ಆ್ಯಪ್ನಗರ

ಇಟಲಿ ಫುಟ್‌ಬಾಲ್ ತಂಡದ ಅಭಿಮಾನಿಯಾಗಿದ್ದರಂತೆ ಇಂದಿರಾ ಗಾಂಧಿ!

ಹೆಚ್ಚಿನ ಜನರಿಗೆ ಗೊತ್ತಿರಲಿಕ್ಕಿಲ್ಲ ನಮ್ಮ ಅಜ್ಜಿ ಫುಟ್‌ಬಾಲ್ ವಿಶ್ವ ಕಪ್ ನೋಡುತ್ತಿದ್ದರು.

Vijaya Karnataka Web 21 Apr 2019, 2:08 pm
ಹೊಸದಿಲ್ಲಿ: ತಮ್ಮ ಅಜ್ಜಿ , ಮಾಜಿ ಪ್ರಧಾನಿ ಇಂದಿರಾ ಗಾಂಧಿ ಫುಟ್‌ಬಾಲ್ ಅಭಿಮಾನಿಯಾಗಿದ್ದು, ಇಟಲಿ ತಂಡಕ್ಕೆ ಸಫೋರ್ಟ್ ಮಾಡುತ್ತಿದ್ದರು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಹಿರಂಗ ಪಡಿಸಿದ್ದಾರೆ
Vijaya Karnataka Web priyanka

.
ಹೆಚ್ಚಿನ ಜನರಿಗೆ ಗೊತ್ತಿರಲಿಕ್ಕಿಲ್ಲ ನಮ್ಮ ಅಜ್ಜಿ ಫುಟ್‌ಬಾಲ್ ವಿಶ್ವ ಕಪ್ ನೋಡುತ್ತಿದ್ದರು. 1982ರಲ್ಲಿ ನಾನು, ಅಣ್ಣ, ಅಜ್ಜಿ ಎಲ್ಲ ಸೇರಿ ಫುಟ್‌ಬಾಲ್ ವಿಶ್ವ ಕಪ್ ಫೈನಲ್ ನೋಡುತ್ತಿದ್ದೆವು. ಆಗ ನೀನು ಯಾವ ತಂಡಕ್ಕೆ ಸಪೋರ್ಟ್ ಮಾಡುತ್ತೀಯ ಎಂದು ಕೇಳಿದೆ. ಅದಕ್ಕವರು ಭಾರತ ಆಡುತ್ತಿಲ್ಲ, ಹೀಗಾಗಿ ನಾನು ಇಟಲಿ ತಂಡಕ್ಕೆ ಸಫೋರ್ಟ್ ಮಾಡುತ್ತೇನೆ ಎಂದರು, ಎಂದು ಪ್ರಿಯಾಂಕಾ ನೆನಪಿಸಿಕೊಂಡಿದ್ದಾರೆ.


ತಮ್ಮ ಪುತ್ರ ಮತ್ತು ಸಹೋದರ ರಾಹುಲ್ ಕೂಡ ಫುಟ್‌ಬಾಲ್ ಆಟದ ಅಭಿಮಾನಿಗಳು ಎಂದವರು ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ