ಆ್ಯಪ್ನಗರ

ನೆಹರೂ ಪುಣ್ಯ ಸ್ಮರಣೆ: ಪಿಎಂ ಮೋದಿ, ಕಾಂಗ್ರೆಸ್‌ ಗಣ್ಯರಿಂದ ಗೌರವಾರ್ಪಣೆ

1947ರಲ್ಲಿ ಭಾರತ ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರವಾದ ಬಳಿಕ ಮೊದಲ ಪ್ರಧಾನಿಯಾದ ಜವಾಹರಲಾಲ್‌ ನೆಹರೂ ತಮ್ಮ ಕೊನೆಯುಸಿರು ಇರುವವರೆಗೆ, ಅಂದರೆ ಮೇ 27, 1964ರ ವರೆಗೂ ನೆಹರೂ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.

Vijaya Karnataka Web 27 May 2019, 12:00 pm
ಹೊಸದಿಲ್ಲಿ: ರಾಷ್ಟ್ರದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ 55ನೇ ವಾರ್ಷಿಕ ಪುಣ್ಯ ಸ್ಮರಣೆಯ ಸಂದರ್ಭ ಪಿಎಂ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸ್ಮರಣಾರ್ಥ ಗೌರವಾರ್ಪಣೆ ಸಲ್ಲಿಸಿದ್ದಾರೆ.
Vijaya Karnataka Web prime minister narendra modi tribute to jawaharlal nehru on his twitter
ನೆಹರೂ ಪುಣ್ಯ ಸ್ಮರಣೆ: ಪಿಎಂ ಮೋದಿ, ಕಾಂಗ್ರೆಸ್‌ ಗಣ್ಯರಿಂದ ಗೌರವಾರ್ಪಣೆ


ಹೊಸದಿಲ್ಲಿಯ ಶಾಂತಿವನದಲ್ಲಿರುವ ಜವಾಹರಲಾಲ್‌ ನೆಹರೂ ಅವರ ಸಮಾಧಿಗೆ ಹಲವು ರಾಜಕಾರಣಿಗಳು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಗೌರವಾರ್ಪಣೆ ಮಾಡಿದ್ದಾರೆ.

ನಮ್ಮ ರಾಷ್ಟ್ರಕ್ಕೆ ಪಂಡಿತ್‌ ಜವಾಹರಲಾಲ್‌ ನೆಹರೂ ಜೀ ನೀಡಿದ ಕೊಡುಗೆಗಳು ನಮ್ಮ ನೆನಪಿನಲ್ಲಿದೆ. ಅವರ 55ನೇ ಪುಣ್ಯ ಸ್ಮರಣೆಯಂದು ಗೌರವ ಸಲ್ಲಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.


ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಮಾಜಿ ಉಪ ರಾಷ್ಟ್ರಪತಿ ಹಮಿದ್‌ ಅನ್ಸಾರಿ, ಕಾಂಗ್ರೆಸ್‌ ಮುಖ್ಯಸ್ಥ ರಾಹುಲ್‌ ಗಾಂಧಿ, ಯುಪಿಎ ವರಿಷ್ಠೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮುಂತಾದ ಗಣ್ಯರು ದಿಲ್ಲಿಯ ಶಾಂತಿವನದಲ್ಲಿರುವ ನೆಹರೂ ಸಮಾಧಿಗೆ ಗೌರವಾರ್ಪಣೆ ಸಲ್ಲಿಸಿದ್ದಾರೆ.

ಮಹಾತ್ಮ ಗಾಂಧಿ ಅವರ ನಾಯಕತ್ವದಲ್ಲಿ ಭಾರತ ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿದ ಬಳಿಕ ಜವಾಹರಲಾಲ್‌ ನೆಹರೂ ಅವರು ಮೊದಲ ಪ್ರಧಾನಿಯಾದರು. ಕೊನೆಯುಸಿರು ಇರುವವ ವರೆಗೆ, ಅಂದರೆ ಮೇ 27, 1964ರ ವರೆಗೂ ನೆಹರೂ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ