ಆ್ಯಪ್ನಗರ

'ಆಯುಷ್ಮಾನ್‌ ಭಾರತ್‌' ಗೆ ಖಾಸಗಿ ವಲಯ ಆಕ್ಷೇಪ

ಅಪೋಲೋ, ಫೋರ್ಟಿಸ್‌, ನಾರಾಯಣ ಹೃದಯಾಲಯ ಸೇರಿದಂತೆ ಕೆಲ ಖಾಸಗಿ ಆಸ್ಪತ್ರೆಗಳು 'ಆಯುಷ್ಮಾನ್‌ ಭಾರತ್‌ 'ಯೋಜನೆಯಲ್ಲಿ ಚಿಕಿತ್ಸೆಗೆ ದರ ನಿಗದಿ ಮಾಡಿರುವುದಕ್ಕೆ ಆಕ್ಷೇಪ ಎತ್ತಿದ್ದಾರೆ.

TIMESOFINDIA.COM 2 Jun 2018, 11:25 am
ಹೊಸದಿಲ್ಲಿ: ಎಲ್ಲರಿಗೂ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ನೀಡುವ ಉದ್ದೇಶ ಹೊಂದಿರುವ 'ಆಯುಷ್ಮಾನ್‌ ಭಾರತ್‌ 'ಯೋಜನೆಯಡಿ ನಿಗದಿಪಡಿಸಲಾಗಿರುವ ವೈದ್ಯಕೀಯ ಚಿಕಿತ್ಸಾ ದರಕ್ಕೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳು ಅಪಸ್ವರ ಎತ್ತಿವೆ.
Vijaya Karnataka Web modicare


ಅಪೋಲೋ, ಫೋರ್ಟಿಸ್‌, ನಾರಾಯಣ ಹೃದಯಾಲಯ ಸೇರಿದಂತೆ ಇನ್ನಿತರ ಕೆಲ ಖಾಸಗಿ ಆಸ್ಪತ್ರೆಗಳು 'ಆಯುಷ್ಮಾನ್‌ ಭಾರತ್‌' ಯೋಜನೆಯಡಿ ನಿಗದಿಗೊಳಿಸಿರುವ ಚಿಕಿತ್ಸಾ ದರದ ಬಗ್ಗೆ ಆಕ್ಷೇಪಿಸಿವೆ.

ಈ ಸಂಬಂಧ ನೀತಿ ಆಯೋಗ ಹಾಗೂ ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿರುವ ಮನವಿ ಸಲ್ಲಿಸಿರುವ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು, ದರ ನಿಗದಿ ಮಾಡುವುದರಿಂದ ಗುಣಮಟ್ಟ ಹಾಗೂ ಹೊಸ ತಂತ್ರಜ್ಞಾನಗಳನ್ನು ಅಳವಡಿಸುವಲ್ಲಿ ತೊಡಕಾಗುತ್ತದೆ ಎಂದು ಹೇಳಿದ್ದಾರೆ.

'ಆಯುಷ್ಮಾನ್‌ ಭಾರತ್‌' ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಂದು ಭೂಷಣ್‌, ಕೆಲವು ಪ್ರಮುಖ ಶಸ್ತ್ರಚಿಕಿತ್ಸೆಗಳಿಗೆ ದರ ನಿಗದಿಪಡಿಸಲಾಗಿದೆ. ಈ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಎಚ್ಚರಿಕೆ ವಹಿಸಲಾಗಿದ್ದು, ರಾಷ್ಟ್ರ ಮಟ್ಟದಲ್ಲಿ ದರ ನಿಗದಿ ಮಾಡಲಾಗಿದೆ. ಆಯಾ ರಾಜ್ಯಗಳಲ್ಲಿ, ಶೇ.10ರಷ್ಟು ದರ ಏರಿಳಿತಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಗುಣಮಟ್ಟದ ಆರೋಗ್ಯ ಸೇವೆಯ ಅಗತ್ಯವಿದ್ದಲ್ಲಿ ಹಣ ಖರ್ಚು ಮಾಡುವುದು ಅನಿವಾರ್ಯ. ಶಸ್ತ್ರಚಿಕಿತ್ಸೆಗಳಿಗೆ 'ಆಯುಷ್ಮಾನ್‌ ಭಾರತ್‌'ನ ಅಡಿ ನಿಗದಿ ಮಾಡಲಾದ ದರ ತುಂಬಾ ಕಡಿಮೆ ಇದೆ. ಸರಕಾರ ಈ ದರಗಳನ್ನು ಪುನರ್‌ ಪರಿಶೀಲಿಸಬೇಕು ಎಂದು ನಾರಾಯಣ ಹೆಲ್ತ್‌ ಸಂಸ್ಥೆ ಅಧ್ಯಕ್ಷ ದೇವಿ ಶೆಟ್ಟಿ ಹೇಳಿದ್ದಾರೆ.

ಆರೋಗ್ಯ ಇಲಾಖೆ ಹಾಗೂ ನೀತಿ ಆಯೋಗ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಯ ಅಡಿ 1,354 ಪ್ಯಾಕೇಜ್‌ ಆಧಾರಿತ ಚಿಕಿತ್ಸೆಗಳಿಗೆ ದರ ನಿಗದಿ ಮಾಡಿದೆ.' ಆಯುಷ್ಮಾನ್‌ ಭಾರತ್‌' ಮೂಲಕ ದೇಶದ 10.74 ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ವೆರೆಗಿನ ಆರೋಗ್ಯ ವಿಮಾ ಸೌಲಭ್ಯ ಸಿಗುವಂತೆ ಯೋಜನೆ ರೂಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ