ಆ್ಯಪ್ನಗರ

ರಾಹುಲ್‌, ಸೋನಿಯಾರಿಂದ ಅಸಹಿಷ್ಣುತೆ ರಾಜಕಾರಣ: ಅನಂತಕುಮಾರ್‌

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಸಹಿಷ್ಣುತೆಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಆರೋಪಿಸಿದ್ದಾರೆ.

Vijaya Karnataka 6 Apr 2018, 9:43 am
ಹೊಸದಿಲ್ಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಸಹಿಷ್ಣುತೆಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಆರೋಪಿಸಿದ್ದಾರೆ.
Vijaya Karnataka Web ಅನಂತ ಕುಮಾರ್‌


ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ಗದ್ದಲದಿಂದ ಸಂಸತ್‌ ಕಲಾಪ ಬಲಿಯಾಗಿದೆ. ವಿವಿಧ ಕಾರಣಗಳಿಂದಾಗಿ ಕಾಂಗ್ರೆಸ್‌ಗೂ ಸುಗಮವಾಗಿ ಕಲಾಪ ನಡೆಯುವುದು ಬೇಕಿಲ್ಲ ಎಂದು ಆಪಾದಿಸಿದರು.

ಸುಗಮ ಕಲಾಪಕ್ಕೆ ಆಗ್ರಹಿಸಿ ಪ್ರತಿಭಟನೆ ರೂಪವಾಗಿ ಎಲ್ಲ ಎನ್‌ಡಿಯ ಸಂಸದರು ವೇತನ ಸ್ವೀಕಸದಿರಲು ತೀರ್ಮಾನಿಸಿದ್ದೇವೆ. ಜನರ ತೆರಿಗೆ ಹಣದಿಂದ ನಾವು ವೇತನ ಪಡೆಯುತ್ತಿದ್ದೇವೆ. ಹಾಗಾಗಿ ನಾವು ವೇತನವನ್ನು ತ್ಯಜಿಸುತ್ತಿದ್ದೇವೆ. ಈ ಮೂಲಕವಾದರೂ ಕಾಂಗ್ರೆಸ್‌ನವರಿಗೆ ಮನವರಿಕೆಯಾಗಲಿ. ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದು ಸರಿಯಲ್ಲ. ಸರಿಯಾದ ಸಮಯದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿಲ್ಲ. ಇದರಿಂದ ಜನಪರ ಯೋಜನೆಗಳು ಮತ್ತು ವಿಧೇಯಕಗಳು ಅನುಮೋದನೆ ಆಗಿಲ್ಲ. ಹಾಗಾಗಿ ನಾವು ವೇತನವನ್ನು ತ್ಯಜಿಸುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಒಟ್ಟು 23 ದಿನಗಳ ವೇತನ ಮತ್ತು ಭತ್ಯೆಗಳನ್ನು ವಾಪಸ್‌ ಮಾಡುತ್ತಿದ್ದೇವೆ. ಎನ್‌ಡಿಎ ಅಂಗವಾಗಿರುವ ಎಲ್ಲ ಸಂಸದರಿಗೂ ಈ 'ಗೀವ್‌ ಇಟ್‌ ಅಪ್‌' ಪಾಲಿಸಿ ಅನ್ವಯವಾಗುತ್ತದೆ ಎಂದು ತಿಳಿಸಿದರು.

ನಾನು ಪ್ರತಿದಿನ ಕಲಾಪಕ್ಕೆ ಹೋಗುತ್ತಿದ್ದೆ. ಕಲಾಪವಾ ಸುಗಮವಾಗಿ ನಡೆಯದಿದ್ದರೆ ಅದು ನನ್ನ ತಪ್ಪಲ್ಲ. ಹಾಗಾಗಿ ನಾನು ವೇತನವನ್ನು ಹಿಂತಿರುಗಿಸುವುದಿಲ್ಲ. ಮೇಲಾಗಿ ನಾನು ರಾಷ್ಟ್ರಪತಿಯವರ ಪ್ರತಿನಿಧಿಯಾಗಿದ್ದೇನೆ. ಅವರು ಹೇಳದೆ ನಾನು ಹೇಗೆ ವೇತನವನ್ನು ತ್ಯಜಿಸಲಿ?
- ಡಾ.ಸುಬ್ರಮಣಿಯನ್‌ ಸ್ವಾಮಿ, ಬಿಜೆಪಿ ಮುಖಂಡ (ನಾಮನಿರ್ದೇಶಿತ ರಾಜ್ಯಸಭೆ ಸದಸ್ಯ )

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ