ಆ್ಯಪ್ನಗರ

ವಿಆರ್‌ಎಸ್‌ ಬಯಸಿದ ಹಿರಿಯ ಅಧಿಕಾರಿ ಗಾರ್ಗ್‌

ಹಣಕಾಸು ಕಾರ್ಯದರ್ಶಿಯಾಗಿಯೂ ನಿಯೋಜನೆಗೊಂಡಿದ್ದರು. ಇವರನ್ನು ಬುಧವಾರ ದಿಢೀರ್‌ ಇಂಧನ ಸಚಿವಾಲಯ ಕಾರ್ಯದರ್ಶಿಯಾಗಿ ಎತ್ತಂಗಡಿ ಮಾಡಿ ಸರಕಾರ ಆದೇಶ ಹೊರಡಿಸಿತ್ತು.

PTI 26 Jul 2019, 5:00 am
ಹೊಸದಿಲ್ಲಿ: ತಮ್ಮನ್ನು ಪ್ರಭಾವಿ ಕೇಂದ್ರ ಹಣಕಾಸು ಸಚಿವಾಲಯದಿಂದ ಇಂಧನ ಸಚಿವಾಲಯಕ್ಕೆ ಎತ್ತಂಗಡಿ ಮಾಡಿದ ಬಗ್ಗೆ ಅಸಮಾಧಾನಗೊಂಡಿರುವ ಹಿರಿಯ ಅಧಿಕಾರಿ ಸುಭಾಷ್‌ಚಂದ್ರ ಗಾರ್ಗ್‌ ಅವರು ಸೇವೆಯಿಂದ ಸ್ವಯಂ ನಿವೃತ್ತಿ ಬಯಸಿ ಗುರುವಾರ ಅರ್ಜಿ ಸಲ್ಲಿಸಿದ್ದಾರೆ. ಹಣಕಾಸು ಸಚಿವಾಲಯದ ಅತ್ಯಂತ ಹಿರಿಯ ಅಧಿಕಾರಿಯಾಗಿರುವ ಗಾರ್ಗ್‌, ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ) ಉಸ್ತುವಾರಿ ನೋಡಿಕೊಂಡಿದ್ದರು. ಹಣಕಾಸು ಕಾರ್ಯದರ್ಶಿಯಾಗಿಯೂ ನಿಯೋಜನೆಗೊಂಡಿದ್ದರು. ಇವರನ್ನು ಬುಧವಾರ ದಿಢೀರ್‌ ಇಂಧನ ಸಚಿವಾಲಯ ಕಾರ್ಯದರ್ಶಿಯಾಗಿ ಎತ್ತಂಗಡಿ ಮಾಡಿ ಸರಕಾರ ಆದೇಶ ಹೊರಡಿಸಿತ್ತು. ರಾಜಸ್ಥಾನ ಕೇಡರ್‌ನ 1983ರ ಬ್ಯಾಚ್‌ನ ಐಎಎಸ್‌ ಅಧಿಕಾರಿ ಗಾರ್ಗ್‌ ಅವರು 2017ರಿಂದ ಇಲ್ಲಿಯವರೆಗೆ ಆರ್ಥಿಕ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಿದ್ದರು. ಅದಕ್ಕೂ ಮೊದಲು 2014ರಲ್ಲಿ ಅವರು ವಿಶ್ವಬ್ಯಾಂಕ್‌ ಕಾರ್ಯಕಾರಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
Vijaya Karnataka Web subhash chandra garg

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ