ಆ್ಯಪ್ನಗರ

ಸರ್ದಾರ್ ಸರೋವರ ಆಣೆಕಟ್ಟಿನ ಡೈನಾಮಿಕ್ ಡ್ಯಾಮ್ ಲೈಟಿಂಗ್ ಉದ್ಘಾಟಿಸಿದ ಪ್ರಧಾನಿ ಮೋದಿ!

ವಿಶ್ವ ವಿಖ್ಯಾತ ಸರ್ದಾರ್ ಸರೋವರದ ಆಣೆಕಟ್ಟಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಆಣೆಕಟ್ಟಿನ ಡೈನಾಮಿಕ್ ಡ್ಯಾಮ್ ಲೈಟಿಂಗ್‌ನ್ನು ಉದ್ಘಾಟಿಸಿದರು. ಇದೇ ವೇಳೆ ಏಕತಾ ಪ್ರತಿಮೆಯ ಅಧಿಕೃತ ವೆಬ್‌ಸೈಟ್ ಮತ್ತು ಕೆವಾಡಿಯಾದ ​​ಮೊಬೈಲ್ ಅಪ್ಲಿಕೇಶನ್‌ನನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.

Vijaya Karnataka Web 30 Oct 2020, 11:03 pm
ಕೆವಾಡಿಯಾ: ವಿಶ್ವ ವಿಖ್ಯಾತ ಸರ್ದಾರ್ ಸರೋವರದ ಆಣೆಕಟ್ಟಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಆಣೆಕಟ್ಟಿನ ಡೈನಾಮಿಕ್ ಡ್ಯಾಮ್ ಲೈಟಿಂಗ್‌ನ್ನು ಉದ್ಘಾಟಿಸಿದರು.

ಬಟನ್ ಒತ್ತುವ ಮೂಲಕ ಸರ್ದಾರ್ ಸರೋವರದ ಆಣೆಕಟ್ಟಿನ ಡೈನಾಮಿಕ್ ಡ್ಯಾಮ್ ಲೈಟಿಂಗ್‌ನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಈ ವೇಳೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಪ್ರಧಾನಿ ಮೋದಿಗೆ ಸಾಥ್ ನೀಡಿದರು.


ಇದೇ ವೇಳೆ ಏಕತಾ ಪ್ರತಿಮೆಯ ಅಧಿಕೃತ ವೆಬ್‌ಸೈಟ್ ಮತ್ತು ಕೆವಾಡಿಯಾದ ಮೊಬೈಲ್ ಅಪ್ಲಿಕೇಶನ್‌ನನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು. ಸರ್ದಾರ್ ವಲ್ಲಭಾಯಿ ಪಟೇಲ್‌ ಅವರ ವಿಶ್ವದ ಅತೀ ಎತ್ತರದ ಏಕತಾ ಪ್ರತಿಮೆ ಕುರಿತು ಈ ವೆಬ್‌ಸೈಟ್‌ನಲ್ಲಿ ಮಾಹಿತಿ ಇರಲಿದೆ.

ಬಳಿಕ ಪ್ರಧಾನಿ ಮೋದಿ ಕೆವಾಡಿಯಾದ 'ಯೂನಿಟಿ ಗ್ಲೋ ಗಾರ್ಡನ್'ಗೆ ಭೇಟಿ ನೀಡಿ ಉದ್ಯಾನವನದಲ್ಲಿ ಕೆಲಕಾಲ ಸಂಚರಿಸಿದರು.

ಗುಜರಾತ್‌: 5 ಲಕ್ಷಕ್ಕೂ ಅಧಿಕ ಔಷಧ ಗಿಡಗಳಿರುವ ಆರೋಗ್ಯ ವನ ಉದ್ಘಾಟಿಸಿದ ಪ್ರಧಾನಿ ಮೋದಿ, ಹೇಗಿದೆ ವನ?

ಇದಕ್ಕೂ ಮೊದಲು ಕೆವಾಡಿಯಾದಲ್ಲಿ ನಿರ್ಮಾಣವಾಗಿರುವ 5 ಲಕ್ಷಕ್ಕೂ ಅಧಿಕ ಔಷಧ ಗಿಡಗಳಿಗಿರುವ ಆರೋಗ್ಯ ವನವನ್ನು, ಪ್ರಧಾನಿ ಮೋದಿ ಉದ್ಘಾಟಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ