ಆ್ಯಪ್ನಗರ

9,603 ಗಡಿ ರಕ್ಷಕರಿಗೆ ಭಡ್ತಿ: ಕೇಂದ್ರ ಒಪ್ಪಿಗೆ

ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ದೇಶದ ಮೂರು ಗಡಿ ಕಾವಲು ಪಡೆಗಳ ಸುಮಾರು 9,600 ಅರೆಸೇನಾ ಯೋಧರಿಗೆ ಭಡ್ತಿ ನೀಡುವ ಪ್ರಸ್ತಾವನೆಗೆ ಕೊನೆಗೂ ಕೇಂದ್ರ ಸರಕಾರ ಅನುಮೋದನೆ ನೀಡಿದೆ.

ಏಜೆನ್ಸೀಸ್ 6 Mar 2017, 11:23 am
ಹೊಸದಿಲ್ಲಿ: ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ದೇಶದ ಮೂರು ಗಡಿ ಕಾವಲು ಪಡೆಗಳ ಸುಮಾರು 9,600 ಅರೆಸೇನಾ ಯೋಧರಿಗೆ ಭಡ್ತಿ ನೀಡುವ ಪ್ರಸ್ತಾವನೆಗೆ ಕೊನೆಗೂ ಕೇಂದ್ರ ಸರಕಾರ ಅನುಮೋದನೆ ನೀಡಿದೆ.
Vijaya Karnataka Web promotion to soldiers
9,603 ಗಡಿ ರಕ್ಷಕರಿಗೆ ಭಡ್ತಿ: ಕೇಂದ್ರ ಒಪ್ಪಿಗೆ


ಗಡಿ ಕಾಯುವ ಜವಾಬ್ದಾರಿಯ ನಾನಾ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಸೇನಾ ಪಡೆಗಳ ಯೋಧರು ತಮ್ಮ ಹುದ್ದೆಗಳಲ್ಲಿ ಭಡ್ತಿ ಪಡೆಯಲಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಮಾರ್ಚ್‌ 2ರಂದು ಈ ಸಂಬಂಧ ಆದೇಶ ಹೊರಡಿಸಿದ್ದು,ತಕ್ಷಣದಿಂದಲೇ ಅನ್ವಯವಾಗುವಂತೆ ಜಾರಿಗೆ ಬಂದಿದೆ. ಸರಕಾರದ ಈ ನಿರ್ಧಾರದಿಂದ ಮೂರು ಗಡಿ ಕಾವಲು ಪಡೆಗಳ ಒಟ್ಟು 9,603 ಸಿಬ್ಬಂದಿಗೆ ಭಡ್ತಿ ಸಿಗಲಿದೆ. ಸಶಸ್ತ್ರ ಸೀಮಾಬಲದ 4,095 ಸಿಬ್ಬಂದಿ, ಇಂಡೋ-ಟಿಬೆಟನ್‌ ಗಡಿ ಪೊಲೀಸ್‌ ಪಡೆಯ 3,024 ಸಿಬ್ಬಂದಿ ಹಾಗೂ ಅಸ್ಸಾಂ ರೈಫಲ್ಸ್‌ನ 2,484 ಸಿಬ್ಬಂದಿಗೆ ಭಡ್ತಿ ಲಭಿಸಲಿದೆ. 2012ರಿಂದಲೂ ಈ ಸಿಬ್ಬಂದಿಗೆ ಯಾವುದೇ ಭಡ್ತಿ ಸಿಕ್ಕಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ