ಆ್ಯಪ್ನಗರ

ಬ್ರಿಟನ್‌ ಯುವರಾಜ ಪಾಕ್‌ಗೆ ಭೇಟಿ

ವಿದೇಶಾಂಗ ಹಾಗೂ ಕಾಮನ್‌ವೆಲ್ತ್‌ ಕಚೇರಿ(ಎಫ್‌ಸಿಒ) ಮನವಿ ಮೇರೆಗೆ ರಾಜವಂಶಸ್ಥರು ಪಾಕ್‌ ಭೇಟಿಗೆ ತೆರಳುತ್ತಿದ್ದಾರೆ. ಉಗ್ರರಿಂದ ದಾಳಿಯ ಆತಂಕದ ಹಿನ್ನೆಲೆಯಲ್ಲಿ ಯುವರಾಜ ವಿಲಿಯಮ್‌ ಹಾಗೂ ಕುಟುಂಬಸ್ಥರು ಪಾಕ್‌ ಭೇಟಿಗೂ ಮುನ್ನ ಒಂದು ವಾರ ತುರ್ತು ಪರಿಸ್ಥಿತಿ ಎದುರಿಸುವ ಬಗ್ಗೆ ತರಬೇತಿ ಪಡೆಯಲಿದ್ದಾರೆ.

PTI 1 Jul 2019, 5:00 am
ಲಂಡನ್‌: ಬ್ರಿಟನ್‌ ಯುವರಾಜ ವಿಲಿಯಮ್‌ ಹಾಗೂ ಯುವರಾಣಿ ಕೇಟ್‌ ಮಿಡ್ಲ್‌ಟನ್‌ ಈ ವರ್ಷಾಂತ್ಯದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.
Vijaya Karnataka Web prince william kate to make official visit to pakistan kensington palace by aditi khanna
ಬ್ರಿಟನ್‌ ಯುವರಾಜ ಪಾಕ್‌ಗೆ ಭೇಟಿ

ಸುಮಾರು 13 ವರ್ಷಗಳ ಬಳಿಕ ಬ್ರಿಟನ್‌ ರಾಜವಂಶಸ್ಥರು ಪಾಕಿಸ್ತಾನಕ್ಕೆ ತೆರಳುತ್ತಿದ್ದಾರೆ. ವಿದೇಶಾಂಗ ಹಾಗೂ ಕಾಮನ್‌ವೆಲ್ತ್‌ ಕಚೇರಿ(ಎಫ್‌ಸಿಒ) ಮನವಿ ಮೇರೆಗೆ ರಾಜವಂಶಸ್ಥರು ಪಾಕ್‌ ಭೇಟಿಗೆ ತೆರಳುತ್ತಿದ್ದಾರೆ. ಉಗ್ರರಿಂದ ದಾಳಿಯ ಆತಂಕದ ಹಿನ್ನೆಲೆಯಲ್ಲಿ ಯುವರಾಜ ವಿಲಿಯಮ್‌ ಹಾಗೂ ಕುಟುಂಬಸ್ಥರು ಪಾಕ್‌ ಭೇಟಿಗೂ ಮುನ್ನ ಒಂದು ವಾರ ತುರ್ತು ಪರಿಸ್ಥಿತಿ ಎದುರಿಸುವ ಬಗ್ಗೆ ತರಬೇತಿ ಪಡೆಯಲಿದ್ದಾರೆ.
ಇಸ್ಲಾಮಾಬಾದ್‌ಗೆ ಬಂದಿಳಿಯಲಿರುವ ವಿಲಿಯಮ್‌ ದಂಪತಿ ನಂತರ ಲಾಹೋರ್‌, ಕ್ವೆಟ್ಟಾ, ಕರಾಚಿ ಹಾಗೂ ಪೇಶಾವರ್‌ಗೆ ಭೇಟಿ ನೀಡಿ ಅಲ್ಲಿನ ಗ್ರಾಮೀಣ ಸಮುದಾಯಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ವಿಲಿಯಮ್‌ ಅವರ ಮಕ್ಕಳು ಪಾಕ್‌ಗೆ ಭೇಟಿ ನೀಡದೆ ಬ್ರಿಟನ್‌ನ ಕೆನ್ಸಿಂಗ್‌ಟನ್‌ ಅರಮನೆಯಲ್ಲಿಯೇ ಉಳಿಯಲಿದ್ದಾರೆ ಎಂದು ತಿಳಿದುಬಂದಿದೆ.
1961, 1997ರಲ್ಲಿ ಬ್ರಿಟನ್‌ ಮಹಾರಾಣಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು ಇನ್ನೂ ಪಾಕಿಸ್ತಾನಿಯರ ನೆನಪಿನಲ್ಲಿ ಹಸಿರಾಗಿದೆ. ಈ ಬಾರಿ ರಾಜವಂಶಸ್ಥರು ಪಾಕ್‌ಗೆ ಭೇಟಿ ನೀಡುತ್ತಿರುವುದು ಉಭಯ ದೇಶಗಳ ನಡುವಿನ ಐತಿಹಾಸಿಕ ಬಾಂಧವ್ಯದ ಪ್ರತಿಬಿಂಬವಾಗಿದೆ ಎಂದು ಬ್ರಿಟನ್‌ನಲ್ಲಿರುವ ಪಾಕಿಸ್ತಾನ ರಾಯಭಾರಿ ಮೊಹಮ್ಮದ್‌ ನಫೀಸ್‌ ಜಕಾರಿಯಾ ಹೇಳಿದ್ದಾರೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಬ್ರಿಟನ್‌ ಯುವರಾಣಿ ಡಯಾನಾ ಆತ್ಮೀಯ ಸ್ನೇಹಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಖಾನ್‌ ಲಾಹೋರ್‌ನಲ್ಲಿ ಕಟ್ಟಿಸಿದ್ದ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರಕ್ಕಾಗಿ ದೇಣಿಗೆ ಸಂಗ್ರಹಿಸಲು 1996ರ ಏಪ್ರಿಲ್‌ ಹಾಗೂ 1997ರ ಮೇನಲ್ಲಿ ಡಯಾನಾ ಪಾಕ್‌ಗೆ ಭೇಟಿ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ