ಆ್ಯಪ್ನಗರ

ನವೆಂಬರ್‌ 28ಕ್ಕೆ ಸೆರಂ ಇನ್ಸ್ಟಿಟ್ಯೂಟ್‌ಗೆ ಪ್ರಧಾನಿ ಮೋದಿ ಭೇಟಿ, ಲಸಿಕೆ ಉತ್ಪಾದನೆ ಪರಿಶೀಲನೆ

ಜಗತ್ತಿನ ಅತೀ ದೊಡ್ಡ ಲಸಿಕೆ ಉತ್ಪಾದನಾ ಸಂಸ್ಥೆ ಸೆರಂ ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯಾಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಕೋವಿಡ್‌ - 19 ಲಸಿಕೆಯ ಉತ್ಪಾದನೆ ಮತ್ತು ವಿತರಣೆ ವ್ಯವಸ್ಥೆಯನ್ನು ಪರಿಶೀಲನೆ ನಡೆಸಲಿದ್ದಾರೆ.

Agencies 26 Nov 2020, 4:00 pm
ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್‌ 28ರಂದು ಪುಣೆಯ ಖ್ಯಾತ ಸೆರಂ ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ)ಗೆ ಬೇಟಿ ನೀಡಲಿದ್ದಾರೆ. ಈ ವೇಳೆ ಅವರು ಕೋವಿಡ್‌ - 19 ಲಸಿಕೆ ಉತ್ಪಾದನೆ ಮತ್ತು ವಿತರಣೆ ವ್ಯವಸ್ಥೆಯನ್ನು ಪರಿಶೀಲನೆ ನಡೆಸಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Vijaya Karnataka Web Modi


ನವೆಂಬರ್‌ 28ರಂದು ಪುಣೆಗೆ ಪ್ರಧಾನಿ ಭೇಟಿ ನೀಡುವ ಬಗ್ಗೆ ನಮಗೆ ಅಧಿಕೃತ ಮಾಹಿತಿ ಬಂದಿದೆ. ಕೊರೊನಾ ಲಸಿಕೆಯ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಸೆರಂ ಇನ್ಸ್ಟಿಟ್ಯೂಟ್‌ಗೆ ಪ್ರಧಾನಿ ಭೇಟಿ ನೀಡಲಿದ್ದಾರೆ ಎಂದು ಪುಣೆ ವಿಭಾಗೀಯ ಆಯುಕ್ತ ಸೌರಭ್‌ ರಾವ್‌ ಹೇಳಿದ್ದಾರೆ.

ಪ್ರಧಾನಿ ಪುಣೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳ ಬಗ್ಗೆ ಸರಣಿ ಸಭೆಗಳು ನಡೆಯುತ್ತಿವೆ. ಎಸ್‌ಐಐನ ಹದಪ್ಸಾರ್‌ ಕ್ಯಾಂಪಸ್‌ನಲ್ಲಿರುವ ವಿವಿಧ ಸೌಲಭ್ಯಗಳನ್ನು ಪ್ರಧಾನಿ ವೀಕ್ಷಿಸಲಿದ್ದಾರೆ. ಈಗಾಗಲೇ ಸಂಸ್ಥೆಯು ಆಕ್ಸ್‌ಫರ್ಡ್‌ ವಿವಿ ಮತ್ತು ಆಸ್ಟ್ರಾಝೆನಿಕಾ ಕಂಪನಿಗಳು ಜಂಟಿಯಾಗಿ ತಯಾರಿಸಿರುವ ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆಯನ್ನು ಆರಂಭಿಸಿದೆ.

ಸೆರಂ ಜಗತ್ತಿನ ಅತೀ ದೊಡ್ಡ ಲಸಿಕೆ ಉತ್ಪಾದನಾ ಸಂಸ್ಥೆಯಾಗಿದ್ದು, ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆಗೆ ಆಕ್ಸ್‌ಫರ್ಡ್‌ ಮತ್ತು ಆಸ್ಟ್ರಾಝೆನಿಕಾ ಜೊತೆ ಒಪ್ಪಂದವನ್ನೂ ಮಾಡಿಕೊಂಡಿದೆ.

ಮೋದಿ ಭೇಟಿಯ ಸಂಪೂರ್ಣ ವಿವರ ಅಪರಾಹ್ನ ಸಿದ್ಧವಾಗಲಿದೆ. ಭೇಟಿ ವೇಳೆ ಲಸಿಕೆಗೆ ಚಾಲನೆ, ಉತ್ಪಾದನೆ ಮತ್ತು ವಿತರಣೆಗೆ ನಡೆಸಲಾಗಿರುವ ಸಿದ್ಧತೆಗಳನ್ನು ಪ್ರಧಾನಿ ಪರಿಶೀಲಿಸಲಿದ್ದಾರೆ ಎಂದು ಇನ್ನೋರ್ವ ಅಧಿಕಾರಿ ಹೇಳಿದ್ದಾರೆ.

ಮೋದಿ ಭೇಟಿಯ ನಂತರ, ಹಲವು ದೇಶಗಳ ರಾಯಭಾರಿಗಳೂ ಪುಣೆಯ ಸೆರಂ ಇನ್ಸ್ಟಿಟ್ಯೂಟ್‌ಗೆ ಡಿಸೆಂಬರ್‌ 4 ರಂದು ಭೇಟಿ ನೀಡಲಿದ್ದಾರೆ. ಇವರು ಕೂಡ ಲಸಿಕೆಯ ಉತ್ಪಾದನೆ ಮತ್ತು ವಿತರಣೆಯ ವ್ಯವಸ್ಥೆಗಳನ್ನು ಪರಿಶೀಲಿಸಲಿದ್ದಾರೆ. ಒಂದೇ ದಿನ ಎರಡು ತಂಡಗಳಲ್ಲಿ ವಿದೇಶಿ ರಾಯಭಾರಿಗಳು ಸೆರಂಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ರಾಯಭಾರಿಗಳ ತಂಡ ಲಸಿಕೆ ತಯಾರಿಸುವ ಜೆನ್ನೋವಾ ಬಯೋಫಾರ್ಮಾಸ್ಯುಟಿಕಲ್ಸ್‌ ಲಿ.ಗೂ ಭೇಟಿ ನೀಡಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ