ಆ್ಯಪ್ನಗರ

ಮುಂಬಯಿ ಸ್ಫೋಟ: ಮೂವರಿಗೆ ಜೀವಾವಧಿ

2002-03 ಮುಂಬಯಿ ಸ್ಫೋಟ ಪ್ರಕರಣದ ಮೂವರು ದೋಷಿಗಳಿಗೆ ಸ್ಪೆಷಲ್ ಪ್ರಿವೆನ್ಶನ್ ಆಫ್ ಟೆರರಿಂ ಕಾಯಿದೆ(ಪೋಟಾ) ಜಡ್ಜ್ ಪಿ.ಆರ್. ದೇಶ್‌ಮುಖ್ ಅವರು ಬುಧವಾರ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.

ಏಜೆನ್ಸೀಸ್ 6 Apr 2016, 2:35 pm
ಮುಂಬಯಿ: 2002-03 ಮುಂಬಯಿ ಸ್ಫೋಟ ಪ್ರಕರಣದ ಮೂವರು ದೋಷಿಗಳಿಗೆ ಸ್ಪೆಷಲ್ ಪ್ರಿವೆನ್ಶನ್ ಆಫ್ ಟೆರರಿಂ ಕಾಯಿದೆ(ಪೋಟಾ) ಜಡ್ಜ್ ಪಿ.ಆರ್. ದೇಶ್‌ಮುಖ್ ಅವರು ಬುಧವಾರ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.
Vijaya Karnataka Web pota court sentences 3 convicts to life 2002 03 mumbai blasts
ಮುಂಬಯಿ ಸ್ಫೋಟ: ಮೂವರಿಗೆ ಜೀವಾವಧಿ


2002ರ ಡಿಸೆಂಬರ್ ಮತ್ತು 2003ರ ಮಾರ್ಚ್‌ನಲ್ಲಿ ಸೆಂಟ್ರಲ್ ರೈಲ್ವೆ ಸ್ಟೇಷನ್, ವಿಲೆ ಪಾರ್ಲೆ, ಮುಲುಂದ್‌ಗಳಲ್ಲಿ ನಡೆದ ಸ್ಫೋಟದ ಸಂಚು ರೂಪಿಸಿ ಬಾಂಬ್ ಇಟ್ಟಿದ್ದ ಮುಜಾಮ್ಮಿಲ್ ಅನ್ಸಾರಿ, ಫರ್ಹಾನ ಖೋಟ್‌, ವಾಹಿದ್‌ ಅನ್ಸಾರಿ ಜೀವಾವಧಿ ಶಿಕ್ಷೆಗೆ ಒಳಗಾದವರು.

ಅಪರಾಧಿಗೆ ಗಲ್ಲು ವಿಧಿಸಿದರೆ ಸೆಕೆಂಡ್‌ನಲ್ಲಿ ಆತನ ಜೀವನ ಮುಗಿದು ಹೋಗುತ್ತದೆ. ಅದರಿಂದ ಸ್ಫೋಟದ ಬಲಿಪಶುಗಳ ಸಂಕಟಕ್ಕೆ ಮುಕ್ತಿ ಸಿಗುವುದಿಲ್ಲ. ಹೀಗಾಗಿ ಅಪರಾಧಿ ಸಾಯುವವರೆಗೆ ಜೈಲಿನಲ್ಲಿ ಸವೆಯಬೇಕು ಎಂದು ಹೇಳಿದ ಜಡ್ಜ್ ದೇಶಮುಖ್, ಅಪರಾಧಿಗೆ ಏಕೆ ಗಲ್ಲು ವಿಧಿಸುತ್ತಿಲ್ಲ ಎಂಬುದಕ್ಕೆ ಕಾರಣವನ್ನೂ ವಿವರಿಸಿದ್ದಾರೆ.

ಈ ತೀರ್ಪು ಸರಿಯಾಗಿ ನ್ಯಾಯ ನೀಡಿದೆ ಎಂದು ಅನಿಸುತ್ತಿಲ್ಲ ಎಂಬುದಾಗಿ ಸ್ಫೋಟದಲ್ಲಿ ಮೃತಪಟ್ಟಿರುವ ವ್ಯಕ್ತಿಯ ಸೋದರ ನಂದಕಿಶೋರ್ ಸಾಳ್ವಿ ಹೇಳಿದ್ದಾರೆ.

ಈ ಎರಡು ಸ್ಫೋಟಗಳಿಗೆ 12 ಮಂದಿ ಬಲಿಯಾಗಿದ್ದು, 130 ಮಂದಿ ಗಾಯಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ