ಆ್ಯಪ್ನಗರ

ಉಗ್ರರ ವಿರುದ್ಧ ವಂದೇ ಮಾತರಂ

ಪಾಕ್‌ ಪ್ರಚೋದಿತ ದಾಳಿಯಿಂದ ರೊಚ್ಚಿಗೆದ್ದಿರುವ ದೇಶವಾಸಿಗಳು, ಒಂದೇ ಭಾವದಲ್ಲಿ ಕಣ್ಣೀರು ಸುರಿಸಿದ್ದಾರಲ್ಲದೇ, ಏಕಕಂಠದಲ್ಲಿ ಪಾಕ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸರಕಾರವನ್ನು ಒಕ್ಕೊರಲಿನಿಂದಲೇ ಆಗ್ರಹಿಸಿದ್ದಾರೆ.

Vijaya Karnataka 17 Feb 2019, 7:32 am
ಹೊಸದಿಲ್ಲಿ: ಕುಲ ಜಾತಿಗಳೆಲ್ಲವೂ ಮರೆತು/ ಭಾಷೆ ಪ್ರಾಂತ್ಯವ ಭೇದವ ತೊರೆದು/ ಗಡಿ ನೆಲದಿ ಮಡಿದವರೆಲ್ಲಾ / ವೀರ ಧೀರ ಭಾರತ ವಾಸಿಗಳು/ ಅವರಿಗಾಗಿ ಸುರಿಸಿ ಒಂದು ಹನಿ ಕಣ್ಣೀರು... !
Vijaya Karnataka Web pulwama_1550215610_725x725


ಪುಲ್ವಾಮಾ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಯೋಧರನ್ನು ಶನಿವಾರ ಭಾರವಾದ ಹೃದಯದಿಂದ ಕಳುಹಿಸಿಕೊಟ್ಟಾಗ, ಪ್ರಸಿದ್ಧ ದೇಶಭಕ್ತಿ ಗೀತೆ ಪ್ರದೀಪ್‌ ಅವರ-ಏ ಮೇರೆ ವತನ್‌ ಕೆ ಲೋಗೋ, ಝರಾ ಆಂಖ್‌ ಮೇ ಭರುಲೋ ಪಾನೀ(ಓ ನನ್ನ ದೇಶ ಬಾಂಧವರೇ/ ಕಣ್ಣಿರ ಕಥೆ ಇದ ಕೇಳಿ/ ಈ ದೇಶಕ್ಕಾಗಿ ನಡೆದ ವೀರ ಯೋಧರ ಕಥೆ ಕೇಳಿ) ನೆನಪಾಯಿತು. ಕಣ್ಣೀರು ಸುರಿಸಿ ಎಂದು ಯಾರೇನೂ ಹೇಳಲಿಲ್ಲ. ಆದರೆ, ಇಡೀ ದೇಶ ಅವರಿಗಾಗಿ ಅಶ್ರುತರ್ಪಣ ಸಲ್ಲಿಸಿತು.

ಪಾಕ್‌ ಪ್ರಚೋದಿತ ದಾಳಿಯಿಂದ ರೊಚ್ಚಿಗೆದ್ದಿರುವ ದೇಶವಾಸಿಗಳು, ಒಂದೇ ಭಾವದಲ್ಲಿ ಕಣ್ಣೀರು ಸುರಿಸಿದ್ದಾರಲ್ಲದೇ, ಏಕಕಂಠದಲ್ಲಿ ಪಾಕ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸರಕಾರವನ್ನು ಒಕ್ಕೊರಲಿನಿಂದಲೇ ಆಗ್ರಹಿಸಿದ್ದಾರೆ. ಜನರ ಸಿಟ್ಟು-ಸೆಡವು, ರೋಷಾವೇಶ,ಆಕ್ರೋಶ ಎಲ್ಲವೂ ದೇಶಪ್ರೇಮವಾಗಿ ಎಚ್ಚರಗೊಂಡಿದ್ದು, ಸಾಮಾಜಿಕ ಮಾಧ್ಯಮದ ಮೂಲಕ ಪ್ರಕಟವಾಗಿದೆ. ಯೋಧರ ಬಲಿದಾನದಿಂದ ಉಂಟಾಗಿರುವ ದುಃಖ ಇಡೀ ದೇಶವನ್ನು ಒಗ್ಗೂಡಿಸಿದ್ದು, ಎಚ್ಚೆತ್ತ ಎಲ್ಲ ರಾಜಕೀಯ ಪಕ್ಷಗಳು ಕೂಡ ದೇಶವಾಸಿಗಳ ಭಾವನೆಯೊಟ್ಟಿಗೆ ನಿಂತಿವೆ.

ಫೆ. 14ರ ಪುಲ್ವಾಮಾ ದಾಳಿಯಲ್ಲಿ ಮೃತರಾದ ಎಲ್ಲ 40 ಯೋಧರ ಪಾರ್ಥಿವ ಶರೀರಗಳನ್ನು ಅವರವರ ಹುಟ್ಟೂರಿನಲ್ಲಿ ಸಕಲ ಸರಕಾರಿ ಮರ್ಯಾದೆಗಳೊಂದಿಗೆ ನಡೆಸಲಾಯಿತು. ಎಲ್ಲ ಕಡೆಯೂ ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯ ಜನ ಯೋಧರ ಅಂತಿಮ ದರ್ಶನ ಪಡೆದರಲ್ಲದೇ, ಮೆರವಣಿಗೆಯಲ್ಲಿ ಸಾಗಿ ಯೋಧರಿಗೆ ಜೈಕಾರ ಹಾಕಿದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲ ಕಡೆಯೂ ಜನರು ಪುಲ್ವಾಮಾ ಬಲಿದಾನದ ಯೋಧರಿಗಾಗಿ ಕಣ್ಣೀರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ