ಆ್ಯಪ್ನಗರ

ಎನ್‌ಐಎ ಭರ್ಜರಿ ಬೇಟೆ: ಪುಲ್ವಾಮಾ ದಾಳಿಗೆ ನೆರವು ನೀಡಿದ್ದ ಉಗ್ರ ಬಂಧನ

ಶಾಕಿರ್‌ ಸ್ಫೋಟಕ್ಕೆ ಬಳಸಿದ ರಾಸಾಯನಿಕಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ. ಆರ್‌ಡಿಎಕ್ಸ್‌, ನೈಟ್ರೋ-ಗ್ಲಿಸರೀನ್‌, ಅಮ್ಮೊನಿಯಂ ನೈಟ್ರೇಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದೆ. ದಾಳಿ ನಡೆದ ಸ್ಥಳಕ್ಕಿಂತ 500 ಮೀ. ಮುನ್ನ ಆದಿಲ್‌ ಚಲಾಯಿಸುತ್ತಿದ್ದ ವಾಹನದಿಂದ ಕೆಳಗೆ ಇಳಿದುಕೊಂಡ

Vijaya Karnataka Web 28 Feb 2020, 9:53 pm
ಶ್ರೀನಗರ: 40 ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದಿದ್ದ ಪುಲ್ವಾಮದ ಆತ್ಮಹತ್ಯಾ ದಾಳಿಗೆ ನೆರವು ನೀಡಿದ್ದ ಜೈಷೆ ಮೊಹಮ್ಮದ್‌ ಉಗ್ರ ಶಾಕಿರ್‌ ಬಶೀರ್‌ ಮಾಗ್ರೆಯನ್ನು (22) ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
Vijaya Karnataka Web ಪುಲ್ವಾಮಾ ದಾಳಿ
ಪುಲ್ವಾಮಾ ದಾಳಿ


ಪುಲ್ವಾಮ ದಾಳಿಕೋರ ಆದಿಲ್‌ ಅಹ್ಮದ್‌ ದರ್‌ಗೆ ಅಗತ್ಯ ಸಾರಿಗೆ ಸಹಕಾರ ಮತ್ತು ವಾಸ್ತವ್ಯವನ್ನು ಶಾಕಿರ್‌ ಒದಗಿಸಿದ್ದ. ದಾಳಿಗೆ ಉಗ್ರ ದರ್‌ ಬಳಸಿದ್ದ ಈಕೋ ಕಾರನ್ನು ಅಗತ್ಯತೆಗೆ ತಕ್ಕಂತೆ ಮಾರ್ಪಾಡು ಮಾಡಿ ಅದಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಳವಡಿಸುವಲ್ಲಿ ಶಾಕಿರ್‌ ಪ್ರಮುಖ ಪಾತ್ರ ವಹಿಸಿದ್ದ ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಾಥಮಿಕ ಹಂತದ ವಿಚಾರಣೆ ವೇಳೆ ಹಲವು ಮಹತ್ವದ ಸಂಗತಿಗಳನ್ನು ಶಾಕಿರ್‌ ಬಹಿರಂಗಪಡಿಸಿದ್ದಾನೆ.

ಪುಲ್ವಾಮ ದಾಳಿಕೋರ ಆದಿಲ್‌ ಹಾಗೂ ಉಗ್ರ ಮೊಹಮ್ಮದ್‌ ಉಮರ್‌ ಫಾರೂಕ್‌ಗೆ 2018ರ ಅಂತ್ಯದಿಂದ 2019ರ ಫೆಬ್ರವರಿಯಲ್ಲಿದಾಳಿ ನಡೆಸುವ ತನಕ ತನ್ನ ಮನೆಯಲ್ಲಿಯೇ ಆಶ್ರಯ ನೀಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ವಿಶೇಷ ನ್ಯಾಯಾಲಯ ಶಾಕಿರ್‌ನನ್ನು 15 ದಿನಗಳ ವಶಕ್ಕೆ ಎನ್‌ಐಎಗೆ ವಹಿಸಿದೆ.

ಆನ್‌ಲೈನ್‌ನಲ್ಲಿ ಸ್ಫೋಟಕಗಳ ಖರೀದಿ

ವಿಚಾರಣೆ ವೇಳೆ ಶಾಕಿರ್‌ ಸ್ಫೋಟಕ್ಕೆ ಬಳಸಿದ ರಾಸಾಯನಿಕಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ.

ಆರ್‌ಡಿಎಕ್ಸ್‌, ನೈಟ್ರೋ-ಗ್ಲಿಸರೀನ್‌, ಅಮ್ಮೊನಿಯಂ ನೈಟ್ರೇಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದೆ. ದಾಳಿ ನಡೆದ ಸ್ಥಳಕ್ಕಿಂತ 500 ಮೀ. ಮುನ್ನ ಆದಿಲ್‌ ಚಲಾಯಿಸುತ್ತಿದ್ದ ವಾಹನದಿಂದ ಕೆಳಗೆ ಇಳಿದುಕೊಂಡ ಎಂದು ಎನ್‌ಐಎ ಅಧಿಕಾರಿಗಳಿಗೆ ಉಗ್ರ ಶಾಕಿರ್‌ ತಿಳಿಸಿದ್ದಾನೆ ಎನ್ನಲಾಗಿದೆ.

ಮೃತ ಆದಿಲ್‌ ದರ್‌, ಐಇಡಿ ಎಕ್ಸ್‌ಪರ್ಟ್‌ ಕಮ್ರಾನ್‌ ಜತೆಗೂಡಿ ಉಗ್ರ ಉಮ್ಮರ್‌ ಫಾರೂಕ್‌ ಹಾಗೂ ಶಾಕಿರ್‌ ಪುಲ್ವಾಮ ದಾಳಿಯನ್ನು ಕಾರ್ಯಗತಗೊಳಿಸಿದ್ದಾರೆ ಎಂದು ಈ ಮುನ್ನವೇ ಎನ್‌ಐಎ ಸರಕಾರಕ್ಕೆ ವರದಿ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ