ಆ್ಯಪ್ನಗರ

ಖಲಿಸ್ತಾನ್‌ ಬೆಂಬಲಿಗರ ಬೆದರಿಕೆ: ರಾಯಭಾರ ಕಚೇರಿಗಳಿಗೆ ಭದ್ರತೆ

ಅಮೆರಿಕ ಮತ್ತು ಕೆನಡಾದ ಭಾರತೀಯ ಧೂತಾವಾಸ ಕಚೇರಿಗಳು ಭದ್ರತೆ ಒದಗಿಸುವಂತೆ ಅಲ್ಲಿನ ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳಲ್ಲಿ ಮನವಿ ಮಾಡಿವೆ.

Vijaya Karnataka 21 Jan 2019, 5:00 am
ಚಂಡೀಗಢ: ಅಮೆರಿಕ ಮತ್ತು ಕೆನಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿ 70ನೇ ಗಣರಾಜ್ಯ ದಿನೋತ್ಸವ ಆಚರಣೆಗೆ ಅಡಚಣೆ ಮಾಡುವುದಾಗಿ ಖಲಿಸ್ತಾನ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
Vijaya Karnataka Web pro khalistan group threatens to disrupt r day event indian missions abroad seek security
ಖಲಿಸ್ತಾನ್‌ ಬೆಂಬಲಿಗರ ಬೆದರಿಕೆ: ರಾಯಭಾರ ಕಚೇರಿಗಳಿಗೆ ಭದ್ರತೆ


ಈ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಕೆನಡಾದ ಭಾರತೀಯ ಧೂತಾವಾಸ ಕಚೇರಿಗಳು ಭದ್ರತೆ ಒದಗಿಸುವಂತೆ ಅಲ್ಲಿನ ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳಲ್ಲಿ ಮನವಿ ಮಾಡಿವೆ.

ಅಮೆರಿಕದ ವಾಷಿಂಗ್ಟಟನ್‌, ನ್ಯೂಯಾರ್ಕ್‌, ಹೋಸ್ಟನ್‌, ಸ್ಯಾನ್‌ ಫ್ರಾನ್ಸಿಸ್ಕೋ, ಶಿಕಾಗೊ ಮತ್ತು ಅಟ್ಲಾಂಟದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಕೆನಡಾದ ಟೊರಾಂಟೊ, ಒಟ್ಟಾವಾಮತ್ತು ವಾನ್‌ಕೊವುರ್‌ನಲ್ಲಿ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತೆ ನಡೆದಿದೆ. ಟೊರಾಂಟೊ ಮತ್ತು ವಾನ್‌ಕೊವುರ್‌ನಲ್ಲಿ ಅತಿ ಹೆಚ್ಚು ಭಾರತೀಯರು ಅದರಲ್ಲೂ ಸಿಖ್‌ ಸಮುದಾಯದವರು ವಾಸವಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ