾಗಲಿ. ಎಲ್ಲರಲ್ಲೂ ಸಹೋದರತ್ವ ಮತ್ತು ಸಹಾನುಭೂತಿಯ ಮನೋಭಾವವನ್ನು ಹೆಚ್ಚಿಸಲಿ ಎಂದು ಶುಭಾಶಯ ತಿಳಿಸಿದ್ದಾರೆ.

2020 ಬಕ್ರೀದ್‌: ಮೇಕೆಯನ್ನು ಬಲಿ ಕೊಡಲು ಕಾರಣವೇನು..? ಇಲ್ಲಿದೆ ಹಬ್ಬದ ಮಹತ್ವ

ವಿಶ್ವದಾದ್ಯಂತ ಮುಸಲ್ಮಾನ ಬಾಂಧವರು ಶ್ರದ್ದೆಯಿಂದ ಆಚರಿಸುವ ಹಬ್ಬಗಳಲ್ಲಿ ಬಕ್ರೀದ್ ಕೂಡ ಪ್ರಾಮುಖ್ಯತೆಯನ್ನು ಪಡೆದಿದೆ. ಬಕ್ರೀದ್ ದಿನ ಬೆಳಗ್ಗೆ ಮಸೀದಿ ಮತ್ತು ಈದ್ಗಾಗಳಲ್ಲಿ ವಿಶೇಷ ನಮಾಜ್ ಇರುತ್ತದೆ. ಈ ವೇಳೆ ಮಕ್ಕಳು ಹಿರಿಯರೆನ್ನದೆ ಹೊಸ ಬಟ್ಟೆ ಧರಿಸಿ ಪಾಲ್ಗೊಳ್ಳುತ್ತಾರೆ. ಹಬ್ಬದ ವಿಶೇಷವಾಗಿ ಸ್ನೇಹಿತರು ಮತ್ತು ಸಂಬಂಧಿಕರ ಮನೆಗೆ ತೆರಳಿ ಬಕ್ರೀದ್ ಶುಭಾಷಯ ತಿಳಿಸಿ ಪರಸ್ಪರ ಕುಶಲೋಪರಿ ವಿಚಾರಿಸುವ ಪರಿಪಾಠವೂ ಹಿಂದಿನಿಂದ ಬಂದಿದೆ.

ಕುರ್ಬಾನಿ ನಡೆಸಲು ಸಿದ್ಧತೆ, ಆಡು-ಕುರಿಗೆ ಹೆಚ್ಚಿದ ಬೇಡಿಕೆ

ದೇಶದೆಲ್ಲೆಡೆ ಕೊರೊನಾ ಸಾಂಕ್ರಾಮಿಕ ರೋಗ ವಕ್ಕರಿಸಿರುವ ಹಿನ್ನೆಲೆ ಈ ವರ್ಷ ಬಕ್ರಿದ್ ಸೇರಿದಂತೆ ದೇಶದಲ್ಲಿ ಆಚರಿಸಲ್ಪಡುವ ಎಲ್ಲಾ ಹಬ್ಬಗಳು ಮೆರಗು ಕಳೆದುಕೊಂಡಿದ್ದು, ಬಕ್ರಿದ್ ಹಬ್ಬವನ್ನು ಕೂಡ ಬಹುತೇಕ ಕಡೆ ಸರಳವಾಗಿ ಆಚರಿಸಲಾಗ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ