ಆ್ಯಪ್ನಗರ

ವಿಶ್ವಾಸಮತ ಗೆದ್ದ ಸಾವಂತ್‌

ಬುಧವಾರ ನಡೆದ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತ ಕೋರುವ ನಿರ್ಣಯವನ್ನು ಸಾವಂತ್‌ ಮಂಡಿಸಿದರು. ನಿರ್ಣಯದ ಪರವಾಗಿ ಬಿಜೆಪಿ ನೇತೃತ್ವದ ಮೈತ್ರಿಕೂಟದ 20 ಶಾಸಕರು ಹಾಗೂ ವಿರುದ್ಧವಾಗಿ ಕಾಂಗ್ರೆಸ್‌ನ 14, ಎನ್‌ಸಿಒಯ ಏಕೈಕ ಶಾಸಕ ಮತ ಚಲಾಯಿಸಿದರು.

Vijaya Karnataka 21 Mar 2019, 5:00 am
ಪಣಜಿ: ನಿರೀಕ್ಷೆಯಂತೆಯೇ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಸರಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದೆ.
Vijaya Karnataka Web PramodSawant


ಬುಧವಾರ ನಡೆದ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತ ಕೋರುವ ನಿರ್ಣಯವನ್ನು ಸಾವಂತ್‌ ಮಂಡಿಸಿದರು. ನಿರ್ಣಯದ ಪರವಾಗಿ ಬಿಜೆಪಿ ನೇತೃತ್ವದ ಮೈತ್ರಿಕೂಟದ 20 ಶಾಸಕರು ಹಾಗೂ ವಿರುದ್ಧವಾಗಿ ಕಾಂಗ್ರೆಸ್‌ನ 14, ಎನ್‌ಸಿಒಯ ಏಕೈಕ ಶಾಸಕ ಮತ ಚಲಾಯಿಸಿದರು.

ಗಡ್ಕರಿ ಪ್ರಯತ್ನ: ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಮನೋಹರ್‌ ಪರಿಕ್ಕರ್‌ ನಿಧನದ ಬಳಿಕ ಸರಕಾರ ರಚಿಸುವ ಕಾಂಗ್ರೆಸ್‌ ಪ್ರಯತ್ನ ವಿಫಲಗೊಳಿಸಿ, ಸರಕಾರ ಉಳಿಸಿಕೊಂಡಿದ್ದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಎಂದು ಹೇಳಲಾಗುತ್ತಿದೆ. ಪರಿಕ್ಕರ್‌ ನಿಧನದ ಸುದ್ದಿ ತಿಳಿಯುತ್ತಲೇ ಗಡ್ಕರಿ ಪಣಜಿಗೆ ಆಗಮಿಸಿದ್ದರು. ಆದರೆ, ಬಿಜೆಪಿ ಮಿತ್ರಪಕ್ಷಗಳಾದ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ಮತ್ತು ಗೋವಾ ಫಾರ್ವರ್ಡ್‌ ಪಾರ್ಟಿ (ಜಿಎಫ್‌ಪಿ)ಗಗಳ ತಲಾ ಮೂವರು ಶಾಸಕರು, ಮೂವರು ಪಕ್ಷೇತರ ಶಾಸಕರನ್ನು ಸೆಳೆಯಲು ಕಾಂಗ್ರೆಸ್‌ ಪ್ರಯತ್ನಿಸಬಹುದು ಎಂಬ ಸುಳಿವು ಸಿಕ್ಕ ತಕ್ಷಣ ಗಡ್ಕರಿ ಕಾರ್ಯಾಚರಣೆಗೆ ಇಳಿದರು. ಭಾನುವಾರ ರಾತ್ರಿಯಿಡೀ ಮಿತ್ರಪಕ್ಷಗಳ ಜತೆ ಸಭೆ ನಡೆಸಿದರು. ಎಂಜಿಪಿಯ ಸುಧಿನ್‌ ಧವಳೀಕರ್‌ ಹಾಗೂ ಜಿಎಫ್‌ಪಿಯ ವಿಜಯ್‌ ಸರ್‌ದೇಸಾಯಿ ಇಬ್ಬರಿಗೂ ಉಪ ಮುಖ್ಯಮಂತ್ರಿ ಪಟ್ಟ ನೀಡುವ ಸೂತ್ರ ಸಿದ್ಧಪಡಿಸಿದ್ದೇ ಗಡ್ಕರಿ. ಇಬ್ಬರು ಡಿಸಿಎಂಗಳ ಸೂತ್ರಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹಸಿರು ನಿಶಾನೆ ತೋರಿದ ಬಳಿಕ ಮೈತ್ರಿ ಮಾತುಕತೆ ಆಖೈರುಗೊಂಡಿತು ಎಂದು ಎಂದು ಮೂಲಗಳು ತಿಳಿಸಿವೆ.

2017ರಲ್ಲಿಯೂ ಬಿಜೆಪಿ ಸರಕಾರ ರಚಿಸುವಲ್ಲಿ ಗಡ್ಕರಿ ಮಹತ್ವದ ಪಾತ್ರ ವಹಿಸಿದ್ದರು. ಆಗ 16 ಶಾಸಕರೊಂದಿಗೆ ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್‌ ಎಂಜಿಪಿ, ಜಿಎಫ್‌ಪಿ ಜತೆ ಸಂಪರ್ಕ ಬೆಳೆಸುವಷ್ಟರಲ್ಲೇ ಬಿಜೆಪಿ ಎರಡೂ ಪಕ್ಷಗಳನ್ನು ಸೆಳೆದುಕೊಂಡು ಸರಕಾರ ರಚನೆ ಹಕ್ಕು ಮಂಡಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ