ಆ್ಯಪ್ನಗರ

ಪಿಒಕೆನಲ್ಲಿ ಜನಿಸಿ ಕಾಶ್ಮೀರ ಚುನಾವಣೆ ಗೆದ್ದ ಇಬ್ಬರು ಮಹಿಳೆಯರು

ಪಂಚಾಯಿತಿ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ಉಗ್ರರು ಕಣಿವೆಯಲ್ಲಿ ಮೊದಲಿನಿಂದಲೂ ಬೆದರಿಕೆ ಹಾಕುತ್ತಲೇ ಬಂದಿದ್ದಾರೆ. ಇಂತಹ ಬೆದರಿಕೆಗಳಿಂದ ಕಡಿಮೆ ಮತದಾನ ನಡೆದಿದ್ದು, ಅದರ ಮಧ್ಯೆಯೇ ದಿಲ್‌ಶಾದಾ ಬೇಗಂ ಮತ್ತು ಆರಿಫಾ ಬೇಗಂ ಗೆದ್ದು ಗಮನ ಸೆಳೆದಿದ್ದಾರೆ.

Vijaya Karnataka 14 Nov 2018, 10:13 am
ಶ್ರೀನಗರ: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಜನಿಸಿ, ಮಾಜಿ ಉಗ್ರರನ್ನು ಮದುವೆಯಾಗಿ ಜಮ್ಮು-ಕಾಶ್ಮೀರದಲ್ಲಿ ನೆಲೆಸಿರುವ 30-35ರ ಆಸುಪಾಸಿನ ಇಬ್ಬರು ಮಹಿಳೆಯರು ಕುಪ್ವಾರ ಜಿಲ್ಲೆಯ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಹೊಸ ದಾಖಲೆ ಬರೆದಿದ್ದಾರೆ.
Vijaya Karnataka Web Muslim 1


ಪಂಚಾಯಿತಿ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ಉಗ್ರರು ಕಣಿವೆಯಲ್ಲಿ ಮೊದಲಿನಿಂದಲೂ ಬೆದರಿಕೆ ಹಾಕುತ್ತಲೇ ಬಂದಿದ್ದಾರೆ. ಇಂತಹ ಬೆದರಿಕೆಗಳಿಂದ ಕಡಿಮೆ ಮತದಾನ ನಡೆದಿದ್ದು, ಅದರ ಮಧ್ಯೆಯೇ ದಿಲ್‌ಶಾದಾ ಬೇಗಂ ಮತ್ತು ಆರಿಫಾ ಬೇಗಂ ಗೆದ್ದು ಗಮನ ಸೆಳೆದಿದ್ದಾರೆ.

1990ರ ದಶಕದಲ್ಲಿ ಉಗ್ರ ಕೃತ್ಯದ ತರಬೇತಿ ಪಡೆಯಲು ಕಾಶ್ಮೀರಕ್ಕೆ ಗಡಿ ನುಸುಳಿ ಬಂದಿದ್ದ ಮೊಹಮ್ಮದ್‌ ಯೂಸಫ್‌ ಭಟ್‌ನನ್ನು 2004ರಲ್ಲಿ ದಿಲ್‌ಶಾದಾ ಮದುವೆಯಾಗಿ, 2012ರಲ್ಲಿ ನೇಪಾಳದ ಮೂಲಕ ಕಾಶ್ಮೀರಕ್ಕೆ ಬಂದು ಪುನರ್‌ವಸತಿ ಯೋಜನೆಯಡಿ ಬಂದೂಕು ಬಿಟ್ಟು ಕಿರಾಣಿ ಅಂಗಡಿ ನಡೆಸುವ ಹೊಸ ಬದುಕು ಕಂಡುಕೊಂಡ ಪತಿಯ ಜತೆ ನೆಲೆಸಿದರು. ಪಿಒಕೆಯ ರಾಜಧಾನಿ ಮುಜಫ್ಫರಾಬಾದ್‌ನಲ್ಲಿ ಜನಿಸಿದ ಇವರು ಬೆಳೆದಿದ್ದೆಲ್ಲವೂ ಪಾಕ್‌ ಪಂಜಾಬ್‌ ಪ್ರಾಂತ್ಯದ ರಾವಲ್ಪಿಂಡಿಯಲ್ಲಿ. ಹೀಗಾಗಿಯೇ ಕಾಶ್ಮೀರದ ಜೀವನ ಅವರಿಗೆ ಹೊಸದಾಗಿತ್ತು. ಈಗ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ.

ಇನ್ನು ಆರಿಫಾ ಬೇಗಂ ಅವರದ್ದೂ ಇದೇ ತೆರನಾದ ಕಥೆ. ಉಗ್ರ ಸಂಘಟನೆ ಸೇರಿ ಗಡಿ ನುಸುಳಿ ಬಂದು, ಬಳಿಕ ಹೊಸ ಜೀವನ ಕಟ್ಟಿಕೊಂಡ ಗುಲಾಂ ಮೊಹಮ್ಮದ್‌ ಮಿರ್‌ ಅವರನ್ನು ಮದುವೆಯಾಗಿರುವ ಬೇಗಂ ಬಿಜೆಪಿಯಿಂದ ಕುಪ್ವಾರ ಜಿಲ್ಲೆಯ ಕುಮುರಿಯಾಲ್‌-ಬಿ ಪಟ್ಟಣದ ಪಾಂಚ್‌ ಮತ್ತು ಸರಪಂಚ್‌ ವಾರ್ಡ್‌ಗಳಿಗೆ ಸ್ಪರ್ಸಿ ಎರಡರಲ್ಲೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ