ಆ್ಯಪ್ನಗರ

ಮೈ ತುಂಬಾ ಮಲ ಸುರಿದುಕೊಂಡು ಲಾಕಪ್‌ನಿಂದ ಎಸ್ಕೇಪ್ ಆದ ಕೈದಿ

ಕೈದಿಗಳು ಜೈಲಿನಿಂದ ಎಸ್ಕೇಪ್‌ ಆಗುವ ಸುದ್ದಿಗಳನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ, ಪಶ್ಚಿಮ ಬಂಗಾಳದ ಲಾಕಪ್‌ವೊಂದರಿಂದ ಮೊಹಮ್ಮದ್ ಜಬ್ಬೀರ್ ಎಂಬ ಕೈದಿ ಮಲವನ್ನು ಸುರಿದುಕೊಂಡು ಓಡಿಹೋಗಿದ್ದಾನೆ. ಬಳಿಕ ಅದೇ ಸ್ಥಿತಿಯಲ್ಲಿ ಆತನನ್ನು ಪೊಲೀಸರು ಕೊನೆಗೂ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Ei Samay 13 Feb 2019, 2:46 pm
[This story originally published in Ei Samay on Feb 13, 2019]
Vijaya Karnataka Web ab3565f5-e428-4a44-9979-10682bd24569

ಕೋಲ್ಕತಾ:
ಮೊಹಮ್ಮದ್ ಜಬ್ಬೀರ್ ಎಂಬ ಕೈದಿ ತನ್ನ ಮೈ ತುಂಬಾ ಮಲ ಸುರಿದುಕೊಂಡು ಪೊಲೀಸ್ ಠಾಣೆಯಿಂದ ಎಸ್ಕೇಪ್ ಆಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಮೊಹಮ್ಮದ್ ಜಬ್ಬೀರ್ ಎಂಬಾತನನ್ನು ಪಶ್ಚಿಮ ಬಂಗಾಳದ ತೋಪ್ಸಿಯಾ ಪೊಲೀಸರು ಬಂಧಿಸಿದ್ದರು.

ಪಶ್ಚಿಮ ಬಂಗಾಳದ ತೋಪ್ಸಿಯಾ ಪೊಲೀಸ್‌ ಠಾಣೆಯಲ್ಲಿ ಕೈದಿಗಳಿಗೆ ಪ್ರತ್ಯೇಕ ಶೌಚಾಲಯವಿಲ್ಲದ ಕಾರಣ ಆ ಕಾರಣಕ್ಕೆ ಜೈಲಿನ ಕೋಣೆಯಲ್ಲೇ ಒಂದು ಮುಚ್ಚಿದ ಜಾಗದಲ್ಲಿ ಶೌಚಕ್ಕೆ ಹೋಗಲಾಗುತ್ತದೆ. ಆದರೆ, ಸೋಮವಾರ ಜಬ್ಬೀರ್ ಅದನ್ನು ಬಳಕೆ ಮಾಡುವ ಬದಲು ಲಾಕಪ್ ಕೋಣೆಯಲ್ಲಿ ಎಲ್ಲರಿಗೂ ಕಾಣುವಂತೆ ಶೌಚಕ್ಕೆ ಹೋಗಿದ್ದು, ಬಳಿಕ ಮಲವನ್ನು ಮೈ ತುಂಬಾ ಸುರಿದುಕೊಂಡಿದ್ದಾನೆ.

ಇದೇ ಸ್ಥಿತಿಯಲ್ಲಿ ಜೈಲಿನಲ್ಲಿದ್ದ ಇತರೆ ಆರೋಪಿಗಳಿಗೂ ನಿಮಗೆ ಇದನ್ನು ಸುರಿಯುತ್ತೇನೆ. ಇದು ಬೇಡವೆಂದರೆ ನನಗೆ ಡ್ರಗ್ಸ್ ಕೊಡಿ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಲಾಕಪ್‌ನಲ್ಲಿದ್ದ ಇತರೆ ಆರೋಪಿಗಳಿಗೂ ಹಾಗೂ ಲಾಕಪ್‌ನ ಎಲ್ಲ ಕಡೆ ಮಲವನ್ನು ಸುರಿಯುತ್ತಾನೆ. ಇದರಿಂದ ಆತನ ಜತೆಗಿದ್ದವರು ಅತ್ತಿದ್ದು, ಪೊಲೀಸ್ ಠಾಣೆಯಲ್ಲಿದ್ದ ಪೊಲೀಸರಿಗೂ ಆ ಕೆಟ್ಟ ವಾಸನೆ ತಡೆಯಲು ಸಾಧ್ಯವಾಗದ ಹಾಗೆ ಮಾಡಿದ್ದಾನೆ.

ನಂತರ, ಜಬ್ಬೀರ್ ಹಾಗೂ ಇತರೆ ಕೈದಿಗಳನ್ನು ಕ್ಲೀನ್ ಮಾಡುವಂತೆ ಕಸ ಗುಡಿಸುವವರನ್ನು ಕರೆತಂದಿದ್ದಾರೆ. ಇನ್ನೊಂದೆಡೆ, ಜಬ್ಬೀರ್ ಹತ್ತಿರ ಯಾರೂ ಕುಳಿತುಕೊಳ್ಳಲು ಆಗದ ಕಾರಣ ಆತನನ್ನು ಮೂಲೆಯಲ್ಲಿ ಕೂರುವಂತೆ ಪೊಲೀಸರು ಹೇಳುತ್ತಾರೆ.

ಆ ವೇಳೆ ಜೈಲಿನಿಂದಲೇ ಎಸ್ಕೇಪ್ ಆದ ಜಬ್ಬೀರ್ ಅದೇ ಸ್ಥಿತಿಯಲ್ಲೇ ಪಾರ್ಕ್ ಸರ್ಕಸ್ ಪ್ರದೇಶಕ್ಕೆ ನುಗ್ಗುತ್ತಾನೆ. ಜನಜಂಗುಳಿಯ ಪ್ರದೇಶವಾದ್ದರಿಂದ ಪೊಲೀಸರು ಆತನನ್ನು ಹಿಡಿಯಲು ಆ ವೇಳೆಗೆ ಸಾಧ್ಯವಾಗುವುದಿಲ್ಲ. ಇನ್ನು, ಮತ್ತೊಂದು ಪೊಲೀಸ್ ಠಾಣೆ ಪ್ರದೇಶದಲ್ಲಿ ಕೈದಿಯನ್ನು ತೋಪ್ಸಿಯಾ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೊಂದೆಡೆ, ಪೊಲೀಸರು ಆತನನ್ನು ಹಿಡಿದ ವೇಳೆಯಲ್ಲೂ ಕೈದಿ ಜಬ್ಬೀರ್ ಅದೇ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಲವೆಲ್ಲ ಒಣಗಿ ಆತನ ಮೈಗೆ ಅಂಟಿಕೊಂಡಿತ್ತು. ನಂತರ, ಆತನನ್ನು ಪೊಲೀಸ್ ಠಾಣೆಗೆ ಕರೆದುಹೋದ ಪೊಲೀಸರು ಆತನನ್ನು ಶುಚಿ ಮಾಡಿ ಲಾಕಪ್‌ಗೆ ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ