ಆ್ಯಪ್ನಗರ

ಸೋಮವಾರದಿಂದ ಕಾಶ್ಮೀರ ಕಣಿವೆಯಲ್ಲಿ ಮತ್ತೆ ಮೊಬೈಲ್‌ ರಿಂಗಣ

ಶನಿವಾರ ಮಧ್ಯಾಹ್ನವೇ ಮೊಬೈಲ್‌ ಸೇವೆ ಪುನಾರಂಭವಾಗ­ಬೇಕಿತ್ತು, ಆದರೆ ತಾಂತ್ರಿಕ ತೊಂದರೆಯಿಂದಾಗಿ ಸೋಮವಾರಕ್ಕೆ ಮುಂದೂಡಲಾಗಿದೆ.

Vijaya Karnataka 13 Oct 2019, 1:10 pm
ಶ್ರೀನಗರ: ಸುಮಾರು ಎರಡು ತಿಂಗಳ ನಿರ್ಬಂಧದ ಬಳಿಕ ಜಮ್ಮು-ಕಾಶ್ಮೀರದಲ್ಲಿಸೋಮವಾರದಿಂದ ಪೋಸ್ಟ್‌ ಪೇಯ್ಡ್‌ ಮೊಬೈಲ್‌ ಸೇವೆ ಪುನಾರಂಭ­ವಾಗಲಿದೆ. ಸೋಮವಾರ ಮಧ್ಯಾಹ್ನದಿಂದ ಕಣಿವೆ ಪ್ರಾಂತ್ಯದ ಹತ್ತೂ ಜಿಲ್ಲೆಗಳಲ್ಲಿ, ಎಲ್ಲಕಂಪನಿಗಳ ಸುಮಾರು 40 ಲಕ್ಷ ಪೋಸ್ಟ್‌ ಪೇಯ್ಡ… ಮೊಬೈಲ್‌ ಚಂದಾದಾರರಿಗೆ ಸೇವೆ ಲಭ್ಯವಾಗಲಿದೆ ಎಂದು ರಾಜ್ಯ ಆಡಳಿತ ತಿಳಿಸಿದೆ.
Vijaya Karnataka Web Mobile


ಇದರಿಂದ 70 ದಿನಗಳ ಕಾಲ ಮೊಬೈಲ್‌ ಸಂಪರ್ಕವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಕಾಶ್ಮೀರ ಕಣಿವೆಯ ಜನರು ನಿರಾಳರಾಗಲಿದ್ದಾರೆ. ಶನಿವಾರ ಮಧ್ಯಾಹ್ನವೇ ಮೊಬೈಲ್‌ ಸೇವೆ ಪುನಾರಂಭವಾಗ­ಬೇಕಿತ್ತು, ಆದರೆ ತಾಂತ್ರಿಕ ತೊಂದರೆಯಿಂದಾಗಿ ಸೋಮವಾರಕ್ಕೆ ಮುಂದೂಡಲಾಗಿದೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ, ಸಂವಿಧಾನದ 370ನೇ ವಿಧಿ ರದ್ದು ನಂತರ ಆ. 5ರಿಂದ ಕಣಿವೆ ಪ್ರಾಂತ್ಯದಲ್ಲಿಮೊಬೈಲ್‌, ಇಂಟರ್ನೆಟ್‌ ನಿಷೇಧ ಸೇರಿದಂತೆ ಕೆಲವು ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಶುಕ್ರವಾರವಷ್ಟೇ ಕಾಶ್ಮೀರದಲ್ಲಿಪ್ರವಾಸೋದ್ಯಮ ಚಟುವಟಿಕೆ ಆರಂಭವಾಗಿದೆ. ಕೆಲದಿನಗಳ ಹಿಂದೆ ಸಾರ್ವಜನಿಕರು ಮತ್ತು ಮಾಧ್ಯಮಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಕೆಲವು ರಾಜಕೀಯ ನಾಯಕರನ್ನು ಗೃಹಬಂಧನದಿಂದ ವಿಮೋಚನೆಗೊಳಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ