ಆ್ಯಪ್ನಗರ

ನಾನೇನು ಶೆಹನ್‌ಶಾ ಅಥವಾ ಸರ್ವಾಧಿಕಾರಿ ಅಲ್ಲ: ಪ್ರಧಾನಿ ಮೋದಿ

ನಾನೇನು ಸರ್ವಾಧಿಕಾರಿ ಆಡಳಿತಗಾರನಲ್ಲ, ದೊರೆಯೂ ಅಲ್ಲ. ಜನರೊಂದಿಗೆ ಬೆರೆಯುವುದರಿಂದ ನನಗೇನೂ ತೊಂದರೆಯಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Vijaya Karnataka Web 3 Jul 2018, 6:17 pm
ಹೊಸದಿಲ್ಲಿ: ನಾನೇನು ಸರ್ವಾಧಿಕಾರಿ ಆಡಳಿತಗಾರನಲ್ಲ, ದೊರೆಯೂ ಅಲ್ಲ. ಜನರೊಂದಿಗೆ ಬೆರೆಯುವುದರಿಂದ ನನಗೇನೂ ತೊಂದರೆಯಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Vijaya Karnataka Web Modi people


ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವಬೆದರಿಕೆಯಿದ್ದು, ಭದ್ರತಾ ಅಂಶಗಳಲ್ಲಿ ಕೆಲವೊಂದು ಅಗತ್ಯ ಮಾರ್ಪಾಟು ಮಾಡಲಾಗುತ್ತದೆ. ಅಧಿಕಾರಿಗಳು ಕೂಡ ಮೋದಿ ಅವರ ಬಳಿ ತೆರಳಬೇಕಾದರೆ ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ ಎಂದು ಪ್ರಧಾನಿ ಭದ್ರತಾ ಪಡೆ ಮತ್ತು ಗೃಹ ಸಚಿವಾಲಯ ಹೇಳಿತ್ತು. ಇದರಿಂದಾಗಿ ಮೋದಿ ಭದ್ರತೆ ಮತ್ತಷ್ಟು ಹೆಚ್ಚಾಗಲಿದ್ದು, ಸಭೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೆಲವೊಂದು ನಿಯಮ ಪಾ ಲಿಸಬೇಕಾಗುತ್ತದೆ ಎನ್ನಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೋದಿ, ನಾನು ದೊರೆಯಂತೆ ಜೀವಿಸಲಾಗುವುದಿಲ್ಲ. ಜನರನ್ನು ಕಂಡರೆ ಮತ್ತು ಅವರು ನನ್ನನ್ನು ಭೇಟಿಯಾಗಲು ಹಾತೊರೆಯುವುದನ್ನು ಕಂಡರೆ, ನಾನು ಅವರತ್ತ ತೆರಳುತ್ತೇನೆ. ಜನರೊಂದಿಗೆ ಬೆರೆಯುವುದರಿಂದ ನನಗೆ ಹೆಚ್ಚು ಶಕ್ತಿ ದೊರೆಯುತ್ತದೆ ಎಂದಿದ್ದಾರೆ.

ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಪ್ರಧಾನಿ ಮೋದಿ ಅವರಿಗೆ ಭದ್ರತೆ ಹೆಚ್ಚಿಸಬೇಕು ಎಂದು ಗೃಹ ಸಚಿವಾಲಯ ಮಾರ್ಗಸೂಚಿ ಹೊರಡಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ