ಆ್ಯಪ್ನಗರ

'ಯೋಗಿ ಸರ್ಕಾರದ ದ್ವೇಷ ಸಾಧನೆಗೆ ಯುಪಿ ಪೊಲೀಸರು ಶಾಮೀಲು'..! ಪ್ರಿಯಾಂಕಾ ಗಂಭೀರ ಆರೋಪ

'ಈ ಕೇಸರಿ ಯೋಗಿಯವರ ಸ್ವತ್ತಲ್ಲ, ದೇಶದ ಸ್ವತ್ತು. ಕೇಸರಿ ಹಿಂದೂ ಧರ್ಮದ ಸಂಕೇತ. ಯೋಗಿ ಆದಿತ್ಯನಾಥ್ ಧರ್ಮವನ್ನು ಪಾಲಿಸಬೇಕು. ಹಿಂದೂ ಧರ್ಮದಲ್ಲಿ ಶತೃತ್ವಕ್ಕೆ, ದ್ವೇಷ ಸಾಧನೆಗೆ ಹಾಗೂ ಹಿಂಸೆಗೆ ಅವಕಾಶವಿಲ್ಲ' - ಪ್ರಿಯಾಂಕಾ ಗಾಂಧಿ

Vijaya Karnataka Web 30 Dec 2019, 8:09 pm
ಹೊಸ ದಿಲ್ಲಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಉತ್ತರ ಪ್ರದೇಶ ಪೊಲೀಸ್ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹರಿಹಾಯ್ದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟಗಾರ ಮೇಲೆ ಕ್ರೌರ್ಯ ಪ್ರದರ್ಶಿಸಲಾಗುತ್ತಿದೆ ಎಂದು ಕಿಡಿಕಾರಿರುವ ಪ್ರಿಯಾಂಕಾ ಗಾಂಧಿ, ಯೋಗಿ ಸರ್ಕಾರದ ದ್ವೇಷ ಸಾಧನೆಗಾಗಿ ಉತ್ತರ ಪ್ರದೇಶ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ಧಾರೆ ಎಂದು ಆರೋಪಿಸಿದ್ಧಾರೆ.
Vijaya Karnataka Web priyanka gandhi
'ಯೋಗಿ ಸರ್ಕಾರದ ದ್ವೇಷ ಸಾಧನೆಗೆ ಯುಪಿ ಪೊಲೀಸರು ಶಾಮೀಲು'..! ಪ್ರಿಯಾಂಕಾ ಗಂಭೀರ ಆರೋಪ


ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ್ದಾರೆ ಎನ್ನಲಾದ ಹೇಳಿಕೆ, ಇದೀಗ ಕಾಂಗ್ರೆಸ್‌ಗೆ ಅಸ್ತ್ರವಾಗಿ ಪರಿಣಮಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ನಡೆಸಿ ಬಂಧನಕ್ಕೆ ಒಳಗಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರನ್ನು ಭೇಟಿ ಮಾಡಲು ಹೋಗುತ್ತಿದ್ದ ವೇಳೆ ತಮ್ಮ ಕತ್ತನ್ನು ಹಿಡಿದ ಪೊಲೀಸ್ ಅಧಿಕಾರಿಯೊಬ್ಬ ದೌರ್ಜನ್ಯ ಎಸಗಿದ್ದಾನೆ ಎಂದೂ ಪ್ರಿಯಾಂಕಾ ಗಾಂಧಿ ಆಪಾದಿಸಿದ್ಧಾರೆ.

ತಮ್ಮ ಭದ್ರತೆ ಕುರಿತಾದ ಆತಂಕಗಳನ್ನು ತಳ್ಳಿಹಾಕಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಭಾರತದಲ್ಲಿ ದ್ವೇಷ ರಾಜಕಾರಣಕ್ಕೆ ಹಿಂಸೆಗೆ ಜಾಗವಿಲ್ಲ ಎಂದು ಹೇಳಿದ್ದಾರೆ.

'ಸಿಎಎ ವಿರೋಧಿ ಪ್ರತಿಭಟನೆ ವೇಳೆ ಮಡಿದವರ, ಗಾಯಗೊಂಡವರ ನೆರವಿಗೆ ನಿಲ್ಲಿ': ಕೈ ನಾಯಕರಿಗೆ ರಾಹುಲ್ ಕರೆ

ನನ್ನ ಭದ್ರತೆ ದೊಡ್ಡ ವಿಚಾರವೇ ಅಲ್ಲ ಎಂದಿರುವ ಪ್ರಿಯಾಂಕಾ, ನನಗೆ ಭದ್ರತಾ ಸಿಬ್ಬಂದಿ ಕೂಡಾ ಬೇಕಿಲ್ಲ ಎಂದಿದ್ದಾರೆ. ಆದ್ರೆ, ಸಾಮಾನ್ಯ ಜನರ ಭದ್ರತೆ ಮುಖ್ಯ ಎಂದಿರುವ ಪ್ರಿಯಾಂಕಾ ಗಾಂಧಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ 5,500 ಮಂದಿ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಪೊಲೀಸರ ವಶದಲ್ಲಿರುವ ಪ್ರತಿಭಟನಾಕಾರರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದೂ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

ಎನ್‌ಪಿಆರ್‌, ಏನ್‌ಆರ್‌ಸಿಯಿಂದ ನೋಟು ನಿಷೇಧಕ್ಕಿಂತ ಹೆಚ್ಚಿನ ಹಾನಿ: ರಾಹುಲ್‌ ಗಾಂಧಿ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೇಸರಿ ಉಡುಪನ್ನು ಧರಿಸುತ್ತಾರೆ. ಈ ಕೇಸರಿ ಯೋಗಿಯವರ ಸ್ವತ್ತಲ್ಲ, ದೇಶದ ಸ್ವತ್ತು ಎಂದಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಕೇಸರಿ ಹಿಂದೂ ಧರ್ಮದ ಸಂಕೇತ ಎಂದಿದ್ಧಾರೆ. ಯೋಗಿ ಆದಿತ್ಯನಾಥ್ ಧರ್ಮವನ್ನು ಪಾಲಿಸಬೇಕು ಎಂದು ತಾಕೀತು ಮಾಡಿದ ಪ್ರಿಯಾಂಕಾ ಗಾಂಧಿ, ಹಿಂದೂ ಧರ್ಮದಲ್ಲಿ ಶತೃತ್ವಕ್ಕೆ, ದ್ವೇಷ ಸಾಧನೆಗೆ ಹಾಗೂ ಹಿಂಸೆಗೆ ಅವಕಾಶವಿಲ್ಲ ಎಂದಿದ್ದಾರೆ.

ಏನಿದು ರಾಷ್ಟ್ರೀಯ ಜನಸಂಖ್ಯಾ ನೋಂದಣಿ? 10 ವರ್ಷಕ್ಕೊಮ್ಮೆ ನಡೆಯುವ ಜನಗಣತಿಗಿಂತಾ ಭಿನ್ನವೇ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ