ಆ್ಯಪ್ನಗರ

ಸುದೀರ್ಘ ಲಾಕ್‌ಡೌನ್ ಬಳಿಕ ಮೊದಲ ಬಾರಿಗೆ ಬಾಗಿಲು ತೆರೆದ ಪ್ರೆಸ್ ಕ್ಲಬ್ ಅಫ್ ಇಂಡಿಯಾ!

ಮಾರಕ ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಲಾಕ್‌ಡೌನ್ ಬಳಿಕ ಮುಚ್ಚಲ್ಪಟ್ಟಿದ್ದ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಇಂದು(ಅ.30) ಅಧಿಕೃತವಾಗಿ ತನ್ನ ಬಾಗಿಲನ್ನು ತೆರೆದಿದೆ.

Vijaya Karnataka Web 30 Oct 2020, 8:03 pm
ಹೊಸದಿಲ್ಲಿ: ಮಾರಕ ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಲಾಕ್‌ಡೌನ್ ಬಳಿಕ ಮುಚ್ಚಲ್ಪಟ್ಟಿದ್ದ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಇಂದು(ಅ.30) ಅಧಿಕೃತವಾಗಿ ತನ್ನ ಬಾಗಿಲನ್ನು ತೆರೆದಿದೆ.

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ರೈಸಿನಾ ರಸ್ತೆಯಲ್ಲಿರುವ ಪ್ರೆಸ್ ಕ್ಲಬ್ ಆಫ್ ಇಂಡಿಯಾ,ಇಂದು(ಶುಕ್ರವಾರ)ಅಧಿಕೃತವಾಗಿ ಕಾರ್ಯಾರಂಭ ಮಾಡಿತು.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯವೇ ಪ್ರೆಸ್ ಕ್ಲಬ್ ಆಫ್ ಇಂಡಿಯಾ ತನ್ನ ಕಾರ್ಯಾರಂಭ ಮಾಡಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾವು ಕೊರೊನಾದಿಂದ ಎಷ್ಟು ಜೀವ ಉಳಿಸಿದ್ದೇವೆ ನೋಡಿ..! ನರೇಂದ್ರ ಮೋದಿ Exclusive ಸಂದರ್ಶನ

ಕಚೇರಿಯನ್ನು ದಿನಕ್ಕೆ ಮೂರು ಬಾರಿ ಸ್ವಚ್ಛಗೊಳಿಸಲಾಗುತ್ತಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಇನ್ನು ಕಚೇರಿಯ ಅಡುಗೆಮನೆಗೆ ಸದಸ್ಯರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಕ್ಲಬ್‌ಗೆ ಭೇಟಿ ನೀಡುವ ಎಲ್ಲಾ ಪತ್ರಕರರ್ತ ಸದಸ್ಯರನ್ನು ಪರೀಕ್ಷೆಗೆ ಗುರಿಮಾಡಲಾಗುತ್ತಿದೆ.

ಪ್ರೆಸ್ ಕ್ಲಬ್ ಆಫ್ ಇಂಡಿಯಾ:

ಪ್ರೆಸ್ ಕ್ಲಬ್ ಆಫ್ ಇಂಡಿಯಾ ಮೂಲತಃ ಪತ್ರಕರ್ತರ ಭೇಟಿಯ ಕೇಂದ್ರವಾಗಿದೆ. ಪ್ರೆಸ್ ಕ್ಲಬ್ ಆಫ್ ಇಂಡಿಯಾವನ್ನು ಸ್ಥಾಪಿಸುವ ಪ್ರಯತ್ನವನ್ನು, ಪ್ರಖ್ಯಾತ ಸಂಪಾದಕ ಮತ್ತು ಹಿರಿಯ ಪತ್ರಕರ್ತ ದುರ್ಗಾ ದಾಸ್ ಅವರು 1930 ರ ದಶಕದಲ್ಲೇ ಆರಂಭಿಸಿದ್ದರು. ಸತತ ಪರಿಶ್ರಮದ ಬಳಿಕ, ಮಾರ್ಚ್ 10, 1958ರಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಅಧಿಕೃತವಾಗಿ ತನ್ನ ಚಟುವಟಿಕೆಯನ್ನು ಆರಂಭಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ