ಆ್ಯಪ್ನಗರ

ಪೌರತ್ವ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ, ಕಾಯ್ದೆ ಜಾರಿ

ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಅನುಮೋದನೆಗೊಂಡ 'ಪೌರತ್ವ ತಿದ್ದುಪಡಿ ವಿಧೇಯಕ 2019' ಮಸೂದೆ ರಾಷ್ಟ್ರಪತಿಗಳ ಅಂಕಿತದೊಂದಿಗೆ ರಾಷ್ಟ್ರದಲ್ಲಿ ಅಧಿಕೃತವಾಗಿ ಜಾರಿಯಾಗಿದೆ.

Vijaya Karnataka Web 13 Dec 2019, 10:55 am
ಹೊಸದಿಲ್ಲಿ: ಬಹು ಚರ್ಚಿತ ಪೌರತ್ವ ವಿಧೇಯಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಗುರುವಾರ ಸಹಿ ಮಾಡಿದ್ದಾರೆ. ಇದರೊಂದಿಗೆ ಬುಧವಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿದ್ದ ಪೌರತ್ವ ವಿಧೇಯಕ 2019 ಅಧಿಕೃತವಾಗಿ ರಾಷ್ಟ್ರದಲ್ಲಿ ಜಾರಿಗೆ ಬಂದಿದೆ. ಸರಕಾರದ ಅಧಿಕೃತ ಗೆಜೆಟ್‌ನಲ್ಲಿ ಗುರುವಾರ ಈ ಕುರಿತು ಅಧಿಸೂಚನೆ ಪ್ರಕಣೆಯಾದ ನಂತರ ನೂತನ ಕಾಯ್ದೆ ಜಾರಿಗೆ ಬರಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
Vijaya Karnataka Web Ram Nath Kovind


ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನದಿಂದ ವಲಸೆ ಬಂದ ಹಿಂದೂ ಇತ್ಯಾದಿ ಮುಸ್ಲಿಮೇತರ ಧರ್ಮಿಯರಿಗೆ ಭಾರತದ ಶಾಶ್ವತ ಪೌರತ್ವ ಕಲ್ಪಿಸುವ 'ಪೌರತ್ವ ತಿದ್ದುಪಡಿ ವಿಧೇಯಕ - 2019' ಇದಾಗಿದ್ದು. ರಾಷ್ಟ್ರಪತಿ ಅಂಕಿತದೊಂದಿಗೆ ಅಧಿಕೃತವಾಗಿ ಜಾರಿಗೆ ಬಂದಿದೆ. ಈ ವಿಧೇಯಕದ ಬಗ್ಗೆ ಕೇಂದ್ರ ಸರಕಾರ ಈಗಾಗಲೇ ಹಲವು ಸಮರ್ಥಗಳನ್ನು ನೀಡಿದೆ. ಇದು ಮುಸ್ಲಿಂ ವಿರೋಧಿ ವಿದೇಯಕವಲ್ಲ; ಅಲ್ಪಸಂಖ್ಯಾತರು ಹೆದರುವ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರ ಅಭಯ ನೀಡಿದೆ.

ಇತರೆ ದೇಶಗಳಲ್ಲಿ ಧರ್ಮಾಧಾರಿತವಾಗಿ ಕಿರುಕುಳಕ್ಕೊಳಗಾದವರಿಗಷ್ಟೇ ಆಶ್ರಯ ಪಡೆಯಲು ಇದೊಂದು ಸುವರ್ಣಾವಕಾಶ. ಪಾಕಿಸ್ತಾನ, ಅಫ್ಗಾನಿಸ್ತಾನ, ಬಾಂಗ್ಲಾದೇಶದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ, ಅಲ್ಲಿ ಅವರು ಧಾರ್ಮಿಕ ಕಿರುಕುಳಕ್ಕೆ ಒಳಗಾಗಿಲ್ಲ. ಹಾಗಾಗಿ ಅವರನ್ನು ಈ ಮಸೂದೆಯಿಂದ ಹೊರಗಿಡಲಾಗಿದೆ. ಒಂದು ವೇಳೆ 1947ರಲ್ಲಿ ದೇಶವನ್ನು ವಿಭಜನೆ ಮಾಡದಿದ್ದರೆ ಈಗ ಇಂಥ ವಿಧೇಯಕದ ಅಗತ್ಯವೇ ಇರಲಿಲ್ಲ ಎಂದು ಕೇಂದ್ರ ಸರಕಾರ ಅಭಿಪ್ರಾಯ ವ್ಯಕ್ತ ಪಡಿಸಿದೆ.

ವಿಕ ಸಂಪಾದಕೀಯ: ಇದು ಘನ ಉದ್ದೇಶದ ಪೌರತ್ವ ಕಾಯಿದೆ, ತಿದ್ದುಪಡಿ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತ. ಈ ವಿಧೇಯಕ ಭಾರತೀಯ ಮುಸ್ಲಿಮರಿಗೆ ಅನ್ಯಾಯವನ್ನು ಮಾಡುವ ಸ್ವರೂಪವನ್ನು ಹೊಂದಿಲ್ಲ. ಮುಂದೆ ಓದಿ...

ಪೌರತ್ವ ತಿದ್ದುಪಡಿ ಮಸೂದೆ; ಮುಸ್ಲಿಮರು ಭಯಪಡಬೇಕಾಗಿಲ್ಲ- ಅಮಿತ್ ಶಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ