ಆ್ಯಪ್ನಗರ

ಹೆಸರು, ವಿಳಾಸದಲ್ಲಿ ಗೊಂದಲ: ಪೊಲೀಸರಿಂದ ಅಮಾಯಕನ ಬಂಧನ

ಹೆಸರು ಹಾಗೂ ತಂದೆಯ ಹೆಸರು ಒಂದೇ ಆಗಿದ್ದ ಹಿನ್ನೆಲೆಯಲ್ಲಿ ತಪ್ಪು ಮಾಡದ ವ್ಯಕ್ತಿಯೋರ್ವ ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟೇ ಅಲ್ಲ ಪೊಲೀಸರ ಗುಂಡಿಗೆ ಬಲಿಯಾಗುವ ಭಯದಲ್ಲಿ ಬದುಕುತ್ತಿದ್ದಾನೆ.

Navbharat Times 15 Jun 2018, 4:52 pm
ನೋಯ್ಡ: ಹೆಸರು ಹಾಗೂ ತಂದೆಯ ಹೆಸರು ಒಂದೇ ಆಗಿದ್ದ ಹಿನ್ನೆಲೆಯಲ್ಲಿ ತಪ್ಪು ಮಾಡದ ವ್ಯಕ್ತಿಯೋರ್ವ ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟೇ ಅಲ್ಲ ಪೊಲೀಸರ ಗುಂಡಿಗೆ ಬಲಿಯಾಗುವ ಭಯದಲ್ಲಿ ಬದುಕುತ್ತಿದ್ದಾನೆ.
Vijaya Karnataka Web police


ಗ್ರೇಟರ್ ನೋಯ್ಡಾ ಅಥಾರಿಟಿಯಲ್ಲಿ ಗುತ್ತಿಗೆ ಕೆಲಸಗಾರನಾಗಿರುವ ರಾಜು ಮೇಲೆ ಮಾರುತಿ ಕಾರು ಕಳ್ಳತನ ಮಾಡಿರುವ ಆರೋಪವಿದೆ. ರಾಜ್‌ ಕುಮಾರ್‌ ಅಲಿಯಾಸ್‌ ರಾಜು ನಿಜವಾದ ಆರೋಪಿ. ಇವನ ತಂದೆಯ ಹೆಸರೂ ಸತ್ಯಪಾಲ್‌ ಆಗಿರುವುದು ಸಮಸ್ಯೆಗೆ ಮೂಲ ಕಾರಣ. ಆರೋಪಿಯ ತಂದೆ ಹಾಗೂ ಆತನ ಹೆಸರು ಒಂದೇ ಆಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಕೆಲಸಗಾರನನ್ನು ಪೊಲೀಸರು ಬಂಧಿಸಿದ್ದಾರೆ.

ಇಂದಿರಾಪುರಂ ವಿಭಾಗದ ಎಸ್‌ಪಿ ಅಶ್ವಿನಿ ಕುಮಾರ್‌ ಅವರಿಗೆ ಸೇರಿದ ಮಾರುತಿ ವ್ಯಾನ್‌ ಕಳವು ಪ್ರಕರಣದಲ್ಲಿ ರಾಜುವನ್ನು ಪೊಲೀಸರು ಹುಡುಕುತ್ತಿದ್ದರು. ವಿಳಾಸ ಸೇರಿದಂತೆ ವಿವರಗಳನ್ನು ಹುಡುಕಿ ಬಂದಾಗ ಸಿಕ್ಕಿದ್ದು ಗುತ್ತಿಗೆ ನೌಕರ ರಾಜು. ಬಂಧಿಸಿ ವಿಚಾರಣೆ ನಡೆಸಿದ ಬಳಿಕ ತಾನು ಅಪರಾಧಿ ಅಲ್ಲ ಎಂದು ಪೊಲೀಸರಿಗೆ ಅನೇಕ ದಾಖಲೆಗಳನ್ನು ಒದಗಿಸಿದ್ದಾನೆ. ದಾಖಲೆಗಳನ್ನು ಪರಿಶೀಲಿಸಿ, ಪೊಲೀಸರು ಜಾಮೀನು ಮೇಳೆ ರಾಜುವನ್ನು ಬಿಡುಗಡೆ ಮಾಡಿದ್ದಾರೆ. ಆದರೆ ನಿಜವಾದ ಆರೋಪಿ ರಾಜುಗೆ ತೀವ್ರ ಶೋಧ ಆರಂಭಿಸಿದ್ದಾರೆ.

ಲಾಡ್ಪುರ ಗ್ರಾಮದಲ್ಲಿ ವಾಸಿಸುವ ರಾಜು, ಆರೋಪಿ ರಾಜಕುಮಾರ್‌ ಬಂಜಾರ ಸಮುದಾಯಕ್ಕೆ ಸೇರಿದವನು. ಈ ಗ್ರಾಮದಲ್ಲಿ ಬಂಜಾರ ಜನಾಂಗ ವಾಸಿಸುವುದಿಲ್ಲ ಎಂದು ವಿವರಣೆ ನೀಡಿದ ಬಳಿಕ ಪೊಲೀಸರು ರಾಜುವನ್ನು ಬಿಡುಗಡೆ ಮಾಡಿ, ಇಂದಿನ ವರೆಗೆ ಬಂಧಿಸಿಲ್ಲ.

ತಂದೆ ಹೆಸರು, ಆರೋಪಿ ಹೆಸರು, ವಿಳಾಸಗಳೆಲ್ಲವೂ ಒಂದೇ ಇದ್ದುದರಿಂದ ಪೊಲೀಸರು ಗೊಂದಲಕ್ಕೀಡಾಗಿ ಗುತ್ತಿಗೆ ನೌಕರ ರಾಜುವನ್ನು ಬಂಧಿಸಿದ್ದಾರೆ. ರಾಜು ಹೇಳಿದ ವಿವರಣೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ