ಆ್ಯಪ್ನಗರ

ಮೋದಿ ಸಂಪುಟಕ್ಕೆ ಸರ್ಜರಿ: ಸುಷ್ಮಾಗೆ ಕೊಕ್?

ಪಂಚರಾಜ್ಯ ಚುನಾವಣಾ ಫಲಿತಾಂಶದಿಂದ ಬಿಜೆಪಿ ಗೆಲುವಿನ ನಗೆ ಬೀರುತ್ತಿದ್ದು, ಪ್ರಸಕ್ತ ನಡೆಯುತ್ತಿರುವ ಸಂಸತ್ ಅಧಿವೇಶನ ಮುಗಿದ ಬಳಿಕ ಕೇಂದ್ರ ಸರಕಾರದ ಸಚಿವ ಸಂಪುಟಕ್ಕೆ ಮೋದಿ ಸರ್ಜರಿ ಮಾಡುವ ಸಾಧ್ಯತೆಯಿದೆ.

ಏಜೆನ್ಸೀಸ್ 16 Mar 2017, 10:24 am
ಹೊಸದಿಲ್ಲಿ: ಪಂಚರಾಜ್ಯ ಚುನಾವಣಾ ಫಲಿತಾಂಶದಿಂದ ಬಿಜೆಪಿ ಗೆಲುವಿನ ನಗೆ ಬೀರುತ್ತಿದ್ದು, ಪ್ರಸಕ್ತ ನಡೆಯುತ್ತಿರುವ ಸಂಸತ್ ಅಧಿವೇಶನ ಮುಗಿದ ಬಳಿಕ ಕೇಂದ್ರ ಸರಕಾರದ ಸಚಿವ ಸಂಪುಟಕ್ಕೆ ಮೋದಿ ಸರ್ಜರಿ ಮಾಡುವ ಸಾಧ್ಯತೆಯಿದೆ.
Vijaya Karnataka Web prime minister narendra modi may go for cabinet reshuffle after april 12
ಮೋದಿ ಸಂಪುಟಕ್ಕೆ ಸರ್ಜರಿ: ಸುಷ್ಮಾಗೆ ಕೊಕ್?


ಈಗಾಗಲೇ ಕೆಲವು ಸಚಿವಾಲಯಗಳು ಖಾಲಿ ಇದ್ದು, ಈ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆ ಹಾಗೂ ಹೊಸ ಮುಖಗಳನ್ನು ಸೇರಿಸಿಕೊಳ್ಳಲು ಏ.12ರ ನಂತರ ಸಂಪುಟ ವಿಸ್ತರಣೆಯಾಗಲಿದೆ.

ಗೋವಾ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕರ್ ಅಧಿಕಾರ ಸ್ವೀಕರಿಸಿಕೊಂಡಿದ್ದರಿಂದ ರಕ್ಷಣಾ ಸಚಿವಾಲಯ ತೆರವಾಗಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿಗೇ ಈ ಖಾತೆಯ ಹೆಚ್ಚುವರಿ ಹೊಣೆ ನೀಡಲಾಗಿದೆ. ರಕ್ಷಣೆ ಹಾಗೂ ವಿತ್ತ ಖಾತೆಗಳು 'ಹೆಚ್ಚು ಕಾರ್ಯಭಾರ' ಹೊಂದಿದ್ದು, ಹೊಸ ರಕ್ಷಣಾ ಸಚಿವರನ್ನು ನೇಮಿಸುವ ಸಾಧ್ಯತೆ ಇದೆ.

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಕ್ಷಣಾ ಖಾತೆ ಜವಾಬ್ದಾರಿಯನ್ನು ಅರುಣ್ ಜೇಟ್ಲಿಗೆ ನೀಡಲಾಗಿತ್ತು. ಆದರೆ, ಅದು ಕಾರ್ಯಸಾಧು ಎನಿಸದ ಕಾರಣ ಆಗ ಗೋವಾ ಮುಖ್ಯಮಂತ್ರಿಯಾಗಿದ್ದ ಪರಿಕರ್ ಅವರಿಗೆ ಈ ಖಾತೆಯ ಜವಾಬ್ದಾರಿ ನೀಡಲಾಗಿತ್ತು.

ಸುಷ್ಮಾಗೆ ಕೊಕ್!

ಡಿಸೆಂಬರ್‌ನಲ್ಲಿ ಸುಷ್ಮಾ ಸ್ವರಾಜ್‌ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಅವರ ಜವಾಬ್ದಾರಿ ಕಡಿಮೆ ಮಾಡಲು, ಈ ಖಾತೆಯನ್ನು ಮತ್ತೊಬ್ಬರಿಗೆ ನೀಡುವ ಊಹಾಪೋಹಗಳಿವೆ. ಆದರೆ, ಬುಧವಾರ ಅವರು ಲೋಕಸಭೆಯಲ್ಲಿ ಆರಾಮಾಗಿ 15 ನಿಮಿಷಗಳ ಕಾಲ ನಿರರ್ಗಳ ಭಾಷಣ ಮಾಡಿದ್ದು, ಆರೋಗ್ಯವಾಗಿದ್ದಾರೆ ಎಂಬುವುದು ಸ್ಪಷ್ಟವಾಗುತ್ತಿತ್ತು. ವಿತ್ತ ಹಾಗೂ ರಕ್ಷಣಾ ಹೊಣೆ ಹೊತ್ತಿರುವ ಜೇಟ್ಲಿಗೆ ಯಾವ ಖಾತೆ ಬಿಟ್ಟು ಕೊಡಲಾಗುತ್ತದೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ.

ಹೊಸಬ್ಬರಿಗೆ ಮಣೆ ಹಾಕುವುದರೊಂದಿಗೆ, ಈಗಾಗಲೇ ಇರುವ ಸಚಿವರಿಗೆ ಬಡ್ತಿ ನೀಡುವ ಸಾಧ್ಯತೆಯೂ ಇದೆ. ಐದು ವರ್ಷಗಳ ಮೋದಿ ಸರಕಾರ ಮೂರು ವರ್ಷಗಳನ್ನು ಪೂರೈಸುತ್ತಿದ್ದು, ಪ್ರಮುಖ ಮುಖಂಡರಿಗೆ ಜವಾಬ್ದಾರಿ ಹೆಚ್ಚಿಸುವ ಸಾಧ್ಯತೆಗಳಿವೆ.

ಕಳೆದ ಜುಲೈನಲ್ಲಿ ಮೋದಿ ಸಚಿವ ಸಂಪುಟ ವಿಸ್ತರಿಸಿದ್ದು, ಮಾನವ ಸಂಪನ್ಮೂಲ ಸಚಿವಾಲಯದ ಹೊಣೆ ಹೊತ್ತ ಸ್ಮೃತಿ ಇರಾನಿಗೆ ಜವಳಿ ಖಾತೆ ಹಾಗೂ ಕಾನೂನಿನಿಂದ ಅಂಕಿ ಅಂಶಗಳ ಸಚಿವಾಲಯಕ್ಕೆ ಸದಾನಂದ ಗೌಡ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಜೇಟ್ಲಿ ಬಳಿ ಇದ್ದ ಮಾಹಿತಿ ಹಾಗೂ ಪ್ರಸಾರ ಖಾತೆ ಜವಾಬ್ದಾರಿಯನ್ನು ವೆಂಕಯ್ಯ ನಾಯ್ಡು ಅವರಿಗೆ ನೀಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ