ಆ್ಯಪ್ನಗರ

ಪ್ರಾಂಶುಪಾಲರೇ ಅಕ್ರಮದಲ್ಲಿ ಭಾಗಿ

ಸುಲ್ತಾನ್‌ಪುರದ ಪಂಡಿತ್‌ ಸತ್ಯನಾರಾಯಣ ದ್ವಿವೇದಿ ವಿಶ್ವವಿದ್ಯಾಲಯ ಹಾಗೂ ಪ್ರತಾಪ್‌ಗಡದ ಡಾ. ಸುರೇಂದ್ರ ಚಂದ್ರ ಮಿಶ್ರ ವಿಶ್ವವಿದ್ಯಾಲಯದ ಪ್ರಾಂಶುಪಾಲರೇ ಪರೀಕ್ಷಾ ಅಕ್ರಮಗಳಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.

Navbharat Times 18 May 2018, 3:19 pm
ಸುಲ್ತಾನ್‌ಪುರ: ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪರಸ್ಪರ ನಕಲು ಮಾಡುವುದು, ಚೀಟಿ ಇಡುವುದು ಎಲ್ಲ ಕಂಡಿದ್ದೇವೆ. ಅಷ್ಟೇ ಏಕೆ, ಕೆಲವೊಂದು ಅಧ್ಯಾಪಕರು ಉತ್ತರ ಹೇಳಿಕೊಟ್ಟ ಪ್ರಕರಣಗಳೂ ದಾಖಲಾಗಿದೆ. ಆದರೆ ಉತ್ತರ ಪ್ರದೇಶದ ಸುಲ್ತಾನ್‌ಪುರದ ಪಂಡಿತ್‌ ಸತ್ಯನಾರಾಯಣ ದ್ವಿವೇದಿ ವಿಶ್ವವಿದ್ಯಾಲಯ ಹಾಗೂ ಪ್ರತಾಪ್‌ಗಡದ ಡಾ. ಸುರೇಂದ್ರ ಚಂದ್ರ ಮಿಶ್ರ ವಿಶ್ವವಿದ್ಯಾಲಯದ ಪ್ರಾಂಶುಪಾಲರೇ ಪರೀಕ್ಷಾ ಅಕ್ರಮಗಳಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.
Vijaya Karnataka Web pricipal


ಇಬ್ಬರು ಪ್ರಾಂಶುಪಾಲರ ಅಕ್ರಮ ವೀಡಿಯೋ ಇದೀಗ ವೈರಲ್‌ ಆಗಿದ್ದು, ವಿವಿಯ ಆಡಳಿತ ಮಂಡಳಿಯ ಸಂಪೂರ್ಣ ವೈಫಲ್ಯ ಜಗಜ್ಜಾಹೀರಾಗಿದೆ.

ದ್ವಿವೇದಿ ವಿವಿಯ ಪ್ರಾಂಶುಪಾಲ, ತನ್ನ ಮಗನ ಹಿಂದಿ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಭರ್ತಿ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಅಧ್ಯಾಪಕ ಸಂಘದ ಅಧ್ಯಕ್ಷರೂ ಆಗಿರುವ ಪ್ರಾಂಶುಪಾಲರು ಕೆಲ ಪ್ರಶ್ನೆಗಳಿಗೆ ತಜ್ಞ ಅಧ್ಯಾಪಕರಿಗೆ ಕರೆ ಮಾಡಿ ಉತ್ತರ ತುಂಬುತ್ತಿರುವುದು ಗೊತ್ತಾಗಿದೆ.

ಪ್ರತಾಪ್‌ಗಡದ ಡಾ. ಸುರೇಂದ್ರ ಚಂದ್ರ ಮಿಶ್ರ ವಿವಿಯ ಪ್ರಾಂಶುಪಾಲ, ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ಅಧ್ಯಾಪಕರಲ್ಲೇ ಬರೆಸುವ ನಿಟ್ಟಿನಲ್ಲಿ ಆತನಿಂದ 1 ಸಾವಿರ ರೂ. ಪಡೆಯುತ್ತಿರುವ ದೃಶ್ಯ ಸಿಕ್ಕಿದೆ.

ಮೂಲವರದಿ ಹಾಗೂ ವೀಡಿಯೋ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ